ಪೆಟ್ರೋಲ್ ಬೆಲೆ ಹೆಚ್ಚಾದ್ರೆ ಬಂಕ್ ಗಳಿಗೆ ತೊಂದರೆ : ಯಾಕೆ..?

By Web DeskFirst Published Oct 3, 2018, 9:41 AM IST
Highlights

ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ 85.52 ತಲುಪಿದ್ದು, 100 ಗಡಿದಾಟುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬಂಕ್ ಮಾಲಿಕರು ಪಂಪ್‌ಗಳಲ್ಲಿ ಉಂಟಾಗುವ ಪ್ರೈಸ್ ಡಿಸ್‌ಫ್ಲೈ ಬೋರ್ಡ್ (ದರ ಪ್ರದರ್ಶನ ಫಲಕ) ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ತೈಲ  ಕಂಪನಿಗಳ ಮೊರೆಹೋಗಿವೆ.

ಬೆಂಗಳೂರು : ಪೆಟ್ರೋಲ್-ಡೀಸೆಲ್ ದರ ಮತ್ತೆ ಗಗನಮುಖಿಯಾ ಗಿದೆ. ಸದ್ಯ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ 85.52 ತಲುಪಿದ್ದು, 100 ಗಡಿದಾಟುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬಂಕ್ ಮಾಲಿಕರು ಪಂಪ್‌ಗಳಲ್ಲಿ ಉಂಟಾಗುವ ಪ್ರೈಸ್ ಡಿಸ್‌ಫ್ಲೈ ಬೋರ್ಡ್ (ದರ ಪ್ರದರ್ಶನ ಫಲಕ) ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ತೈಲ  ಕಂಪನಿಗಳ ಮೊರೆಹೋಗಿವೆ.

ಪ್ರಸ್ತುತ ಪೆಟ್ರೋಲ್ ಬಂಕ್‌ಗಳಲ್ಲಿರುವ ಪಂಪ್‌ಗಳ (ಡಿಸ್ ಪೋಸೆಲ್ ಯೂನಿಟ್) ಡಿಸ್‌ಫ್ಲೈ ಬೋರ್ಡ್ ಎರಡಂಕಿ ದರ (99.99) ಪ್ರದರ್ಶಿಸುವ ಸಾಮರ್ಥ್ಯ ಹೊಂದಿವೆ. ಲೀಟರ್ ಪೆಟ್ರೋಲ್ ಮೂರಂಕಿ ಅಂದರೆ 100 ತಲುಪಿದರೆ ಡಿಸ್‌ಫ್ಲೈ ಬೋರ್ಡ್‌ನಲ್ಲಿ ದರ ಪ್ರದರ್ಶನ ಆಗುವುದಿಲ್ಲ.  ದೇಶದಲ್ಲಿ ಇದುವರೆಗೂ ಪೆಟ್ರೋಲ್ 100 ದಾಟಿರಲಿಲ್ಲ. 

ಇತ್ತೀಚೆಗೆ ಅಂತಾ ರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ನಿರಂತರ ಏರಿಕೆ ಆಗುತ್ತಿರುವುದರಿಂದ ಪೆಟ್ರೋಲ್- ಡೀಸೆಲ್ ದರವೂ ನಿರಂತರವಾಗಿ ಏರಿಕೆಯಾಗುತ್ತಿದೆ. ಇದು ಹೀಗೆ ಮಂದುವರಿದರೆ ಡಿಸೆಂಬರ್ ಮಧ್ಯದ ವೇಳೆಗೆ ಲೀಟರ್ ಪೆಟ್ರೋಲ್ ದರ 100 ದಾಟುವ ಸಾಧ್ಯತೆಯಿದೆ. ಇದರಿಂದ ಉಂಟಾಗುವ ಡಿಸ್‌ಫ್ಲೈ ಬೋರ್ಡ್ ಸಮಸ್ಯೆ ಬಗ್ಗೆ ಆತಂಕಕ್ಕೆ ಒಳಗಾಗಿರುವ ಬಂಕ್ ಮಾಲಿಕರು ಮುನ್ನೆಚ್ಚರಿಕೆಯಾಗಿ ತೈಲ ಕಂಪನಿಗಳ ಬೆನ್ನು ಬಿದ್ದಿದ್ದಾರೆ.

ಸಾಫ್ಟ್‌ವೇರ್ ಅಪ್‌ಡೇಟ್ ಪರಿಹಾರ: ಪ್ರಸ್ತುತ ರಾಜ್ಯದಲ್ಲಿ 4200 ಪೆಟ್ರೋಲ್ ಬಂಕ್‌ಗಳಿವೆ. ಈ ಪೈಕಿ ನಗರದಲ್ಲಿ 450 ಬಂಕ್‌ಗಳಿವೆ. ಪ್ರಸ್ತುತ ಚಾಲ್ತಿಯಲ್ಲಿ ರುವ ಪಂಪ್‌ಗಳಲ್ಲಿ ಅಟೋಮೇಟೆಡ್ ಮತ್ತು ಮ್ಯಾನು ವೆಲ್ ತಂತ್ರಜ್ಞಾನ ಎರಡು ರೀತಿಯ ಪಂಪ್‌ಗಳಿವೆ. ಈ ಎರಡೂ ರೀತಿಯ ಪಂಪ್‌ಗಳು ಎರಡಂಕಿ ಮೊತ್ತದ ದರ ಪ್ರದರ್ಶನ ಸಾಮರ್ಥ್ಯ ಹೊಂದಿವೆ. 

ಹಾಗಾಗಿ ಮೂರಂಕಿ ದರ ಪ್ರದರ್ಶಿಸಬೇಕಾದರೆ ತಂತ್ರಜ್ಞಾನ ಉನ್ನತೀಕರಿಸುವ ಅಗತ್ಯವಿದೆ. ಇದು ಬಂಕ್ ಮಾಲಿಕ ರಿಂದ ಸಾಧ್ಯವಿಲ್ಲ. ತೈಲ ಕಂಪನಿಗಳೇ ಆ ಕೆಲಸ ಮಾಡ ಬೇಕು. ಈಗಾಗಲೇ ಸಮಸ್ಯೆ ಕುರಿತು ತೈಲ ಕಂಪನಿಗಳ ಗಮನ ಸೆಳೆಯಲಾಗಿದೆ. ಅಲ್ಲದೆ, ಡಿಸ್‌ಫ್ಲೈ ಬೋರ್ಡ್ ಅಪ್‌ಡೇಟ್ ಮಾಡುವ ನಿಟ್ಟಿನಲ್ಲಿ ಗಂಭೀರವಾಗಿ ತೊಡಗಿಸಿ ಕೊಂಡಿವೆ ಎಂದು ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್‌ ಒಕ್ಕೂಟದ ಸದಸ್ಯ ಎ.ತಾರಾನಾಥ ಹೇಳಿದರು. 

click me!