ವಿಶ್ವಸಂಸ್ಥೆ ಚುನಾವಣೆಯಲ್ಲಿ ಪರಾಕ್ರಮ ಮೆರೆದ ಭಾರತ

By Web DeskFirst Published Oct 13, 2018, 8:15 AM IST
Highlights

ವಿಶ್ವಸಂಸ್ಥೆ ಚುನಾವಣೆಯಲ್ಲಿ ಭಾರತ ಪರಾಕ್ರಮ ಮೆರೆದಿದೆ.

ನವದೆಹಲಿ, [ಅ.13]: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ನಡೆದ ಚುನಾವಣೆಯಲ್ಲಿ ಭಾರತ ಗೆಲುವು ಸಾಧಿಸಿದೆ.

 2019ರ ಜ.1ರಿಂದ ಮೂರು ವರ್ಷಗಳ ಕಾಲ ಮಂಡಳಿಯ ಸದಸ್ಯರಾಷ್ಟ್ರವಾಗಿ ಕಾರ್ಯನಿರ್ವಹಿಸಲಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ 18 ಹೊಸ ಸದಸ್ಯರ ಆಯ್ಕೆಗೆ 193 ಸದಸ್ಯ ರಾಷ್ಟ್ರಗಳ ಸಾಮಾನ್ಯಸಭೆಯಲ್ಲಿ ಮತದಾನ ನಡೆಸಲಾಗಿತ್ತು. 

ಏಷ್ಯಾ ಪೆಸಿಫಿಕ್‌ ವಿಭಾಗದಲ್ಲಿ ಭಾರತ 188 ಮತಗಳನ್ನು ಪಡೆದು ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾಗಿದೆ. 2006ರಲ್ಲಿ ಸ್ಥಾಪನೆಯಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ 47 ಸದಸ್ಯರನ್ನು ಒಳಗೊಂಡಿದೆ. ಇದರಲ್ಲಿ ಏಷ್ಯಾ ಪೆಸಿಫಿಕ್‌ ರಾಷ್ಟ್ರಗಳು 13 ಸದಸ್ಯರನ್ನು ಹೊಂದಿವೆ.

click me!