ಸ್ವದೇಶಿ ಜಿಪಿಎಸ್‌ ನಾವಿಕ್‌ 2018ಕ್ಕೆ

By Suvarna Web DeskFirst Published May 29, 2017, 1:13 PM IST
Highlights

ಸ್ವದೇಶಿ ಜಿಪಿಎಸ್‌ ಕಾರ್ಯಾಚರಣೆಗೆ ಏಳು ಉಪಗ್ರಹಗಳನ್ನು ಉಡಾವಣೆ ಮಾಡಬೇಕಾಗಿತ್ತು. ಏಳನೇ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) 2016ರ ಏ.28ರಂದು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಈಗ ಪರೀಕ್ಷೆಗಳು ನಡೆಯುತ್ತಿದ್ದು, ಮುಂದಿನ ವರ್ಷಾರಂಭದ ವೇಳೆಗೆ ಸೇವೆ ಲಭ್ಯವಾಗಲಿದೆ ಎಂದು ಇಸ್ರೋದ ಅಂಗಸಂಸ್ಥೆ ಅಹಮದಾಬಾದ್‌ ಮೂಲದ ಸ್ಪೇಸ್‌ ಅಪ್ಲಿಕೇಷನ್‌ ಸೆಂಟರ್‌ ನಿರ್ದೇಶಕ ತಪನ್‌ ಮಿಶ್ರಾ ತಿಳಿಸಿದ್ದಾರೆ.

ನವದೆಹಲಿ: ಕಾರ್ಗಿಲ್‌ ಸಮರದಂತಹ ಸಂದರ್ಭದಲ್ಲಿ ಜಿಪಿಎಸ್‌ ಮಾಹಿತಿ ಕೊಡಲು ನಿರಾಕರಿಸಿದ ಅಮೆರಿಕಕ್ಕೆ ಸಡ್ಡು ಹೊಡೆದು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ಸ್ವದೇಶಿ ಜಿಪಿಎಸ್‌ ವ್ಯವಸ್ಥೆ 2018ರ ಆರಂಭದಿಂದ ಸೇವೆಗೆ ಲಭ್ಯವಾಗಲಿದೆ. ತನ್ಮೂಲಕ ಇಂತಹ ಸೌಲಭ್ಯ ಹೊಂದಿದ ಕೆಲವೇ ದೇಶಗಳ ಸಾಲಿಗೆ ಭಾರತ ಸೇರಲಿದೆ.

ಸ್ವದೇಶಿ ಜಿಪಿಎಸ್‌ ಕಾರ್ಯಾಚರಣೆಗೆ ಏಳು ಉಪಗ್ರಹಗಳನ್ನು ಉಡಾವಣೆ ಮಾಡಬೇಕಾಗಿತ್ತು. ಏಳನೇ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) 2016ರ ಏ.28ರಂದು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಈಗ ಪರೀಕ್ಷೆಗಳು ನಡೆಯುತ್ತಿದ್ದು, ಮುಂದಿನ ವರ್ಷಾರಂಭದ ವೇಳೆಗೆ ಸೇವೆ ಲಭ್ಯವಾಗಲಿದೆ ಎಂದು ಇಸ್ರೋದ ಅಂಗಸಂಸ್ಥೆ ಅಹಮದಾಬಾದ್‌ ಮೂಲದ ಸ್ಪೇಸ್‌ ಅಪ್ಲಿಕೇಷನ್‌ ಸೆಂಟರ್‌ ನಿರ್ದೇಶಕ ತಪನ್‌ ಮಿಶ್ರಾ ತಿಳಿಸಿದ್ದಾರೆ.

‘ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ' (ಐಆರ್‌ಎನ್‌ಎಸ್‌ಎಸ್‌) ಎಂಬ ಹೆಸರಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದಂತೆ ‘ನಾವಿಕ್‌' (ನೇವಿಗೇಶನ್‌ ವಿಥ್‌ ಇಂಡಿಯನ್‌ ಕನ್ಸೆ$್ಟಲೇಶನ್‌) ಎಂಬ ಹೆಸರನ್ನು ಸ್ವದೇಶಿ ಜಿಪಿಎಸ್‌ಗೆ ಇಡಲಾಗಿದೆ. ಸದ್ಯ ಈ ಉಪಗ್ರಹವನ್ನು ಪರಿಪಕ್ವತೆಗಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದೇಶ ಅಥವಾ ಅರಬ್ಬೀ ಸಮುದ್ರದ ಯಾವುದೇ ಮೂಲೆಯಲ್ಲಿ ದಾರಿ ತಪ್ಪಿದರೂ, ಈ ಉಪಗ್ರಹದ ಮೂಲಕ ಗುರಿ ತಲುಪಬಹುದಾಗಿರುತ್ತದೆ.

ಅಮೆರಿಕದ ಜಿಪಿಎಸ್‌ನಲ್ಲಿ 24 ಉಪಗ್ರಹಗಳು ಇವೆ. 1973ರಲ್ಲೇ ಆರಂಭವಾದ ಯೋಜನೆ ಅದಾಗಿದ್ದು, ಇಡೀ ವಿಶ್ವವನ್ನೇ ವ್ಯಾಪಿಸಿದೆ. ಆದರೆ ಭಾರತ ಅಭಿವೃದ್ಧಿಪಡಿಸಿರುವ ಸ್ವದೇಶಿ ಜಿಪಿಎಸ್‌ನಲ್ಲಿ ಭಾರತದ ದಿಕ್ಸೂಚಿ ಮಾತ್ರ ಲಭ್ಯವಿದ್ದು, ಅಮೆರಿಕ್ಕಿಂತ ಅತ್ಯಂತ ನಿಖರವಾಗಿದೆ. ಇದಕ್ಕೆ 1420 ಕೋಟಿ ರು. ವೆಚ್ಚವಾಗಿದೆ.

ಸ್ವದೇಶಿ ಜಿಪಿಎಸ್‌ ಎಲ್ಲೆಲ್ಲಿದೆ?: ಸದ್ಯ ಅಮೆರಿಕ (ಜಿಪಿಎಸ್‌), ರಷ್ಯಾ (ಗ್ಲೋನಾಸ್‌), ಐರೋಪ್ಯ ಒಕ್ಕೂಟ (ಗೆಲಿಲಿಯೋ) ಮಾತ್ರ ಸ್ವದೇಶಿ ಜಿಪಿಎಸ್‌ ವ್ಯವಸ್ಥೆ ಹೊಂದಿವೆ.

(ಸಾಂದರ್ಭಿಕ ಚಿತ್ರ)

click me!