ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾಗೂ ವಿಮಾನಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ಎಲ್ಲ ಬಾಂಬ್‌ಗಳು ಸ್ಫೋಟಗೊಳ್ಳಲಿದ್ದು ದೊಡ್ಡ ರಕ್ತಪಾತವೇ ನಡೆಯಲಿದೆ.
ಮಂಗಳೂರು (ಮೇ 04): ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾಗೂ ವಿಮಾನಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ಎಲ್ಲ ಬಾಂಬ್‌ಗಳು ಸ್ಫೋಟಗೊಳ್ಳಲಿದ್ದು ದೊಡ್ಡ ರಕ್ತಪಾತವೇ ನಡೆಯಲಿದೆ ಎಂದು ಉಗ್ರರ ಹೆಸರಿನಲ್ಲಿ ಪೊಲೀಸರಿಗೆ ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ.
ಹೌದು, ರಾಜ್ಯದ ಕರಾವಳಿ ತೀರದಲ್ಲಿಡುವ ಮಂಗಳೂರು ಏರ್ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಉಗ್ರರ ಹೆಸರಲ್ಲಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದ್ದು, ವಿಮಾನ ನಿಲ್ದಾಣ ಆವರಣದಲ್ಲಿ ಸ್ಫೋಟಕಗಳನ್ನು ಇಡಲಾಗಿದೆ. ಜೊತೆಗೆ, ಮೂರು ವಿಮಾನಗಳಲ್ಲಿಯೂ ಬಾಂಬ್ ಇಡಲಾಗಿದೆ. ಎಲ್ಲ ಬಾಂಬ್‌ಗಳು ಸ್ಫೋಟಗೊಳ್ಳುವ ಮೂಲಕ ಕೆಲವೇ ಗಂಟೆಗಳಲ್ಲಿ ಇಡೀ ದೇಶವೇ ಬೆಚ್ಚಿ ಬೀಳುವಂತಹ ದೊಡ್ಡ ಮಟ್ಟದ ರಕ್ತಪಾತ ಆಗಲಿದೆ ಎಂದು ಇಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಲಾಗಿದೆ.
ತಡವಾಗಿ ಬಂದರೆಂದು ಶಿಕ್ಷಕಿಗೆ ಹೊಡೆದ ಪ್ರಾಂಶುಪಾಲೆ; ವಿಡಿಯೋ ವೈರಲ್
ಇನ್ನು ಬಾಂಬ್ ಸ್ಪೊಟದ ಕೃತ್ಯದ ಹಿಂದೆ ಟೆರರೈಸರ್ಸ್ 111 (Terrorizers 111) ಸಂಘಟನೆಯ ಕೈವಾಡವಿದೆ ಎಂದು ಬೆದರಿಕೆಯಲ್ಲಿ ತಿಳಿಸಲಾಗಿದೆ. ಎಪ್ರಿಲ್ 29ರಂದು ಬಾಂಬ್ ಇಟ್ಟಿರುವ ಬಗ್ಗೆ ಬೆದರಿಕೆ ಇಮೇಲ್ ಬಂದಿದ್ದು, ಇಮೇಲ್ ಸಂದೇಶದ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಈ ಪ್ರಕರಣದ ತಡವಾಗಿ ಬೆಳಕಿಗೆ ಬಂದಿದ್ದು, ಬಾಂಬ್ ಬೆದರಿಕೆ ಪ್ರಕರಣವನ್ನು ಪೊಲೀಸರು ಗೌಪ್ಯವಾಗಿಟ್ಟು ವಿಮಾನ ನಿಲ್ದಾಣದಲ್ಲಿ ಬಾಂಬ್ ಪರಿಶೀಲನೆ ಮಾಡಲಾಗಿದೆ. ಜೊತೆಗೆ, ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ.