ಮಕ್ಕಳ ಅತ್ಯಾಚಾರಿಗಳಿಗಿನ್ನು ಗಲ್ಲೇ ಗತಿ

By Web DeskFirst Published Aug 7, 2018, 10:54 AM IST
Highlights

ಏನೂ ಅರಿಯದ ಮುಗ್ಧ ಕಂದಮ್ಮಗಳ ಮೇಲೆ ತಮ್ಮ ಕಾಮುಕತೆಯನ್ನು ತೋರುವ ಪಾಪಿಗಳಿಗಿನ್ನು ಉಳಿಗಾಲವಿಲ್ಲ. ಇಂಥ ಅಮಾಯಕ ಮಕ್ಕಳ ಮೇಲೆ ಎರಗುವ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡುವಂಥ ಮಸೂದೆ ಸಂಸತ್ತು ಅನುಮೋದನೆ ನೀಡಿದೆ. 

ನವದೆಹಲಿ: 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರವೆಸುಗುವವರಿಗೆ ಗಲ್ಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಇನ್ನಷ್ಟು ಕಠಿಣ ಶಿಕ್ಷೆ ನೀಡಲು ಅವಕಾಶ ನೀಡುವ ಮಸೂದೆಗೆ ಸಂಸತ್ ತನ್ನ ಅನುಮೋದನೆ ನೀಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂಥ ಪ್ರಕರಣಗಳ ತ್ವರಿತ ವಿಚಾರಣೆಯ ಜೊತೆಗೆ ದೋಷಿಗಳಿಗೆ ಕಠಿಣ ಶಿಕ್ಷೆ ದೊರಕುವ ವಿಶ್ವಾಸ ವ್ಯಕ್ತವಾಗಿದೆ.

ಜುಲೈ 30ರಂದು ಲೋಕಸಭೆಯ ಅನುಮೋದನೆ ಪಡೆದುಕೊಂಡಿದ್ದ ಮಸೂದೆಗೆ ಸೋಮವಾರ ರಾಜ್ಯಸಭೆ ಧ್ವನಿಮತದ ಅನುಮೋದನೆ ನೀಡಿತು. ಜಮ್ಮು-ಕಾಶ್ಮೀರದ ಕಠುವಾದಲ್ಲಿ ಬಾಲಕಿಯ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿ ಆಕ್ರೋಶ ಬುಗಿಲೆದ್ದಿದ್ದ ಸಂದರ್ಭ ಕ್ರಿಮಿನಲ್ ಕಾನೂನು (ತಿದ್ದುಪಡಿ) ವಿಧೇಯಕ ರೂಪಿಸಲಾಗಿತ್ತು.

ನೂತನ ಕಾನೂನಿನ ಪ್ರಕಾರ, ಅತ್ಯಾಚಾರ ಪ್ರಕರಣಗಳಲ್ಲಿದ್ದ ಕನಿಷ್ಠ ಏಳು ವರ್ಷ ಶಿಕ್ಷೆಯನ್ನು ಹತ್ತು ವರ್ಷಕ್ಕೆ ಏರಿಸಲಾಗಿದೆ. 16ಕ್ಕಿಂತ ಕಡಿಮೆ ವಯಸ್ಸಿನ ಯುವತಿಯ ಅತ್ಯಾಚಾರ ವಿಧಿಸಲಾಗುತ್ತಿದ್ದ ಕನಿಷ್ಠ ಶಿಕ್ಷೆಯನ್ನು ಹತ್ತರಿಂದ 20ಕ್ಕೆ ಏರಿಸಲಾಗಿದೆ.
 

click me!