ಚೀನಾ ಬತ್ತಳಿಕೆಗೆ ಡೆಡ್ಲಿ ಬಾಹ್ಯಾಕಾಶ ನೌಕೆ

Published : Aug 07, 2018, 11:19 AM IST
ಚೀನಾ ಬತ್ತಳಿಕೆಗೆ ಡೆಡ್ಲಿ ಬಾಹ್ಯಾಕಾಶ ನೌಕೆ

ಸಾರಾಂಶ

ಶಬ್ದಕ್ಕಿಂತ 5 ಪಟ್ಟಿಗಿಂತ ಹೆಚ್ಚು ವೇಗವಾಗಿ ಬರುವಂಥ ಕ್ಷಿಪಣಿಗಳ ಮಾರ್ಗ, ವೇಗವನ್ನು ಪತ್ತೆ ಹಚ್ಚಲು ಅಸಾಧ್ಯವಾದಂಥ  ‘ಕ್ಸಿಂಗ್ ಕಾಂಗ್’ನಂತಹ ವಿಮಾನಗಳನ್ನು ಚೀನಾ ಅಭಿವೃದ್ಧಿ ಪಡಿಸಿದ್ದು, ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

ಬೀಜಿಂಗ್: ದೆಹಲಿ, ಮುಂಬೈನಂತಹ ನಗರಗಳ ಮೇಲೆ ಶತ್ರುದೇಶಗಳು ದಾಳಿ ನಡೆಸುವುದನ್ನು ತಪ್ಪಿಸುವ ಸಲುವಾಗಿ ಕ್ಷಿಪಣಿ ನಿರೋಧಕ ವ್ಯವಸ್ಥೆ ಅಳವಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. 

ಆದರೆ ಈಗ ವಿಶ್ವದಲ್ಲಿ ಲಭ್ಯವಿರುವ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಗಳನ್ನು ಛೇದಿಸಿ, ಅಣ್ವಸ್ತ್ರ ದಾಳಿ ನಡೆಸುವಂತಹ ಅತ್ಯಂತ ಅಪಾಯಕಾರಿ, ಅತಿ ಆಧುನಿಕ ಬಾಹ್ಯಾಕಾಶ ನೌಕೆಯೊಂದನ್ನು ಚೀನಾ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ. ತನ್ಮೂಲಕ ಮತ್ತೊಮ್ಮೆ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.

ಕ್ಸಿಂಗ್‌ಕಾಂಗ್-2 ಅಥವಾ ಸ್ಟಾರಿ ಸ್ಕೈ-2 ಎಂಬ ಹೆಸರಿನ ನೌಕೆ ಇದಾಗಿದ್ದು, ಶಬ್ದಕ್ಕಿಂತ 5.5 ರಿಂದ 6 ಪಟ್ಟು ವೇಗದಲ್ಲಿ (ಹೈಪರ್‌ಸಾನಿಕ್) ಶತ್ರು ದೇಶಗಳ ಮೇಲೆ ಎರಗಿ, ಅನಾಹುತ ಸೃಷ್ಟಿಸುತ್ತದೆ. ಅಮೆರಿಕ ಹಾಗೂ ರಷ್ಯಾದಂತಹ ಪ್ರಬಲ ರಾಷ್ಟ್ರಗಳು ಇಂತಹದ್ದೊಂದು ವಿಮಾನ ಅಭಿವೃದ್ಧಿಪಡಿಸಲು ಪ್ರಯೋಗದಲ್ಲಿ ನಿರತವಾಗಿರುವಾಗಲೇ, ಚೀನಾ ಆ ವಿಮಾನವನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ. ವಾಯವ್ಯ
ಚೀನಾದ ನಿರ್ದಿಷ್ಟ ಪ್ರದೇಶವೊಂದರಲ್ಲಿ ರಾಕೆಟ್ ಮೇಲಿಟ್ಟು ‘ಕ್ಸಿಂಗ್ ಕಾಂಗ್-2’ ನೌಕೆ ಉಡಾವಣೆ ಮಾಡಲಾಯಿತು. 10 ನಿಮಿಷ ಹಾರಾಟದ ಬಳಿಕ ರಾಕೆಟ್‌ನಿಂದ ಬೇರ್ಪಟ್ಟ ಯುದ್ಧ ವಿಮಾನ, ಸ್ವತಂತ್ರವಾಗಿ ಹಾರಾಡುತ್ತಾ, ಕಸರತ್ತುಗಳನ್ನು ನಡೆಸುತ್ತಾ ನಿರ್ದಿಷ್ಟ ಪ್ರದೇಶದಲ್ಲಿನ ಗುರಿಯನ್ನು ತಲುಪಿತು ಎಂದು ಚೀನಾದ ಏರೋಸ್ಪೇಸ್ ಏರೋಡೈನಾಮಿಕ್ಸ್ ಅಕಾಡೆಮಿ ಪ್ರಕಟಣೆ ಬಿಡುಗಡೆ ಮಾಡಿದೆ. 

ರಾಕೆಟ್‌ನಿಂದ ಬೇರ್ಪಟ್ಟ ಬಳಿಕ ವಾತಾವರಣದಲ್ಲಿ ಹಾರಾಡುವ ಈ ನೌಕೆ, ಶಬ್ದಕ್ಕಿಂತ ವೇಗವಾಗಿ ಚಲಿಸುವಾಗ ಸೃಷ್ಟಿಯಾಗುವ ಘರ್ಷಣೆಯ ಅಲೆಗಳನ್ನು ಬಳಸಿಕೊಂಡು ಶರವೇಗದಲ್ಲಿ ತೇಲುತ್ತಾ ಬರಲಿದೆ ಎಂದು ಸೇನಾ ತಜ್ಞರೊಬ್ಬರು ತಿಳಿಸಿದ್ದಾರೆ. ಈ ವಿಮಾನ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುತ್ತದೆ. 

ಕ್ಷಿಪಣಿ ಹೊಡೆದುರುಳಿಸುವ ವ್ಯವಸ್ಥೆಗಳಿಗಿನ್ನು ಕಷ್ಟ 

ಶತ್ರುದೇಶಗಳು ಉಡಾವಣೆ ಮಾಡುವ ಕ್ಷಿಪಣಿಗಳನ್ನು ಮಾರ್ಗಮಧ್ಯೆ ಹೊಡೆದುರುಳಿಸು ವಂತಹ ಕ್ಷಿಪಣಿ ನಿರೋಧಕ ವ್ಯವಸ್ಥೆ ಈಗಾಗಲೇ ಹಲವು ದೇಶಗಳ ಬಳಿ ಇದೆ. ‘ಕ್ರೂಸ್’ ಕ್ಷಿಪಣಿ, ಗುರುತ್ವ ಬಲದ ಆಧಾರದಲ್ಲಿ ದಾಳಿ ನಡೆಸುವ ‘ಬ್ಯಾಲಿಸ್ಟಿಕ್’ ಕ್ಷಿಪಣಿಗಳನ್ನು ತಡೆಯುವ ಸಾಮರ್ಥ್ಯ ಹೊಂದಿವೆ. ಆದರೆ ಶಬ್ದಕ್ಕಿಂತ 5 ಪಟ್ಟಿಗಿಂತ ಹೆಚ್ಚು ವೇಗವಾಗಿ ಬರುವ ‘ಕ್ಸಿಂಗ್ ಕಾಂಗ್’ನಂತಹ ವಿಮಾನಗಳ ಮಾರ್ಗ ಪತ್ತೆ ಹಚ್ಚುವುದು ಅಸಾಧ್ಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪ್ರಧಾನಿಗೆ ಜೋರ್ಡಾನ್‌ನಲ್ಲಿ ಭವ್ಯ ಸ್ವಾಗತ: ಐಎಂಇಸಿ ಕಾರಿಡಾರ್ ಕುರಿತು ಚರ್ಚೆ ನಿರೀಕ್ಷೆ
ಸಿಡ್ನಿಯ ಬೋಂಡಿ ಬೀಚ್‌ನಲ್ಲಿ 15 ಜನರ ಬಲಿ ಪಡೆದ ಯಹೂದಿ ಹಬ್ಬದ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನಿ ಅಪ್ಪ ಮಗ