ಎಚ್‌1ಬಿ ವೀಸಾ ಆಕರ್ಷಕ ಮಾಡ್ತೇವೆ: ಟ್ರಂಪ್ ಘೋಷಣೆ

By Web DeskFirst Published Jan 12, 2019, 9:39 AM IST
Highlights

ಎಚ್1ಬಿ ವೀಸಾ ನಿಯಮದಲ್ಲಿ ಬದಲಾವಣೆ | ಡೊನಾಲ್ಡ್ ಟ್ರಂಪ್‌ನಿಂದ ಭರವಸೆ | ಐಟಿ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ವೀಸಾ ನಿಯಮದಲ್ಲಿ ಬದಲಾವಣೆ 

ವಾಷಿಂಗ್ಟನ್ (ಜ. 12): ಇಷ್ಟು ದಿನ ಅನಿವಾಸಿ ಭಾರತೀಯರು ಅಮೆರಿಕದ ಉದ್ಯೋಗಗಳನ್ನು ಕಬಳಿಸುತ್ತಿದ್ದಾರೆ ಎಂದು ಕೆಂಡ ಕಾರುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಲುವು ಬದಲಿಸಿದ್ದು, ‘ಪ್ರತಿಭಾವಂತ ಐಟಿ ಉದ್ಯೋಗಿಗಳು
ಅಮೆರಿಕದಲ್ಲೇ ನಿಶ್ಚಿಂತೆಯಿಂದ ಉಳಿಯಲು ಅನುಕೂಲವಾಗುವಂತೆ ಎಚ್-1 ಬಿ ವೀಸಾವನ್ನು ಆಕರ್ಷಕಗೊಳಸಲಾಗುವುದು’ ಎಂದಿದ್ದಾರೆ.

ಶುಕ್ರವಾರ ಟ್ವೀಟ್ ಮಾಡಿರುವ ಟ್ರಂಪ್, ‘ಅತಿಹೆಚ್ಚು ನಿಪುಣ ಹಾಗೂ ಕುಶಲ ಉದ್ಯೋಗಿಗಳು ಅಮೆರಿಕದಲ್ಲಿ ಉದ್ಯೋಗ ಅರಸಿ ಬರುವಂತೆ ಪ್ರೇರೇಪಿಸುವ ರೀತಿಯಲ್ಲಿ ಎಚ್-1 ಬಿ ವೀಸಾ ನೀತಿ ಬದಲಿಸುತ್ತೇವೆ’ ಎಂದು ಹೇಳಿದ್ದಾರೆ.


 

H1-B holders in the United States can rest assured that changes are soon coming which will bring both simplicity and certainty to your stay, including a potential path to citizenship. We want to encourage talented and highly skilled people to pursue career options in the U.S.

— Donald J. Trump (@realDonaldTrump)
click me!