ಜನಾರ್ದನ ರೆಡ್ಡಿ-ಯಡಿಯೂರಪ್ಪ ರಹಸ್ಯ ಸಭೆ: ರೆಡ್ಡಿಗೆ ಯಡ್ಡಿ ಹೇಳಿದ್ದೇನು?

By Web DeskFirst Published Nov 17, 2018, 8:28 PM IST
Highlights

ದೂರ ದೂರ ಎನ್ನುತ್ತಲೇ ರೆಡ್ಡಿ ಬೆನ್ನಿಗೆ ನಿಂತ ಬಿಜೆಪಿ ನಿಂತಿದೆ. ಇದಕ್ಕೆ ಪೂರಕವೆಂಬಂತೆ ಯಡಿಯೂರಪ್ಪರನ್ನ ಜನಾರ್ದನ ರೆಡ್ಡಿ ಭೇಟಿ ಮಾಡಿದ್ದಾರೆ. ಹಾಗಾದ್ರೆ ರಹಸ್ಯ ಸಭೆಯಲ್ಲಿ ರೆಡ್ಡಿಗೆ ಯಡ್ಡಿ ಹೇಳಿದ್ದೇನು?

ಬೆಂಗಳೂರು, [ನ.17]: ದೂರ ದೂರ ಎನ್ನುತ್ತಲೇ ಜನಾರ್ದನ ರೆಡ್ಡಿ ಬೆನ್ನಿಗೆ ಬಿಜೆಪಿ ನಿಂತಿದೆ. ಇದಕ್ಕೆ ಪೂರಕವೆಂಬಂತೆ ನಿನ್ನೆ [ಶುಕ್ರವಾರ] ಜನಾರ್ದನ ರೆಡ್ಡಿ ಹಾಗೂ ಬಿಎಸ್ ಯಡಿಯೂರಪ್ಪ ಗುಪ್ತ್ ಗುಪ್ತ್ ಮೀಟಿಂಗ್ ಮಾಡಿದ್ದಾರೆ.

ಹಲವು ಪ್ರಕರಣಗಳಲ್ಲಿ ಜನಾರ್ದನ ರೆಡ್ಡಿ ಹೆಸರು ಕೇಳಿಬರುತ್ತಿರುವುದರಿಂದ ಬಿಜೆಪಿ ಅವರೊಂದಿಗೆ ಅಂತರವನ್ನ ಕಾಯ್ದುಕೊಂಡಿದೆ. ರೆಡ್ಡಿ ಬಿಜೆಪಿಗೆ ಯಾವುದೇ ಸಂಬಂಧ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು.

 ಆದ್ರೆ ಇದೀಗ ಅಸಲಿ ಆಟ ಬೇರೆನೇ ನಡೆದಿದೆ. ಹಾಗಾದ್ರೆ ರೆಡ್ಡಿಗೆ ಯಡಿಯೂರಪ್ಪ ಏನು ಹೇಳಿದ್ದಾರೆ? ರೆಡ್ಡಿಗೆ ಯಡ್ಡಿಗೆ ಕೊಟ್ಟ ಅಭಯವೇನು ಅನ್ನೋದನ್ನ ನೋಡಿ

ನಾವು ನಿಮ್ಮ ಜೊತೆ ಇರುತ್ತೇವೆ. ಕುಮಾರಸ್ವಾಮಿ ಸೇಡಿನ ರಾಜಕೀಯ ಮಾಡಲು ಬಿಡಲ್ಲ. ಇನ್ನು ಮುಂದೆ ನಾವು ಅಗ್ರೆಸ್ಸಿವ್ ಆಗಿ ಇರೋಣ. ನೀವು ಕಾನೂನು ಹೋರಾಟ ಮಾಡಿ. ನಮ್ಮ‌ ಬೆಂಬಲ‌ ಇರುತ್ತದೆ.

ದೂರ ದೂರ ಎನ್ನುತ್ತಲೇ ರೆಡ್ಡಿ ಬೆನ್ನಿಗೆ ನಿಂತ BJP:ರೆಡ್ಡಿ-ಯಡ್ಡಿ ಗುಪ್ತ್ ಗುಪ್ತ್ ಮೀಟಿಂಗ್

ಸಿಎಂ ವಿರುದ್ದ ಹೋರಾಟ ಮಾಡೋಣ. ಪ್ರತಿಕಾರದ ಕ್ರಮಕ್ಕೆ ಅವಕಾಶ ಮುಂದಾಗಿರೋ ಸಿಎಂ ವಿರುದ್ಧ ಹೋರಾಡೋಣ ಎಂದು ರೆಡ್ಡಿಗೆ ಹೇಳಿದ್ದಾರೆ ಎನ್ನಲಾಗಿದೆ.

ಒಟ್ಟಾರೆ, ಜನಾರ್ದನ ರೆಡ್ಡಿ ಪರ ನಿಂತು ಮುಜುಗರಕ್ಕ ಒಳಗಾಗುವುದನ್ನು ಇಷ್ಟು ದಿ‌ನ ತಪ್ಪಿಸಿಕೊಂಡಿದ್ದ ಬಿಜೆಪಿ ಈಗ ರೆಡ್ಡಿ ಸಮರ್ಥಿಸಿಕೊಳ್ಳಲು ಆರಂಭಿಸಿದೆ.‌

ಇಷ್ಟು ದಿನಗಳ ಕಾಲ ಜನಾರ್ದನ ರೆಡ್ಡಿ ವಿಚಾರವಾಗಿ ಬಹಿರಂಗವಾಗಿ ಹೇಳಿಕೆ ನೀಡುವುದಕ್ಕೂ ಹಿಂಜರಿಯುತ್ತಿದ್ದ ಬಿಜೆಪಿ ಮೊದಲ ಬಾರಿಗೆ ಬಹಿರಂಗ ಸಮರ್ಥನೆಗೆ ಮುಂದಾಗಿದೆ. ಆದರೆ ಮತ್ತೆ ಯಾವಾಗ ಯೂ ಟರ್ನ್ ಹೊಡೆಯುತ್ತದೋ ಗೊತ್ತಿಲ್ಲ.

click me!