ರಾಜ್ಯದಲ್ಲಿ ಸೋತವರಿಗೆ ಮಣೆ, ಹಣೆ ಹಣೆ ಚೆಚ್ಚಿಕೊಂಡ ರಾಹುಲ್!

By Web Desk  |  First Published Aug 13, 2018, 3:55 PM IST

ಲೋಕಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ತಯಾರಿ ಆರಂಭಿಸಿವೆ. ಆದರೆ ಕಾಂಗ್ರೆಸ್ ತಯಾರಿ ಪಕ್ಷದ ಅಧ್ಯಕ್ಷರಿಗೆ ಸರಿ ಬಂದಿಲ್ಲ. ಲೋಕಸಭಾ ಚುನಾವಣಾ ಪೂರ್ವ ತಯಾರಿಯನ್ನು ಕಂಡ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಭಾವ್ಯರ ಪಟ್ಟಿ ನೋಡಿ ಅಕ್ಷರಶಃ ಹೌಹಾರಿದ್ದಾರೆ .


ಬೀದರ್(ಆ.13) ರಾಜ್ಯ ಕಾಂಗ್ರೆಸ್ ನಾಯಕರನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ನಾಯಕರ ಕಾರ್ಯಚಟುವಟಿಕೆ ನೋಡಿ ರಾಗಾ ಶಾಕ್ ಆಗಿದ್ದು ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದ್ದಾರೆ.

ರಾಜ್ಯದ 28 ಕ್ಷೇತ್ರಗಳಿಗೆ ಸಂಭವನೀಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ನೋಡಿದ ರಾಹುಲ್ ಕೆಂಡಾಮಂಡಲವಾಗಿದ್ದಾರೆ. ಸಂಭವನೀಯರ ಪಟ್ಟಿಯಲ್ಲಿ ಸೋತವರಿಗೆ ಕೈ ನಾಯಕರು ಮಣೆ ಹಾಕಿರುವುದು ರಾಹುಲ್ ಅಸಮಾಧಾನಕ್ಕೆ ಕಾರಣವಾಗಿದೆ.

Latest Videos

undefined

ಸೋತವರನ್ನ ಹೆಸರನ್ನೇ ಸಂಭವನೀಯ ಪಟ್ಟಿಯಲ್ಲಿ ಸೇರಿದಿದ್ದಕ್ಕೆ ರಾಹುಲ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ಗೆ ಪ್ರಶ್ನೆಗಳ ಸುರಿಮಳೆ ಎಸೆದಿದ್ದಾರೆ. ಸಚಿವರಾಗಿಯೂ ವಿಧಾನಸಭೆಯಲ್ಲಿ ಸೋತವರಿಗೆ ಟಿಕೆಟ್ ನೀಡಬೇಕಾ..? ವಿಧಾನ ಸಭೆಗೆ ಜನ ಅವರನ್ನ ತಿರಸ್ಕರಿಸಿದ ಮೇಲೆ, ಸಂಸದ ಸ್ಥಾನಕ್ಕೆ ಜನರು ಒಪ್ಪಿಕೊಳ್ತಾರಾ..? ಈ ಪಟ್ಟಿಯಲ್ಲಿ ಯಾವ ಲಾಜಿಕ್ ಇದೆ ಎಂದು ಪ್ರಶ್ನಿಸಿರುವ ರಾಗಾ ಪ್ರಶ್ನೆ ಮಾಡಿದ್ದರು ರಾಜ್ಯ ನಾಯಕರಿಗೆ ಉತ್ತರ ನೀಡಲು ವೇಣುಗೋಪಾಲ್ ತಾಕೀತು ಮಾಡಿದ್ದಾರೆ.

ವಿಧಾನ ಸಭೆಯಲ್ಲಿ ಸೋತು ಸುಣ್ಣಾದವರಿಗೆ ಎಂಪಿ ಟಿಕೆಟ್ ನೀಡಲು ರಾಜ್ಯ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ತಯಾರಿ ರಾಹುಲ್ ಗೆ ಸರಿ ಕಂಡಿಲ್ಲ. ಹಾಗಾದರೆ ರಾಹುಲ್ ಅಸಮಾಧಾನಕ್ಕೆ ಕಾರಣವಾದ ಹೆಸರುಗಳು ಯಾವವು?

*ಧಾರವಾಡ-ಮಾಜಿ ಸಚಿವ ವಿನಯ್ ಕುಲಕರ್ಣಿ(ಧಾರವಾಡದಿಂದ ಸೋಲು)

*ದಕ್ಷಿಣ ಕನ್ನಡ-ಮಾಜಿ ಸಚಿವ ರಮಾನಾಥ್ ರೈ(ಬಂಟ್ವಾಳ ಸೋಲು)

* ಉಡುಪಿ ಚಿಕ್ಕಮಗಳೂರು-ಸಚಿವ ವಿನಯ್ ಕುಮಾರ್ ಸೊರಕೆ(ಕಾಪು ಸೋಲು)

*ದಾವಣಗೆರೆ - ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್(ದಾವಣಗೆರೆ ಉತ್ತರ ಸೋಲು)

*ಶಿವಮೊಗ್ಗ - ಮಾಜಿ ಸಚಿವ ಕಿಮ್ಮನೆ ರತ್ನಾಕರ್(ತೀರ್ಥಹಳ್ಳಿ ಸೋಲು)

*ಹಾಸನ - ಮಾಜಿ ಸಚಿವ ಎ.ಮಂಜು(ಅರಕಲಗೂಡುಸೋಲು)

*ಕೊಪ್ಪಳ - ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ(ಯಲಬುರ್ಗಾ ಸೋಲು)

*ಬೆಂಗಳೂರು ದಕ್ಷಣ - ಪ್ರಿಯಾ ಕೃಷ್ಣ(ಗೋವಿಂದರಾಜನಗರ ಸೋಲು)

*ಉತ್ತರ ಕನ್ನಡ - ಭೀಮಣ್ಣ ಟಿ. ನಾಯ್ಕ್(ಶಿರಸಿ ಸೋಲು)

click me!