ಎಂಟೇ ಎಂಟು ಮಂದಿ ಕೈಲಿದೆಯಾ ವಿಶ್ವದ ಶೇ.50ರಷ್ಟು ಸಂಪತ್ತು..?

By Suvarna Web DeskFirst Published Jan 16, 2017, 3:17 PM IST
Highlights

ಈ ಎಂಟು ಸಿರಿವಂತರಲ್ಲಿ ಆರು ಅಮೇರಿಕನ್ನರು, ಒಬ್ಬ ಸ್ಪ್ಯಾನಿಷ್ ಹಾಗೂ ಮತ್ತೊಬ್ಬ ಮೆಕ್ಸಿಕನ್ ಉದ್ಯಮಿ ಇದ್ದಾರೆ.

ಲಂಡನ್(ಜ. 15): ವಿಶ್ವದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿರುವುದಕ್ಕೆ ಈ ಅಂಕಿ-ಅಂಶ ಸ್ಪಷ್ಟ ಕೈಗನ್ನಡಿ ಹಿಡಿದಿದೆ. ವಿಶ್ವ ಅರ್ಥವ್ಯವಸ್ಥೆಯ ಅರ್ಧಭಾಗದಷ್ಟು ಸಂಪತ್ತು ಬರೀ ಎಂಟು ಜನರ ಬಳಿ ಇದೆಯಂತೆ. ಅಂದರೆ, ವಿಶ್ವದ ಅತ್ಯಂತ ಬಡವರೆನಿಸುವ 360 ಕೋಟಿ ಜನರ ಬಳಿ ಇರುವಷ್ಟು ಸಂಪತ್ತು ವಿಶ್ವದ ಅತ್ಯಂತ ಸಿರಿವಂತ ಎಂಟು ಮಂದಿಯ ಬಳಿ ಇದೆ. ಈ ಎಂಟು ಸಿರಿವಂತರಲ್ಲಿ ಆರು ಅಮೇರಿಕನ್ನರು, ಒಬ್ಬ ಸ್ಪ್ಯಾನಿಷ್ ಹಾಗೂ ಮತ್ತೊಬ್ಬ ಮೆಕ್ಸಿಕನ್ ಉದ್ಯಮಿ ಇದ್ದಾರೆ. ಮೈಕ್ರೋಸಾಫ್ಟ್, ಫೇಸ್ಬುಕ್ ಮತ್ತು ಅಮೇಜಾನ್'ನ ಸಂಸ್ಥಾಪಕರುಗಳೂ ಈ ಟಾಪ್ 8 ಉದ್ಯಮಿಗಳ ಪಟ್ಟಿಯಲ್ಲಿದ್ದಾರೆ.

ಭಾರತದಲ್ಲೂ ಹೆಚ್ಚಿದೆ ವ್ಯತ್ಯಾಸ:
ಆಕ್ಸ್'ಫ್ಯಾಮ್ ಎಂಬ ಸಂಸ್ಥೆಯು ಸೋಮವಾರ ಡೆವೋಸ್ ನಗರದಲ್ಲಿ ಬಿಡುಗಡೆ ಮಾಡಿದ ಸಮೀಕ್ಷೆಯಲ್ಲಿ ಈ ಅಂಶ ವೇದ್ಯವಾಗಿದೆ. ಭಾರತದಲ್ಲೂ ಶ್ರೀಮಂತ ಮತ್ತು ಬಡವರ ನಡುವಿನ ಅಂತರ ದಿನೇದಿನೇ ಹೆಚ್ಚಾಗುತ್ತಿರುವುದನ್ನು ಆಕ್ಸ್'ಫ್ಯಾಮ್'ನ ಅಧ್ಯಯನವು ಎತ್ತಿತೋರಿಸಿದೆ. ಅದರ ಪ್ರಕಾರ, ದೇಶದ ಶೇ. 58ರಷ್ಟು ಸಂಪತ್ತು ಶೇ.1ರಷ್ಟು ಮಂದಿ ಬಳಿ ಇದೆಯಂತೆ. ಮುಕೇಶ್ ಅಂಬಾನಿ ಸೇರಿದಂತೆ 84 ಭಾರತೀಯ ಕೋಟ್ಯಧಿಪತಿಗಳ ಬಳಿ 248 ಬಿಲಿಯನ್ ಡಾಲರ್, ಅಂದರೆ ಸುಮಾರು 17 ಲಕ್ಷ ಕೋಟಿ ರೂಪಾಯಿ ಹಣ ಇದೆ ಎಂದು ಈ ಅಧ್ಯಯನದಿಂದ ತಿಳಿದುಬಂದಿದೆ.

click me!