ಗುಜರಾತ್: ಐದು ಪಾಕಿಸ್ತಾನಿ ಮೀನುಗಾರಿಕಾ ಬೋಟ್ ವಶ!

By Web DeskFirst Published Oct 12, 2019, 9:05 PM IST
Highlights

ಗುಜರಾತ್‌ನಲ್ಲಿ ಐದು ಪಾಕಿಸ್ತಾನಿ ಮೀನುಗಾರಿಕಾ ಬೋಟ್ ವಶ| ಗುಜರಾತ್‌ನ ಹರಮಿ ನುಲ್ಲಾ ಪ್ರದೇಶ| ನಿಯಮಿತ ಶೋಧ ಕಾರ್ಯಾಚರಣೆ ವೇಳೆ ಬೋಟ್ ವಶಕ್ಕೆ ಪಡೆದ ಗಡಿ ಭದ್ರತಾ ಪಡೆ| 

ಬುಜ್(ಅ.12): ಗುಜರಾತ್‌ನ ಹರಮಿ ನುಲ್ಲಾ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ(BSF) ಐದು ಪಾಕಿಸ್ತಾನಿ ಮೀನುಗಾರಿಕಾ ಬೋಟ್‌ಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ನಿಯಮಿತ ಶೋಧ ಕಾರ್ಯಾಚರಣೆ ವೇಳೆಯಲ್ಲಿ ಈ ಅನುಮಾನಾಸ್ಪದ ಬೋಟ್‌ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಗಡಿ ಭದ್ರತಾ ಪಡೆ ಮಾಹಿತಿ ನೀಡಿದೆ.

Border Security Force, Gujarat: BSF seized 5 Pakistan
fishing boats during a special operation in Harami Nullah area y'day at about 2245 hours. A thorough search operation of the area has been launched&the search operation is still underway. Till now nothing suspicious recovered. pic.twitter.com/vfCS2k1Kso

— ANI (@ANI)

ಅಕ್ಟೋಬರ್ 11 ರಂದು ರಾತ್ರಿ 10-45 ರ ಸುಮಾರಿನಲ್ಲಿ ಹರಮಿ ನುಲ್ಲಾ ಪ್ರದೇಶದಲ್ಲಿ ಪಾಕಿಸ್ತಾನಕ್ಕೆ ಸೇರಿದ ಐದು ಮರದ ಮೀನುಗಾರಿಕಾ ಬೋಟ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಳೆದ ವಾರ ಪಾಕಿಸ್ತಾನದ ಎರಡು ಮರದ ಮೀನುಗಾರಿಕಾ ಬೋಟ್‌ಗಳನ್ನು ಗಡಿ ಭದ್ರತಾ ಪಡೆ ವಶಕ್ಕೆ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
 

click me!