ಪಾಕಿಸ್ತಾನಕ್ಕೆ ಮೂಗುದಾರ: ಭಾರತ-ಅಮೆರಿಕ ಕಾರ್ಯತಂತ್ರ

By Web DeskFirst Published Sep 7, 2018, 10:51 AM IST
Highlights

ಭಾರತದ ಮೇಲೆ ಗಡಿಯಾಚೆಗಿಂದ ನಡೆಯುತ್ತಿರುವ ಭಯೋತ್ಪಾದನೆಯನ್ನು ನಿಲ್ಲಿಸುವಂತೆ ಹಾಗೂ ಮುಂಬೈ, ಪಠಾಣ್‌ಕೋಟ್‌ ಮತ್ತು ಉರಿ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸುವಂತೆ ಭಾರತ ಮತ್ತು ಅಮೆರಿಕ ಜಂಟಿಯಾಗಿ ಪಾಕಿಸ್ತಾನಕ್ಕೆ ತಾಕೀತು ಮಾಡಿವೆ.

ನವದೆಹಲಿ: ಭಾರತ ಹಾಗೂ ಅಮೆರಿಕದ 2+2 ನಾಯಕರ ಮಟ್ಟದ ಸಭೆಯ ವೇಳೆ ಪಾಕಿಸ್ತಾನಕ್ಕೆ ಮೂಗುದಾರ ಹಾಕುವ ನಿಟ್ಟಿನಿಂದ ಚರ್ಚೆ ನಡೆಸಲಾಗಿದೆ. ಭಾರತದ ಮೇಲೆ ಗಡಿಯಾಚೆಗಿಂದ ನಡೆಯುತ್ತಿರುವ ಭಯೋತ್ಪಾದನೆಯನ್ನು ನಿಲ್ಲಿಸುವಂತೆ ಹಾಗೂ ಮುಂಬೈ, ಪಠಾಣ್‌ಕೋಟ್‌ ಮತ್ತು ಉರಿ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸುವಂತೆ ಭಾರತ ಮತ್ತು ಅಮೆರಿಕ ಜಂಟಿಯಾಗಿ ಪಾಕಿಸ್ತಾನಕ್ಕೆ ತಾಕೀತು ಮಾಡಿವೆ.

ಪಾಕಿಸ್ತಾನ ತನ್ನ ನೆಲವನ್ನು ಭಯೋತ್ಪಾದನೆಗೆ ಬಳಸಿಕೊಳ್ಳುತ್ತಿರುವುದನ್ನು ಅಮೆರಿಕ ಹಾಗೂ ಭಾರತದ ಸಚಿವರು ತೀವ್ರವಾಗಿ ಖಂಡಿಸಿದ್ದಾರೆ. ಇದೇ ವೇಳೆ, ಮುಂಬೈ ದಾಳಿಯ ರೂವಾರಿ ಉಗ್ರ ಹಫೀಜ್‌ ಸಯೀದ್‌ ಪಾಕಿಸ್ತಾನದಲ್ಲಿ ಮುಕ್ತವಾಗಿ ಓಡಾಡಿಕೊಂಡಿರುವ ಬಗ್ಗೆ ಭಾರತದ ಕಳವಳವನ್ನು ಅಮೆರಿಕ ಕೂಡ ಒಪ್ಪಿಕೊಂಡಿದೆ.

ಆತನ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಪಾಕಿಸ್ತಾನಕ್ಕೆ ಸೂಚಿಸಿರುವುದಾಗಿ ತಿಳಿಸಿದೆ. ಇದೇ ವೇಳೆ, ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ವಿರುದ್ಧ ಕ್ರಮ ಕ್ರಮ ಕೈಗೊಳ್ಳುವುದಾಗಿಯೂ ಅಮೆರಿಕ ಭರವಸೆ ನೀಡಿದೆ. ಆತನ ವಿರದ್ಧದ ಕಾರ್ಯಾಚರಣೆಗೆ ನೆರವು ನೀಡುವುದಾಗಿ ತಿಳಿಸಿದೆ.

click me!