ಸೆರೆಮನೆಯಲ್ಲಿ ಅಕ್ಷರ ಕ್ರಾಂತಿ; ನೂರಾರು ಖೈದಿಗಳ ಮನ ಪರಿವರ್ತಿಸಿದ ಯಲ್ಲಪ್ಪ

By Suvarna Web DeskFirst Published Feb 7, 2018, 4:22 PM IST
Highlights

ಯಾವುದೇ ಒಳ್ಳೆಯ ಉದ್ದೇಶಗಳು ಈಡೇರುವ ಮುನ್ನ ಸಾಕಷ್ಟು ಕೆಟ್ಟ ಗಳಿಗೆಗಳು ಎದುರಾಗುತ್ತವೆ. ನನ್ನ ಬದುಕಲ್ಲಿ ಆಗಿದ್ದೂ ಇದೆ. ನಾನು ಎಸಗಿದ ಕೃತ್ಯದಿಂದ ಜೈಲು ಸೇರಿದೆ. ಅದು ಒಳ್ಳೆಯದೋ, ಕೆಟ್ಟದ್ದೋ  ಎಂಬುದನ್ನು ಈಗ ಹೇಳಲಾರೆ. ಆದರೆ ಹಿಂದೆ ಆಗಿದೆಲ್ಲವನ್ನೂ ಮರೆತು ಜೈಲಿನಲ್ಲೇ ಓದಿಕೊಂಡಿದ್ದರಿಂದ ನನ್ನ ಜೀವನದ ದಿಕ್ಕೇ ಬದಲಾಗಿದೆ’ ಎಂದು ಹೇಳಿಕೊಳ್ಳುವ ಯಲ್ಲಪ್ಪ ಖೈದಿಗಳಿಗೆ ಮಾದರಿಯಾಗಿದ್ದಾರೆ.

ಬೆಂಗಳೂರು (ಫೆ.07): ‘ಯಾವುದೇ ಒಳ್ಳೆಯ ಉದ್ದೇಶಗಳು ಈಡೇರುವ ಮುನ್ನ ಸಾಕಷ್ಟು ಕೆಟ್ಟ ಗಳಿಗೆಗಳು ಎದುರಾಗುತ್ತವೆ. ನನ್ನ ಬದುಕಲ್ಲಿ ಆಗಿದ್ದೂ ಇದೆ. ನಾನು ಎಸಗಿದ ಕೃತ್ಯದಿಂದ ಜೈಲು ಸೇರಿದೆ. ಅದು ಒಳ್ಳೆಯದೋ, ಕೆಟ್ಟದ್ದೋ  ಎಂಬುದನ್ನು ಈಗ ಹೇಳಲಾರೆ. ಆದರೆ ಹಿಂದೆ ಆಗಿದೆಲ್ಲವನ್ನೂ ಮರೆತು ಜೈಲಿನಲ್ಲೇ ಓದಿಕೊಂಡಿದ್ದರಿಂದ ನನ್ನ ಜೀವನದ ದಿಕ್ಕೇ ಬದಲಾಗಿದೆ’ ಎಂದು ಹೇಳಿಕೊಳ್ಳುವ ಯಲ್ಲಪ್ಪ ಖೈದಿಗಳಿಗೆ ಮಾದರಿಯಾಗಿದ್ದಾರೆ.

ಕೋಪದ ಕೈಗೆ ಬುದ್ಧಿ ಕೊಟ್ಟು:  ದೊಡ್ಡಬಳ್ಳಾಪುರದ ವರಾದ ಯಲ್ಲಪ್ಪ ತನ್ನ ತಂದೆಯ ನೇಕಾರಿಕೆ ವೃತ್ತಿಯನ್ನು  ಮಾಡಿಕೊಂಡು ಜೀವನ ದ ಬಂಡಿ ಸಾಗಿಸುತ್ತಿರುತ್ತಾರೆ. ಹೀಗಿರುವಾಗ 2004 ರ ಮೇ 3 ರಂದು ನಗರದಲ್ಲಿ ಭಗತ್ ಸಿಂಗ್  ಹೆಸರಿನಲ್ಲಿ ನಿರ್ಮಾಣವಾಗಿದ್ದ ಕ್ರೀಡಾಂಗಣದ ಉದ್ಘಾಟನೆ ಅಂಗವಾಗಿ ಆಯೋಜಿಸಿದ್ದ ಕ್ರಿಕೆಟ್  ಟೂರ್ನಿಯಲ್ಲಿ ಯಲ್ಲಪ್ಪ ಮತ್ತವನ ತಂಡವೂ ಸೇರಿ ಆಡಿರುತ್ತದೆ. ಆಗ ಎದುರಾಳಿ ತಂಡದ ಮಧ್ಯೆ ಗಲಾಟೆ ನಡೆದು, ವಿಕೋಪಕ್ಕೆ ತಿರುಗಿ ಪರಸ್ಪರ ಕತ್ತಿ ಮಸೆಯುವ ಹಂತ ತಲುಪುತ್ತದೆ. ಎರಡೇ ದಿನದಲ್ಲಿ ಅಂದರೆ  ಮೇ 5 ರಂದು ಗಲಭೆ ಇನ್ನಷ್ಟು ಪ್ರಕೋಪಕ್ಕೆ ತಿರುಗಿ ಯಲ್ಲಪ್ಪ ವಿರೋಮಣಿಯೊಬ್ಬನನ್ನು ಕೊಲೆ ಮಾಡುತ್ತಾನೆ. ಈ ಪ್ರಕರಣದ ವಿಚಾರಣೆ ನಡೆದು 2007 ರಲ್ಲಿ ನ್ಯಾಯಾಲಯವು ಜೀವಾವಧಿ  ಶಿಕ್ಷೆ ವಿಧಿಸುತ್ತದೆ.

ಸೋತವನ ಬಾಳು  ಬೆಳಗಿತು ಶಿಕ್ಷಣ: ನಡುರಸ್ತೆಯಲ್ಲಿ ಎದುರಾಳಿಯನ್ನು ಕೊಂದು ಕಾರಾಗೃಹ ಸೇರಿ ದ ಯಲ್ಲಪ್ಪನ ಬಗ್ಗೆ ಎಲ್ಲೆಡೆ ಸುದ್ಧಿಯಾಯಿತು. ಪಾತಕ ಲೋಕವೂ ಯಲ್ಲಪ್ಪ ಅವರನ್ನು ತನ್ನತ್ತ ಸೆಳೆ ದುಕೊಳ್ಳಲು ಕೈ ಚಾಚಿತ್ತು. ಆದರೆ ಮಾಡಿದ ತಪ್ಪಿಗೆ ಇನ್ನೊಂದು ತಪ್ಪನ್ನು ಜೊತೆ ಸೇರಿಸಬಾರದು ಎಂ ದುಕೊಂಡು ಶಿಕ್ಷಣ ಪಡೆಯಲು ಮುಂದಾಗುತ್ತಾರೆ.

ಬಡತನದ ಕಾರಣದಿಂದ 7 ನೇ ತರಗತಿಗೆ ಮೊಟಕುಗೊಂಡಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸ ಬೇಕು ಎಂದು  ನಿರ್ಧಾರ ಮಾಡಿ 2006 ರಲ್ಲಿ ಆಗಿನ ಕಾರಾಗೃಹ ಇಲಾಖೆ ಮುಖ್ಯಸ್ಥ ಡಾ.ಎ.ಟಿ. ರಮೇಶ್  ಅವರು,  ಬೆಂಗಳೂರು ವಿಶ್ವವಿದ್ಯಾಲಯದ  ದೂರ ಶಿಕ್ಷಣ ವಿಭಾಗದ ಸಹಭಾಗಿತ್ವದಲ್ಲಿ ಅನಕ್ಷರಸ್ಥ ಸಜಾ ಬಂಧಿಗಳಿಗೆ ಅಕ್ಷರ ಕಲಿಕೆಗೆ ಆರಂಭಿಸಿದರು. ಇದರಿಂದ ಹದಿಮೂರು ವರ್ಷಗಳ ಬಳಿಕ ಮತ್ತೆ ಅಕ್ಷರ ಕಲಿಯುವ ಆಸಕ್ತಿಗೆ ಕಾರಾಗೃಹದ ಅಧಿಕಾರಿಗಳು,  ಬೆಂಗಳೂರು ವಿವಿ  ದೂರ ಶಿಕ್ಷಣ ಇಲಾಖೆ  ನಿರ್ದೇಶಕ ಪ್ರೊ.ಸಿ. ಮೈಲಾರಪ್ಪ ಅವರ ಪ್ರೋತ್ಸಾಹವೂ  ದೊರಕುತ್ತದೆ. ಇ ದರ ಪ್ರತಿಫಲವಾಗಿ ಬಿಎ ಪದವಿ, ಪತ್ರಿಕೋದ್ಯಮ ಹಾಗೂ ಸಾರ್ವಜನಿಕ  ಆಡಳಿತ ದಲ್ಲಿ ಸ್ನಾತಕೋತ್ತರ ಪ ದವಿ ಸಂಪಾದಿಸಿಕೊಂಡಿದ್ದಾರೆ ಯಲ್ಲಪ್ಪ.

ದೂರ ಶಿಕ್ಷಣ  ನಿ ರ್ದೇಶನಾಲಯ ಇಲಾಖೆ ಪದವಿ ವಿದ್ಯಾರ್ಥಿಗಳಾಗಿದ್ದ ಖೈದಿಗಳಿಗೆ ಕಾರಾಗೃಹದ ಹೊರಗೆ ಕಾಲೇಜುಗಳಲ್ಲಿ ಸಂಪರ್ಕ ತರಗತಿಗಳನ್ನು ಆಯೋಜಿಸಿತ್ತು. ಈ ವೇಳೆ ಖೈದಿಗಳಿಗೆ ಕೋಳ ಹಾಕಿ ಕರೆದುಕೊಂಡು ಹೋಗುತ್ತಿದ್ದರಿಂದ ಸಹ ವಿದ್ಯಾರ್ಥಿಗಳು ನಮ್ಮನ್ನು  ಬೇರೆಯದೇ ರೀತಿಯಲ್ಲಿ  ನೋಡುತ್ತಾರೆ. ಶಿಕ್ಷಣ ಕಲಿಯಲು ಬಂದಾಗಲೂ ನಾವು ಅಪರಾಧಿಗಳು ಎನ್ನುವ ಪಾಪ ಪ್ರಜ್ಞೆ ಕಾಡುತ್ತಲೇ ಇರುತ್ತದೆ. ಹಾಗಾಗಿ ಕಾಲೇಜಿನಲ್ಲಿ ಕೈಗೆ ಕೋಳ ಹಾಕುವ ಪದ್ಧತಿಯನ್ನು ಕೈ ಬಿಡಬೇಕು ಎಂದು ನ್ಯಾಯಾಲಯದ ಮೊರೆ ಹೋದರು ಯಲ್ಲಪ್ಪ.  ಅವರ ಮನವಿ ಪುರಸ್ಕರಿಸಿ ದ ನ್ಯಾಯಾಲಯವು, ಕೈದಿಗಳ ಕಾಲೇಜಿಗೆ ಹೋಗುವಾಗ ಕೈ ಕೊಳ ಹಾಕ ಬಾರ ದು ಎಂದು ಆದೇಶ ನೀಡಿತು. ಇದರಿಂದ ಕಲಿಯುವ ಖೈದಿಗಳ ಮನಸ್ಸಿನಲ್ಲಿ ಉತ್ಸಾಹ ಮೂಡಿತು.

ಪಾಠ ಮಾಡಲು ಮುಂದಾದ್ರು, ಪುಸ್ತಕ ಬರೆದ್ರು:

ಯಲ್ಲಪ್ಪ ತಾವು ಮಾತ್ರ ಓದಿ ಪ ದವೀಧರಾಗುವ ಬದಲಿಗೆ ಸಹ ಖೈದಿಗಳಲ್ಲೂ ಅಕ್ಷರ ದ ಹಣತೆ  ಬೆಳೆಗಲು ಯತ್ನಿಸಿ ದರು. ರಕ್ತ ಮೆತ್ತಿ ದ ಕೈಗಳನ್ನು ಶಿಕ್ಷಣದಿಂದ ತೊಳೆದರು. ಹಲವು ಮಂದಿ ಯಲ್ಲಪ್ಪ  ಅವರಿಂ ದ ಸ್ಫೂರ್ತಿಗೊಂಡು ಅಕ್ಷರಸ್ಥರಾ ದರು. ಈಗ  ಬೆಂಗಳೂರು  ಸೆಂಟ್ರಲ್ ಜೈಲಿನಲ್ಲಿ 87 ಖೈದಿಗಳು ಪ ದವಿ ಗಳಿಸಿದ್ದಾರೆ. ‘ನಾನು ವಕೀಲನಾಗ ಬೇಕು ಎಂಬ ಆಸೆ ಇತ್ತು. ಆದರೆ ಇದಕ್ಕೆ ಕಾನೂನು ತೊಡಕಿದೆ. ಹಾಗಾಗಿ ಪತ್ರಿಕೋ ದ್ಯಮ ಸ್ನಾತಕೋತ್ತರ ಪದವಿ ಮಾಡಿದೆ. ಮುಂದೆ ಜೈಲಿನಿಂದ ಬಿಡುಗಡೆಯಾದ ನಂತರ ಪತ್ರಕರ್ತ ಅಥವಾ ಶಿಕ್ಷಕನಾಗುವ ಆಸೆ ಇ ದೆ. ಮಕ್ಕಳಿಗೆ, ಸಮಾಜಕ್ಕೆ ಸಾಧ್ಯವಾದಷ್ಟು ಸೇವೆ ಮಾಡ ಬೇಕು ಎನ್ನುವ ಆಸೆ ಇದೆ’ ಎನ್ನುವ ಯಲ್ಲಪ್ಪ  ಜೈಲಲ್ಲಿಯೇ ಇ ದು ಪುಸ್ತಕವನ್ನೂ ಬರೆದಿದ್ದಾರೆ. ಜೈಲಿನ ಅಧಿಕಾರಿಗಳಿಂದ ಕಾರಾಗೃಹಗಳ ಸುಧಾರಣೆ ಕುರಿತು ಕೃತಿ ರಚಿಸಲು ಯಲ್ಲಪ೩ ಅವರಿಗೆ ಅನುಮತಿ ಸಿಕ್ಕಿದ ಪರಿಣಾಮ ರಾಜ್ಯದ ಎಂಟು ಕೇಂದ್ರ ಕಾರಾಗೃಹಗಳನ್ನು ಸುತ್ತಾಡಿ ಅಲ್ಲಿನ ನೈಜ ಪರಿಸ್ಥಿತಿ ಅರಿತು, ಎಂಟು ಖೈದಿಗಳ ಜೀವನ ಕಥಾನಕ ಒಳಗೊಂಡಂತೆ ‘ಸೆರೆವಾಸಿಗಳ ಪರಿವರ್ತನೆ ಮೇಲೆ ಕಾರಾಗೃಹ ಅಧಿಕಾರಿಗಳ ಪಾತ್ರ’ ಎಂಬ ಕೃತಿ ರಚಿಸಿದ್ದಾರೆ.

 

click me!