ಜಯಮಾಲಾ ವಿರುದ್ಧ ಪಕ್ಷದಲ್ಲೇ ಅಪಸ್ವರ; ವಿರೋಧಿಗಳಿಗೆ ಇವರು ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?

Jun 17, 2018, 9:45 PM IST

ಎಚ್ ಡಿಕೆ ಸಚಿವ ಸಂಪುಟದಲ್ಲಿ ಮಹಿಳಾ ಮಕ್ಕಳ ಖಾತೆ ಸಚಿವೆಯಾಗಿ ಜಯಮಾಲಾ ಅಧಿಕಾರ ಸ್ವೀಕರಿಸಿದ್ದಾರೆ. ಈಗ ಇವರಿಗೆ ಮತ್ತೊಂದು ಜವಾಬ್ದಾರಿ ಕೊಡಲು ಪಕ್ಷ ತೀರ್ಮಾನ ಮಾಡಿದೆ. ವಿಧಾನ ಪರಿಷತ್ ಸಭಾ ನಾಯಕಿ ಸ್ಥಾನ ನೀಡಲು ತೀರ್ಮಾನಿಸುತ್ತಿದ್ದಂತೆ ಪಕ್ಷದಲ್ಲಿ ಅಪಸ್ವರ ಎದ್ದಿದೆ. ಜಯಮಾಲಾರಿಗೆ ಯಾವುದೇ ಕಾರಣಕ್ಕೂ ಸಭಾಪತಿ ಸ್ಥಾನ ನೀಡಬಾರದು. ನೀಡಿದ್ದೆ ಹೌದಾದರೆ ನಾವೆಲ್ಲಾ ಸಭಾತ್ಯಾಗ ಮಾಡಬೇಕಾಗುತ್ತದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.