ಉರಗ ರಕ್ಷಕ ಹಾವು ಕಡಿತಕ್ಕೆ ಬಲಿ: ಜನರಿಂದ ಹಾವಿನ ಹತ್ಯೆ

By Web DeskFirst Published Dec 24, 2018, 11:26 AM IST
Highlights

ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಡುವ ವೇಳೆ ಅದೇ ಹಾವು ಕಚ್ಚಿದ್ದರಿಂದ ಉರಗ ತಜ್ಞನೋರ್ವ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನೇರಳೆ ಗ್ರಾಮದಲ್ಲಿ ನಡೆದಿದೆ. 

ನಂಜನಗೂಡು: ಮನೆಯೊಂದರಲ್ಲಿ ಕಾಣಿಸಿಕೊಂಡ ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಡುವ ವೇಳೆ ಅದೇ ಹಾವು ಕಚ್ಚಿದ್ದರಿಂದ ಉರಗ ತಜ್ಞನೋರ್ವ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನೇರಳೆ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಆಕ್ರೋ​ಶ​ಗೊಂಡ ಗ್ರಾಮ​ಸ್ಥರು ಹಾವನ್ನು ಕಟ್ಟಿ​ಗೆ​ಯಿಂದ ಬಡಿದು, ಕಲ್ಲಿನಿಂದ ಜಜ್ಜಿ ಸಾಯಿಸಿದ್ದಾರೆ. 

ತಾಲೂ​ಕಿನ ನೇರಳೆ ಗ್ರಾಮದ ನಿವಾಸಿ ಕೃಷ್ಣ (38) ಮೃತ ಉರಗ ತಜ್ಞ. ಕೃಷ್ಣ ಕೆಲ ವರ್ಷಗಳಿಂದ ಸುತ್ತಮುತ್ತಲ ಗ್ರಾಮದಲ್ಲಿ ಹಾವುಗಳು ಕಾಣಿಸಿಕೊಂಡಾಗ ಅವುಗಳನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ಹಾವುಗಳ ಸಂರಕ್ಷಣೆ ಮಾಡುತ್ತಿದ್ದರು. ಶನಿವಾರ ಗ್ರಾಮದ ನೇರಳೆ ಗ್ರಾಮದ ರಾಮಶೆಟ್ಟಿಅ​ವರ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿದೆ. 

ಅದನ್ನು ಹಿಡಿದು ಹೊರವಲಯದ ಕಾಡಿನಲ್ಲಿ ಬಿಡುವ ವೇಳೆ ಅದೇ ಹಾವು ಕೃಷ್ಣ ಅವರನ್ನು ಕಚ್ಚಿದೆ. ಕೂಡಲೇ ಆವರನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. 

ನಂತರ ಕೃಷ್ಣ ಅವ​ರ ಶವವನ್ನು ಗ್ರಾಮಕ್ಕೆ ತಂದು ಮನೆಯಲ್ಲಿ ಇರಿಸಲಾಗಿತ್ತು. ಕೃಷ್ಣನನ್ನು ಬಲಿ ಪಡೆದ ಹಾವು ಮತ್ತೆ ಗ್ರಾಮದಲ್ಲಿ ಮತ್ತೆ ಕಾಣಿ​ಸಿ​ಕೊಂಡಿದೆ. ಕೂಡಲೇ ಹಾವನ್ನು ಕಂಡ ಗ್ರಾಮಸ್ಥರು ಆಕ್ರೋಶಗೊಂಡು ಕಟ್ಟಿಗೆ ಮತ್ತು ಕಲ್ಲು​ನಿಂದ ಜಜ್ಜಿ ಸಾಯಿ​ಸಿ​ದ್ದಾರೆ.

click me!