ಭಾರೀ ವೈರಲ್ ಆಯ್ತು ಬಿಜೆಪಿ ಟ್ವೀಟ್

By Web DeskFirst Published Dec 30, 2018, 9:06 AM IST
Highlights

ಮನಮೋಹನ ಸಿಂಗ್ ಅವರ ಜೀವನ ಆಧರಿಸಿದ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರವು ವಿವಾದಕ್ಕೀಡಾಗಿರುವ ನಡುವೆಯೇ, ಇದೇ ಚಿತ್ರದ ಶೀರ್ಷಿಕೆ ಇಟ್ಟುಕೊಂಡು ಕರ್ನಾಟಕ ಬಿಜೆಪಿ ಘಟಕವು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಾಲೆಳೆದಿದೆ. 

ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಜೀವನ ಆಧರಿಸಿದ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ (ಆಕಸ್ಮಿಕ ಪ್ರಧಾನಿ) ಚಿತ್ರವು ವಿವಾದಕ್ಕೀಡಾಗಿರುವ ನಡುವೆಯೇ, ಇದೇ ಚಿತ್ರದ ಶೀರ್ಷಿಕೆ ಇಟ್ಟುಕೊಂಡು ಕರ್ನಾಟಕ ಬಿಜೆಪಿ ಘಟಕವು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಾಲೆಳೆದಿದೆ. 

‘ಆ್ಯಕ್ಸಿಡೆಂಟಲ್ ಸಿಎಂ ಎಂಬ ಸಿನಿಮಾ ತೆಗೆದರೆ ಕುಮಾರಸ್ವಾಮಿ ಅವರ ಪಾತ್ರ ಮಾಡೋರ್ಯಾರು?’ ಎಂದು ರಾಜ್ಯ ಬಿಜೆಪಿ, ಟ್ವೀಟರ್‌ನಲ್ಲಿ ವ್ಯಂಗ್ಯವಾಡಿದೆ. ಈ ಟ್ವೀಟ್ ಭಾರಿ ವೈರಲ್ ಆಗಿದೆ.

If there was a movie titled who will play the role of ?

— BJP Karnataka (@BJP4Karnataka)

ನಾನೂ ಆ್ಯಕ್ಸಿಡೆಂಟಲ್ ಪಿಎಂ- ದೇವೇಗೌಡ: ಈ ನಡುವೆ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ‘ಆಕ್ಸಿಡೆಂಟಲ್ ಪಿಎಂ ಸಿನಿಮಾ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನಾನೂ ಒಬ್ಬ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎಂದು ಹಾಸ್ಯದ ಧಾಟಿಯಲ್ಲಿ ಚಟಾಕಿ ಹಾರಿಸಿದರು.

click me!