ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ Darshanam Mogulaiah

By Santosh Naik  |  First Published May 4, 2024, 1:36 PM IST

ಕಿನ್ನಾರ ಕಲೆಯನ್ನು ಜನಪ್ರಿಯ ಮಾಡಿದ್ದಕ್ಕಾಗಿ ಎರಡು ವರ್ಷಗಳ ಹಿಂದೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ದರ್ಶನಂ ಮೊಗುಳಯ್ಯ ಈಗ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಚಿತ್ರಗಳು ವೈರಲ್‌ ಆಗಿದೆ.
 


ಹೈದರಾಬಾದ್‌ (ಮೇ.4): ಅಪರೂಪದ ಸಂಗೀತವಾದ್ಯ ಕಿನ್ನಾರವನ್ನು ಮರುಶೋಧನೆ ಮಾಡಿ ಜನಪ್ರಿಯ ಮಾಡಿದ್ದಕಾಗಿ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ನಾಗರೀಕ ಪುರಸ್ಕಾರವಾಗಗ ಪದ್ಮಶ್ರೀಗೆ ಭಾಜನರಾಗಿದ್ದ ದರ್ಶನಂ ಮೊಗುಳಯ್ಯ ಅವರು ಇತ್ತೀಚೆಗೆ ಹೈದರಾಬಾದ್ ಬಳಿಕ ತುರ್ಕಯಾಮಜಲ್‌ನಲ್ಲಿ ನಿರ್ಮಾಣ ಸ್ಥಳದಲ್ಲಿ ದಿನಗೂಲಿಯಾಗಿ ದುಡುಯುತ್ತಿರುವ ಫೋಟೋ ವೈರಲ್‌ ಆಗಿದೆ. ಟೈಮ್ ಆಫ್ ಇಂಡಿಯಾದ ವರದಿಯ ಪ್ರಕಾರ, 73 ವರ್ಷದ ಕಲಾವಿದ ಕಿನ್ನಾರ ಮೊಗುಳಯ್ಯ ಎಂದೇ ಫೇಮಸ್‌ ಆಗಿರುವ ದರ್ಶನಂ ಮೊಗುಳಯ್ಯ ಅವರು ತೆಲಂಗಾಣ ಸರ್ಕಾರದಿಂದ ಪಡೆದ 1 ಕೋಟಿ ಹಣವನ್ನು ಕುಟುಂಬದ ತುರ್ತು ಪರಿಸ್ಥಿತಿಗಳಿಗೆ ಖರ್ಚು ಮಾಡಿದ್ದಾರೆ. “ರಾಜ್ಯ ಸರ್ಕಾರದಿಂದ ಬಂದ 1 ಕೋಟಿ ರೂಪಾಯಿ ಅನುದಾನವನ್ನು ನನ್ನ ಮಕ್ಕಳ ಮದುವೆಗೆ ಬಳಸಿ ಖರ್ಚಿ ಮಾಡಿದೆ. ಅದರೊಂದಿಗೆ ನಗರದ ಹೊರವಲಯದಲ್ಲಿರುವ  ತುರ್ಕಯಂಜಲ್‌ನಲ್ಲಿ ಒಂದು ತುಂಡು ಭೂಮಿಯನ್ನು ಸಹ ಖರೀದಿಸಿದೆ. ಅದರ ಬೆನ್ನಲ್ಲಿಯೇ ನಾನು ಮನೆ ನಿರ್ಮಿಸಲು ಪ್ರಾರಂಭಿಸಿದೆ ಆದರೆ ನನ್ನ ಹಣದ ಕೊರತೆಯಿಂದಾಗಿ ಮಧ್ಯದಲ್ಲಿ ನಿಲ್ಲಿಸಬೇಕಾಯಿತು" ಎಂದು ಮೊಗುಳಯ್ಯ ತಿಳಿಸಿದ್ದಾರೆ.

ತೆಲಂಗಾಣ ಸರ್ಕಾರದ 1 ಕೋಟಿ ಅನುದಾನದ ಜೊತೆಗೆ ರಾಜ್ಯ ಸರ್ಕಾರ  ರಂಗಾರೆಡ್ಡಿ ಜಿಲ್ಲೆಯಲ್ಲಿ 600 ಚದರ ಗಜದ ನಿವೇಶನವನ್ನು ಕಲಾವಿದರಿಗೆ ಭರವಸೆ ನೀಡಿತು. ಆದರೆ, ಹಂಚಿಕೆ ಇನ್ನೂ ಪೂರ್ಣಗೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನನ್ನ ಒಬ್ಬ ಮಗ ರೋಗದಿಂದ ಬಳಲುತ್ತಿದ್ದಾರೆ .ಔಷಧಿಗಳಿಗೆ (ಮಗ ಮತ್ತು ನಾನು) ತಿಂಗಳಿಗೆ ಕನಿಷ್ಠ ₹7,000 ಬೇಕು. ನಂತರ ನಿಯಮಿತ ವೈದ್ಯಕೀಯ ಪರೀಕ್ಷೆಗಳು ಮತ್ತು ಇತರ ವೆಚ್ಚಗಳಿವೆ, ”ಎಂದು ಒಂಬತ್ತು ಮಕ್ಕಳ ತಂದೆಯಾಗಿರುವ ಮೊಗುಳಯ್ಯ ಹೇಳಿದ್ದಾರೆ.ಹಿರಿಯ ಪತ್ರಕರ್ತೆ ಸುಚೇತಾ ದಲಾಲ್ ಅವರು ಪದ್ಮಶ್ರೀ ಪುರಸ್ಕೃತರ ದಿನದ ಸಂಕಷ್ಟವನ್ನು ಹಂಚಿಕೊಂಡು ಹೈಲೈಟ್ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಭಾರತ್‌ ರಾಷ್ಟ್ರ ಸಮಿತಿಯ ನಾಯಕ ಕೆಟಿ ರಾಮ ರಾವ್‌ ಈ ಟ್ವೀಟ್‌ಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದಾರೆ. ಸುಚೇತಾ ಅವರೇ ಥ್ಯಾಂಕ್ಸ್‌. ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದಕ್ಕಾಗಿ ಧನ್ಯವಾದಗಳು. ಈಗ ನಾನು ಮೊಗುಳಯ್ಯ ಅವರ ಕುಟುಂಬವನ್ನು ವೈಯಕ್ತಿಕವಾಗಿ ಕೇರ್‌ ಮಾಡಲಿದ್ದೇನೆ. ನಮ್ಮ ಟೀಮ್‌ ಅವರನ್ನು ತಕ್ಷಣವೇ ಭೇಟಿಯಾಗಲಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಹೀಗೇ ಆದಲ್ಲಿ ಮುಂದೆ ಬಿಜೆಪಿ, ಟಿಎಂಸಿ, ಕಾಂಗ್ರೆಸ್, ಎಡರಂಗ ಯಾವ ರಾಜಕೀಯ ಪಕ್ಷ ಕೂಡ ಇರೋದಿಲ್ಲ!

Tap to resize

Latest Videos

ತೆಲಂಗಾಣ ಸರ್ಕಾರವು ನೀಡುತ್ತಿದ್ದ ಮಾಸಿಕ 10 ಸಾವಿರ ರೂಪಾಯಿ ಗೌರವಧನವನ್ನು ನಿಲ್ಲಿಸಿದ ಬಳಿಕ ಮೊಗುಳಯ್ಯ ಅವರ ಪರಿಸ್ಥಿತಿ ಹದಗೆಟ್ಟಿತ್ತು ಎಂದು ತಿಳಿಸಲಾಗಿದೆ. ಯಾವ ಕಾರಣಕ್ಕಾಗಿ ರ್ಗರವ ಧನದ ಹಣ ನಿಂತಿತು ಎನ್ನುವುದು ನನಗೆ ತಿಳಿದಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಸಹಾಯಕ್ಕಾಗಿ ಸುತ್ತಿದ್ದೇನೆ. ಸಾರ್ವಜನಿಕ ಪ್ರತಿನಿಧಿಗಳನ್ನು ಭೇಟಿಮಾಡಿದ್ದೇನೆ. ಎಲ್ಲರೂ ಕೂಡ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ, ಕೆಲಸ ಮಾತ್ರ ಆಗಿಲ್ಲ ಎಂದಿದ್ದಾರೆ.

ಒಂದೇ ಹೆಸರಿನ ಅಭ್ಯರ್ಥಿಗಳ ಸ್ಪರ್ಧೆಗೆ ತಡೆ ಇಲ್ಲ: ಸುಪ್ರೀಂ ಸ್ಪಷ್ಟನೆ

Heart Breaking: Padma Shri Awardee Mogulaiah Now a Daily Wager.

He says his monthly honorarium stopped, and although all respond positively, they do nothing.

Mogulaiah was seen working at a construction site in Turkayamanjal near Hyderabad.

Darshanam Mogulaiah was honoured… pic.twitter.com/Zru4If7h0x

— Sudhakar Udumula (@sudhakarudumula)
click me!