ರಸ್ತೆಗಳು ಸುಖವಾಗಿರಲಿ;ಖಾಲಿ ರಸ್ತೆ ಎಂದುಕೊಂಡು ವೇಗವಾಗಿ ಹೋಗುವ ಹಾಗಿಲ್ಲ

By Kannadaprabha News  |  First Published May 2, 2021, 9:21 AM IST

ಬೆಳಿಗ್ಗೆ 10 ಗಂಟೆ ಆಗುತ್ತಿದ್ದಂತೆ ತೆರೆದಿದ್ದ ಅಂಗಡಿ ಬಾಗಿಲುಗಳೆಲ್ಲಾ ಮುಚ್ಚಿಕೊಳ್ಳುತ್ತವೆ. ನಿದ್ದೆಯಿಂದೆದ್ದು ಬಂದವರೆಲ್ಲಾ ಸಾಮಾನು ಚೀಲಗಳನ್ನು ಸ್ಕೂಟರಿಗೆ ಸಿಕ್ಕಿಸಿ ರಪರಪನೆ ಸಾಗುತ್ತಾರೆ. ಆಮೇಲೆ ರಸ್ತೆಗಳೆಲ್ಲಾ ಮಕ್ಕಳಿಲ್ಲದ ಶಾಲೆಯಂತಾಗುತ್ತವೆ. ಅಲ್ಲೊಂದು ಕಡೆ ಇಲ್ಲೊಂದು ಕಡೆ ಪೊಲೀಸರು ನಿಂತಿರುತ್ತಾರೆ. ಅವರ ಕೈಯಲ್ಲಿ ಲಾಠಿ ಇರುತ್ತದೆ. ಅದು ನೆನಪಾಗಿ ಐಡಿ ಕಾರ್ಡನ್ನು ಧರಿಸಿಕೊಂಡು ರಸ್ತೆಗೆ ಬಿದ್ದೆ.


ಯಾವಾಗಲೂ ಮನೆಯ ಹೊರಗೆ ಜಗುಲಿಯಲ್ಲಿ ಕುಳಿತಿರುತ್ತಿದ್ದ ಪಕ್ಕದ ಮನೆ ಅಜ್ಜಿ ಈಗ ಹೊರಗೆ ಬರುವುದಿಲ್ಲ. ಹಾಲು ಕೊಡುವ ಅಂಗಡಿಯ ತಾತನ ನಗು ಮುಖ ಕಾಣಿಸುವುದಿಲ್ಲ. ಎಲ್ಲೆಂದರಲ್ಲಿ ಓಡಾಡುವ ಟೂ ವೀಲರ್‌ ಮಂದಿಯ ಸದ್ದು ಕೇಳಿಸುವುದಿಲ್ಲ. ಎಲ್ಲಾ ಕಡೆ ಖಾಲಿ ಖಾಲಿ ಅಂತಂದುಕೊಂಡು ಮುಖ್ಯ ರಸ್ತೆಗೆ ಬಂದರೆ ಕಳೆದ ವರ್ಷದಷ್ಟುಅನಾಥ ಪ್ರಜ್ಞೆ ಈ ಸಲ ರಸ್ತೆಗಳಿಗೆ ಕಾಡುತ್ತಿಲ್ಲ. ಮೊದಲಿನಷ್ಟಿಲ್ಲವಾದರೂ ಕಾರು, ಬೈಕುಗಳು ಓಡಾಡುತ್ತಿವೆ. ಪಾಪ, ಯಾರಿಗೆ ಏನು ಕಷ್ಟವೋ ಏನೋ.

ಸಾವಿನ ಸನ್ನಿಧಿಯಲ್ಲಿ ಬದುಕಿನ ಬಳ್ಳಿ;ಜಗತ್ತಿನಲ್ಲಿ ಅತ್ಯಂತ ಆಶ್ಚರ್ಯದ ಸಂಗತಿ! 

Latest Videos

undefined

ದಾರಿಯಲ್ಲಿ ಹಲವು ಕಡೆ ಪೊಲೀಸರು ನಿಂತಿದ್ದಾರೆ. ಕೆಲವೊಮ್ಮೆ ಓಡಾಡುವರನ್ನು ನಿಲ್ಲಿಸಿ ಐಡಿ ಕೇಳುತ್ತಾರೆ. ಇಲ್ಲವಾದರೆ ಬಿಸಿಲಿಗೆ ಹಾಕಿರುವ ಡೇರೆಯಲ್ಲಿ ಕುಳಿತು ರಸ್ತೆ ನೋಡುತ್ತಿರುತ್ತಾರೆ. ಅದನ್ನೆಲ್ಲಾ ನೋಡಿಕೊಂಡು ಇನ್ನೇನು ಖಾಲಿ ರಸ್ತೆ ಎಂದುಕೊಂಡು ವೇಗವಾಗಿ ಹೋಗುವ ಹಾಗಿಲ್ಲ. ಯಾರು ಎಲ್ಲಿಂದ ಯಾವ ವೇಗದಲ್ಲಿ ಬರುತ್ತಾರೋ ಗೊತ್ತಿಲ್ಲ. ಕೊರೋನಾಗಿಂತ ವೇಗವಾಗಿ ಓಡಾಡಿಕೊಂಡಿರುವ ಕಾರು, ಬೈಕಿನವರು ರಸ್ತೆಯಲ್ಲಿದ್ದಾರೆ. ಎಮರ್ಜೆನ್ಸಿ ಕಾರಣಕ್ಕೆ ಓಡಾಡುವವರು ಚೂರು ಹುಷಾರು.

ಬಹಳಷ್ಟುಮಂದಿ ಮನೆಯೊಳಗಿದ್ದಾರೆ. ಸುಮಾರಷ್ಟುಮಂದಿ ತಂತಮ್ಮ ಊರುಗಳಿಗೆ ಹೋಗಿದ್ದಾರೆ. ಸ್ವಿಗ್ಗಿ, ಡಂಝೋ, ಝೊಮಾಟೋ ಹುಡುಗರು ಬೆವರಿಳಿಸಿಕೊಂಡು ಓಡಾಡುತ್ತಿದ್ದಾರೆ. ಮಟಮಟ ಮಧ್ಯಾಹ್ನ ನಂದಿನ ಬೂತಿನಲ್ಲೊಂದು ಮಜ್ಜಿಗೆ ತೆಗೆದುಕೊಂಡು ಕುಡಿದು ದಣಿವಾರಿಸಿಕೊಳ್ಳುತ್ತಿದ್ದಾರೆ. ಅಲ್ಲಲ್ಲಿ ಮಾರ್ಷಲ್‌ಗಳು, ಸಿವಿಲ್‌ ಡಿಫೆನ್ಸ್‌ನವರು ತ್ರಾಸು ಪಟ್ಟು ವಿನಾಕಾರಣ ಸುತ್ತಾಡುವವರನ್ನು ಪತ್ತೆ ಹಚ್ಚಲು ಕಷ್ಟಪಡುತ್ತಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಕಾರಣ. ಒಂದೊಂದು ದಾರಿಯಲ್ಲಿ ಒಂದೊಂದು ನೆಪ.

ಖಾಲಿ ರಸ್ತೆಯಲ್ಲಿ ಮಾಧ್ಯಮದ ಮಂದಿ ಓಡುತ್ತಿದ್ದಾರೆ. ಆಸ್ಪತ್ರೆಗಳ ಮುಂದೆ ಬಾಡಿ ಹೋದ ಮುಖಗಳು ಕಾಣಿಸುತ್ತಿವೆ. ಸ್ಮಶಾನದ ದಾರಿಯಲ್ಲಿ ಹೋಗಲು ಭಯವಾಗುತ್ತದೆ. ಬೇರೆ ಬೇರೆ ಊರುಗಳಲ್ಲಿ ಲಾಠಿ ಏಟುಗಳು ಬೀಳುತ್ತಿವೆ. ಭಯವಾಗಿಯೋ ಅರಿವಾಗಿಯೋ ಅನಿವಾರ್ಯವಾಗಿಯೋ ಮೊದಲಿನಷ್ಟುವಾಹನಗಳು ಓಡಾಡುತ್ತಿಲ್ಲ. ಹಕ್ಕಿ, ಕ್ರಿಮಿ ಕೀಟಗಳು ಸ್ವಚ್ಛಂದವಾಗಿ ಬದುಕತೊಡಗಿವೆ. ಬಹುಶಃ ನಗರಗಳೆಲ್ಲಾ ಸ್ವಲ್ಪ ತಣ್ಣಗಾಗುತ್ತಿವೆ.

ಸ್ಮಶಾನದ ದಾರಿಗಳೆಲ್ಲಾ ಅಳುತ್ತಿವೆ! 

ಜನತಾ ಕಫä್ರ್ಯ ಜಾರಿಗೆ ಬಂದ ಮೇಲೆ ಕೊರೋನಾ ಲೆಕ್ಕಾಚಾರದಲ್ಲಿ ಬದಲಾವಣೆ ಆಯಿತೋ ಇಲ್ಲವೋ ಊರುಗಳಂತೂ ಬದಲಾಗುತ್ತಿವೆ. ಬೀದಿ ಬೀದಿಗಳಿಗೆ ಹೊಸ ಬಣ್ಣ ಬಂದಿವೆ. ನಗರಗಳಲ್ಲಿ ತುಂಬಿದ್ದ ಮನೆಗಳು ಖಾಲಿಯಾಗಿವೆ. ಹಳ್ಳಿಗಳಲ್ಲಿ ಖಾಲಿಯಿದ್ದ ಮನೆಗಳು ತುಂಬಿಕೊಂಡಿವೆ. ರಸ್ತೆಗಳು ಮೊದಲಿನಷ್ಟುಒತ್ತಡವಿಲ್ಲದೆ ಸುಖವಾಗಿವೆ.

ಇಷ್ಟೆಲ್ಲಾ ಯೋಚನೆ ಮಾಡಿಕೊಂಡು ಆಫೀಸಿನ ಬಳಿ ಬಂದರೆ ಮಲ್ಲಿಗೆ ಆಸ್ಪತ್ರೆಯ ಮುಂದೆ ಆರು ಆ್ಯಂಬುಲೆನ್ಸ್‌ಗಳು ಸೌಂಡು ಮಾಡುತ್ತಾ ಕೆಂಪು ದೀಪ ಬೆಳಗಿಸಿಕೊಂಡು ನಿಂತುಕೊಂಡಿವೆ. ಇನ್ನೊಂದಷ್ಟುದಿನ ರಸ್ತೆಗಳು ಖಾಲಿ ಬಿದ್ದರೂ ಪರವಾಗಿಲ್ಲ, ನೀವು ನಿಮ್ಮ ಮನೆಯಲ್ಲೇ ಇರಿ ಅನ್ನುವುದೇ ಸದ್ಯದ ಪ್ರಾರ್ಥನೆ.

click me!