ಎರಡನೇ ಹಂತದ ಮತದಾನ, ಉತ್ತರ ಕರ್ನಾಟಕದ ವಿವಿಧ ಮಾರ್ಗದಲ್ಲಿ ಮೇ 6, 7ರಂದು ವಿಶೇಷ ಎಕ್ಸ್‌ಪ್ರೆಸ್‌ ರೈಲು

By Suvarna News  |  First Published May 4, 2024, 4:45 PM IST

ಮತದಾನಕ್ಕೆ ಬಂದು ಹೋಗಲು ಬೆಂಗಳೂರು ಹಾಗೂ ಮೈಸೂರಿನಲ್ಲಿ ನೆಲಸಿರುವ  ಉತ್ತರ ಕರ್ನಾಟಕದ ಮತದಾರರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.


ಬೆಂಗಳೂರು (ಏ.4): ಮತದಾನಕ್ಕೆ ಬಂದು ಹೋಗಲು ಬೆಂಗಳೂರು ಹಾಗೂ ಮೈಸೂರಿನಲ್ಲಿ ನೆಲಸಿರುವ  ಉತ್ತರ ಕರ್ನಾಟಕದ ಮತದಾರರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ನೈಋತ್ಯ ರೈಲ್ವೆಯು ಮೇ 6, 7ರಂದು ವಿವಿಧ ಮಾರ್ಗಗಳಲ್ಲಿ ವಿಶೇಷ ರೈಲು ಸೇವೆ ನೀಡಲಿದೆ. ಇದೇ ರೈಲುಗಳನ್ನು ಮತದಾನದ ಪ್ರಯಾಣಕ್ಕೂ ಬಳಸಿಕೊಳ್ಳಬಹುದು

TRAIN NO. 07373/07374
ಮೇ 6, 2024 ಮೈಸೂರು - ತಾಳಗುಪ್ಪ
ಮೈಸೂರು - ರಾತ್ರಿ 9:30
ಬೆಂಗಳೂರು - ರಾತ್ರಿ 12:00
ಶಿವಮೊಗ್ಗ - ಬೆಳಗ್ಗೆ 6:10
ತಾಳಗುಪ್ಪ - ಬೆಳಗ್ಗೆ 9:00

Latest Videos

undefined

ಮೇ 7, 2024 ತಾಳಗುಪ್ಪ - ಮೈಸೂರು
ತಾಳಗುಪ್ಪ ಸಂಜೆ 6:30
ಶಿವಮೊಗ್ಗ - ರಾತ್ರಿ 8:30
ಬೆಂಗಳೂರು - ರಾತ್ರಿ 1:00
ಮೈಸೂರು - ಬೆಳಗ್ಗೆ 4:00

ಇತರ ಮೂಲದ ಆದಾಯ ಗಳಿಸಲು BMRCL ಪ್ಲಾನ್, ಮೆಟ್ರೋ ನಿಲ್ದಾಣಕ್ಕೆ ಕಾರ್ಪೋರೆಟ್ ಕಂಪನಿಗಳ ಹೆಸರಿಡಲು ಒಪ್ಪಂದ

ಸರ್‌ ಎಂ.ವಿಶ್ವೇಶ್ವರಯ್ಯ ಬೆಂಗಳೂರು- ವಿಜಯಪುರ- ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್‌ ಸ್ಪೆಷಲ್‌ (06231/06232) ಒಂದು ಟ್ರಿಪ್‌ ಹೋಗಿ ಬರಲಿದೆ. ತುಮಕೂರು, ಚಿತ್ರದುರ್ಗ, ಹೊಸಪೇಟೆ, ಗದಗ ಹಾಗೂ ಬಾಗಲಕೋಟೆ ಮೂಲಕ ಈ ರೈಲು ಸಾಗಲಿದೆ.

ಯಶವಂತಪುರ- ಬೀದರ್- ಯಶವಂತಪುರ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲು (06227/06228) ಒಂದು ಟ್ರಿಪ್‌ ಸಂಚರಿಸಲಿದೆ. ಯಲಹಂಕ, ರಾಯಚೂರು ಮತ್ತು ಕಲಬುರ್ಗಿ ಮೂಲಕ ಈ ರೈಲು ಸಾಗಲಿದೆ. ಯಶವಂತಪುರ- ವಿಜಯನಗರ- ಯಶವಂತಪುರ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲು (07319/07320) ಅರಸಿಕೆರೆ, ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಳಗಾವಿ ಮೂಲಕ ಸಂಚರಿಸಲಿದೆ.

ಕರ್ನಾಟಕದ 7 ರೈಲು ನಿಲ್ದಾಣಗಳಲ್ಲಿ ಕಡಿಮೆ ದರದ ಆಹಾರ ಕೌಂಟರ್‌ ತೆರೆದ ಭಾರತೀಯ ರೈಲ್ವೆ, ನಿಮ್ಮ ಜಿಲ್ಲೆಯಲ್ಲಿದೆಯೇ?

ಮೈಸೂರು- ತಾಳಗುಪ್ಪ- ಮೈಸೂರು ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲು (07373/07374) ಒಂದು ಟ್ರಿಪ್‌ನಲ್ಲಿ ಕೆಎಸ್‌ಆರ್ ಬೆಂಗಳೂರು, ತುಮಕೂರು, ಬೀರೂರು, ಶಿವಮೊಗ್ಗ ನಗರದ ಮೂಲಕ ಸಂಚರಿಸಲಿದೆ.

ಬೆಳಗಾವಿ- ಯಶವಂತಪುರ- ಯಶವಂತಪುರ ಒನ್‌ವೇ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲು ಮೇ 6ರಂದು ಬೆಳಗಾವಿಯಿಂದ ಹೊರಟು ಹುಬ್ಬಳ್ಳಿ, ಅರಸಿಕೆರೆ, ತುಮಕೂರು ಮೂಲಕ ಯಶವಂತಪುರಕ್ಕೆ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ.

click me!