ಇಂಡೋನೇಷ್ಯಾದಲ್ಲಿ ಭೀಕರ ಸುನಾಮಿ

Dec 25, 2018, 12:28 PM IST

ಪ್ರವಾಸಿಗರ ನೆಚ್ಚಿನ ತಾಣವಾದ ಇಂಡೋನೇಷ್ಯಾದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಿಂದ ಸೃಷ್ಟಿಯಾದ ಸುನಾಮಿಯಲ್ಲಿ ಸಾವಿಗೀಡಾದವರ ಸಂಖ್ಯೆ 373 ಕ್ಕೆ ಏರಿಕೆಯಾಗಿದೆ. ಮುನ್ಸೂಚನೆಯಿಲ್ಲದೆ ಸಂಭವಿಸಿದ ಈ ದುರಂತದಲ್ಲಿ 1500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಏತನ್ಮಧ್ಯೆ, ಈ ದುರ್ಘಟನೆಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆಯನ್ನು ಸರ್ಕಾರ ಕ್ಷಿಪ್ರಗೊಳಿಸಿದೆ. ಇನ್ನು ಜಾವಾದ ಪಶ್ಚಿಮ ಕರಾವಳಿ ತೀರದಲ್ಲಿನ ನೂರಾರು ಕಟ್ಟಡಗಳು ಕುಸಿದಿವೆ.