ಪ್ರಧಾನಿ ಮೋದಿಗೆ ಮಕ್ಕಳಿಲ್ಲ ಅಂದ್ರೆ ನಾವೇನು ಮಾಡೋಣ: ಮಲ್ಲಿಕಾರ್ಜುನ ಖರ್ಗೆ

By Kannadaprabha News  |  First Published Apr 30, 2024, 11:38 AM IST

ನಿಜಾಂ ಸರ್ಕಾರದ ಆಡಳಿತದಲ್ಲೇ ಹೆಣ್ಣುಮಕ್ಕಳ ಮಾಂಗಲ್ಯಕ್ಕೆ ಕೈ ಹಾಕುವ ಧೈರ್ಯ ಇರಲಿಲ್ಲ. ಈಗ ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವವಿದ್ದು, ಮಹಿಳೆಯರ ಮಂಗಳಸೂತ್ರಕ್ಕಾಗಿ ಕಾಂಗ್ರೆಸ್ ಪಕ್ಷ ತನ್ನ ಪ್ರಾಣ ಕೊಡಲೂ ಸಿದ್ಧವಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. 


ಯಾದಗಿರಿ (ಏ.30): ನಿಜಾಂ ಸರ್ಕಾರದ ಆಡಳಿತದಲ್ಲೇ ಹೆಣ್ಣುಮಕ್ಕಳ ಮಾಂಗಲ್ಯಕ್ಕೆ ಕೈ ಹಾಕುವ ಧೈರ್ಯ ಇರಲಿಲ್ಲ. ಈಗ ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವವಿದ್ದು, ಮಹಿಳೆಯರ ಮಂಗಳಸೂತ್ರಕ್ಕಾಗಿ ಕಾಂಗ್ರೆಸ್ ಪಕ್ಷ ತನ್ನ ಪ್ರಾಣ ಕೊಡಲೂ ಸಿದ್ಧವಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಗುರುಮಠಕಲ್ ನಲ್ಲಿ ಅವರು ಮತಯಾಚನೆ ನಡೆಸಿದರು. ಮಂಗಳಸೂತ್ರ ವಿಚಾರವಾಗಿ ಮೋದಿ ಹೇಳಿಕೆಗೆ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ, ಯಾರಿಗೆ ಮಕ್ಕಳು ಜಾಸ್ತಿ ಇದ್ದಾರೆ ಅವರಿಗೆ ಸಂಪತ್ತು ಜಾಸ್ತಿ ಹೋಗುತ್ತೆ ಎಂದು ಮೋದಿ ಹೇಳಿದ್ದಾರೆ. ಅವರಿಗೆ ಮಕ್ಕಳಿಲ್ಲ ಎಂದರೆ ನಾವೇನು ಮಾಡೋಣ ಎಂದು ಪ್ರಶ್ನಿಸಿದರು.

ಕಳೆದ 10 ವರ್ಷದ ಬಿಜೆಪಿ ಸರಕಾರದ ಆಡಳಿತದಿಂದ ದೇಶದಲ್ಲಿರುವ 22 ಜನ ಉದ್ಯಮಿಗಳು ಮಾತ್ರ ಆರ್ಥಿಕವಾಗಿ ಉದ್ಧಾರವಾಗಿದ್ದಾರೆ. ಆದರೆ, ಕಾರ್ಮಿಕರು, ರೈತರು, ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಲಿಲ್ಲ ಎಂದು ಅವರು ಅಕ್ರೋಶ ವ್ಯಕ್ತ ಪಡಿಸಿದರು. ಮೋದಿಯವರು ಕಾಂಗ್ರೆಸ್ ಪಕ್ಷ ಹಾಗೂ ನಾಯಕರನ್ನು ಬೈಯ್ಯುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಅವರು ಬೈದಷ್ಟೂ ನಮಗೆ ಒಳ್ಳೆಯದಾಗುತ್ತದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಹಾಗೂ ನನಗೆ ಬೈಯುತ್ತಲೇ ಇರುತ್ತಾರೆ. ನಮಗೆ ಬೈಯುವ ಬದಲು ನಮ್ಮ ರಾಜ್ಯಕ್ಕೆ ಏನು ಮಾಡಿದ್ದಾರೆ ಎಂಬುದನ್ನು ಅವರು ವಿವರಿಸಲಿ ಎಂದು ಖರ್ಗೆ ಆಗ್ರಹಿಸಿದರು.

Tap to resize

Latest Videos

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ಬಿಜೆಪಿ ನಿಲುವೇನು: ಡಿ.ಕೆ.ಶಿವಕುಮಾರ್‌

ಕಾಂಗ್ರೆಸ್‌ಗೆ ಬೈದಷ್ಟು ಒಳ್ಳೆಯದಾಗುತ್ತೆ: ಖರ್ಗೆ ಅಳಿಯ ರಾಧಾಕೃಷ್ಣ ಕಣದಲ್ಲಿರುವ ಕಲಬುರಗಿ ಮೀಸಲು ಲೋಕಸಭೆ ಅಖಾಡಕ್ಕೆ ದೇಶದ ಪ್ರಮುಖ ಕಾಂಗ್ರೆಸ್‌ ನಾಯಕರೆಲ್ಲರೂ ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ವಾರವಷ್ಟೇ ರಾಜ್ಯದ ಸಿಎಂ, ಡಿಸಿಎಂ, ಇಲ್ಲಿಗೆ ಬಂದು ಪ್ರಚಾರ ಮಾಡಿ ಹೋದ ಬೆನ್ನಲ್ಲೇ ಸೋಮವಾರ ಇಲ್ಲಿಗೆ ಎಐಸಿಸಿ ಅಧ್ಯಕ್ಷ ಡಾ. ಖರ್ಗೆ, ಪ್ರ. ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಸುರ್ಜೇವಾಲಾ ಆಗಮಿಸಿ ಅಬ್ಬರಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೆಲಂಗಾಣ ಮುಖ್ಯಮಂತ್ರಿ ಅನುಮುಲ ರೇವಂತರೆಡ್ಡಿ, ಡಾ.ಶರಣಪ್ರಕಾಶ ಪಾಟೀಲ, ರಣಜೀತ ಸಿಂಗ್ ಸುರ್ಜೇವಾಲಾ ಎಲ್ಲರು ಸೇಡಂ ಪಟ್ಟಣದಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಧಾನಮಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ಹಾಗೂ ನಾಯಕರನ್ನು ಬೈಯುವುದೆ ಕೆಲಸ ಮಾಡಿಕೊಂಡಿದ್ದಾರೆ. ಅವರು ಬೈದಷ್ಟು ನಮಗೆ ಒಳ್ಳೆಯದಾಗುತ್ತದೆ ಎಂದರೆ, ಪ್ರಿಯಾಂಕಾ ಗಾಂಧಿಯವರು ದೇಶದಲ್ಲಿ ಸತ್ಯಮೇವ ಜಯತೆ ಎಂದರೂ ಕಳೆದ 10 ವರ್ಷದಿಂದ ಸುಳ್ಳೆ ಕಾರುಬಾರು ಮಾಡುತ್ತಿದೆ ಎಂದು ಮೋದಿಯವರ ವಿರುದ್ಧ ವಾಗ್ದಾಳಿ ಮಾಡಿ ಗಮನ ಸೆಳೆದರು.

Prajwal Revanna Sex Scandal: ಎಸ್‌ಐಟಿಗೆ ಪೆನ್‌ಡ್ರೈವ್‌ ರಹಸ್ಯ ತಿಳಿಸಿದ ಹಾಸನ ಎಸ್ಪಿ

ನಿಂದಿಸೋ ಬದಲು ರಾಜ್ಯಕ್ಕೇನು ಮಾಡಿದ್ದೀರಿ ಹೇಳಿ ಮೋದಿಯವರೆ: ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಹಾಗೂ ನನಗೆ ಬೈಯುತ್ತಲೇ ಇರುತ್ತಾರೆ. ನಮಗೆ ಬೈಯುವ ಬದಲು ನಮ್ಮ ರಾಜ್ಯಕ್ಕೆ ಏನು ಮಾಡಿದ್ದಾರೆ ಎಂದು ಮೋದಿ ವಿವರಿಸಲಿ ಎಂದು ಖರ್ಗೆ ಆಗ್ರಹಿಸಿದರು. ಆರ್ಟಿಕಲ್ 371 ಜೆ ಜಾರಿಗೆ ತರಲು 330 ಸದಸ್ಯರ ಬೆಂಬಲ ಬೇಕಾಗಿತ್ತು. ನಾನು ಎಲ್ಲ ಸದಸ್ಯರ ಮನೆಗೆ ವೈಯಕ್ತಿಕ ಭೇಟಿ ನೀಡಿ ಅವರ ಬೆಂಬಲ ಕೋರಿದ್ದೆ. ಅವರೆಲ್ಲರ ಸಹಕಾರದಿಂದ ಅದು‌ ಜಾರಿಯಾಗಿತ್ತು. ಈ ಪ್ರಮುಖ ಯೋಜನೆಯ ಜೊತೆಗೆ ಕೇಂದ್ರಿಯ ವಿಶ್ವವಿದ್ಯಾಲಯ, ಇಎಸ್ ಐಸಿ, ಜವಳಿ ಪಾರ್ಕ್, ರೇಲ್ವೆ ಕೋಚ್ ಫ್ಯಾಕ್ಟರಿ ಮುಂತಾದ ಯೋಜನೆಗಳು ನಮ್ಮ ಕಾಲದಲ್ಲಿ ಆಗಿದ್ದವು. ಇಂತಹ ಯಾವುದಾದರೂ ಯೋಜನೆಯನ್ನು ಮೋದಿ ನಮ್ಮ ಜಿಲ್ಲೆಗೆ ಕೊಟ್ಟಿದ್ದರೆ ಹೇಳಲಿ ಎಂದು ಸವಾಲು ಹಾಕಿದರು.

click me!