ಕೈಯಲ್ಲಿ ಮಲದ ಜಾಡಿ ಹಿಡಿದು ಶೃಂಗಸಭೆಯಲ್ಲಿ ಬಿಲ್ ಗೇಟ್ಸ್‌ ಭಾಷಣ!

By Web DeskFirst Published Nov 8, 2018, 8:52 AM IST
Highlights

ಅಭಿವೃದ್ಧಿಶೀಲ ರಾಷ್ಟ್ರಗಳ ಸಮಸ್ಯೆಯನ್ನ ವಿಶ್ವದ ಶ್ರೀಮಂತ ವ್ಯಕ್ತಿ ಬಿಲ್‌ ಗೇಟ್ಸ್‌ ಬಿಚ್ಚಿಟ್ಟಿದ್ದಾರೆ. ಕೈಯಲಲ್ಲಿ ಮಲದ ಜಾಡಿ ಹಿಡಿದು ಗೇಟ್ಸ್ ಶೃಂಗಸಭೆಯಲಲಿ ಭಾಷಣ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಅಷ್ಟಕ್ಕೂ ಬಿಲ್ ಗೇಟ್ಸ್ ಈ ರೀತಿ ಭಾಷಣ ಮಾಡಲು ಕಾರಣವೇನು? ಇಲ್ಲಿದೆ ವಿವರ.

ಬೀಜಿಂಗ್‌(ನ.08): ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮೈಕ್ರೋಸಾಫ್ಟ್‌ ಕಂಪನಿ ಒಡೆಯ ಬಿಲ್‌ ಗೇಟ್ಸ್‌ ಅವರು ಕೈಯಲ್ಲಿ ಮಲ ತುಂಬಿದ ಜಾಡಿ (ಜಾರ್‌) ಹಿಡಿದುಕೊಂಡು ವೇದಿಕೆಯೊಂದರಲ್ಲಿ ಶೌಚಾಲಯದ ಅವಶ್ಯಕತೆ ಕುರಿತು ಭಾಷಣ ಮಾಡಿದ ಅಪರೂಪದ ಘಟನೆ ಬೀಜಿಂಗ್‌ನಲ್ಲಿ ನಡೆದಿದೆ.

ಭವಿಷ್ಯದ ಶೌಚಾಲಯ ಕುರಿತು ಬೀಜಿಂಗ್‌ನಲ್ಲಿ ಸಭೆಯೊಂದು ಆಯೋಜನೆಗೊಂಡಿತ್ತು. ಆ ಕಾರ್ಯಕ್ರಮದಲ್ಲಿ ಮಾತನಾಡಿದ ಗೇಟ್ಸ್‌ ಅವರು ಮಲ ತುಂಬಿದ ಜಾರ್‌ ಅನ್ನು ಪ್ರದರ್ಶಿಸಿದರು. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಶೌಚಾಲಯಗಳ ಕೊರತೆಯಿಂದ ಯಾವೆಲ್ಲಾ ಸಮಸ್ಯೆ ಅನುಭವಿಸುತ್ತಿವೆ ಎನ್ನುವುದನ್ನು ತೋರಿಸುವುದು ಅವರ ಈ ಕಸರತ್ತಿನ ಉದ್ದೇಶವಾಗಿತ್ತು.

‘ನೈರ್ಮಲ್ಯ ಇಲ್ಲದ ಕಡೆ ಇದಕ್ಕಿಂತ ಹೆಚ್ಚಿನದ್ದು ಕಾಣುತ್ತದೆ’ ಎಂದು ಮಲವನ್ನು ತೋರಿಸಿ ಹೇಳಿದ ಗೇಟ್ಸ್‌, ಬಯಲಲ್ಲಿ ಆಡುವ ಮಕ್ಕಳು ಯಾವಾಗಲೂ ಇದನ್ನು ನೋಡಬೇಕಾಗುತ್ತದೆ. ಸಮಸ್ಯೆಗೆ ತುತ್ತಾಗಬೇಕಾಗುತ್ತದೆ. ಗುಣಮಟ್ಟದ ಜೀವನಕ್ಕಾಗಿ ಮಾತ್ರವೇ ಅಲ್ಲದೆ, ರೋಗ, ಮರಣ ಹಾಗೂ ಅಪೌಷ್ಟಿಕತೆಯ ಕಾರಣಗಳಿಂದಾಗಿ ಈ ವಿಷಯದ ಬಗ್ಗೆ ನಾವು ತಲೆಕೆಡಿಸಿಕೊಳ್ಳಬೇಕಾಗುತ್ತದೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.

ಗೇಟ್ಸ್‌ ಅವರು ಈ ರೀತಿ ವಿಚಿತ್ರ ನಡವಳಿಕೆಯಿಂದ ಗಮನ ಸೆಳೆದಿದ್ದು ಇದೇ ಮೊದಲಲ್ಲ. 2009ರಲ್ಲಿ ಮಲೇರಿಯಾದ ಅಪಾಯದ ಬಗ್ಗೆ ವಿವರಿಸುತ್ತಲೇ ಸೊಳ್ಳೆಗಳನ್ನು ಸಮ್ಮೇಳನವೊಂದರಲ್ಲಿ ಏಕಾಏಕಿ ಬಿಡುಗಡೆ ಮಾಡಿದ್ದರು. ನೆರೆದಿದ್ದವರು ಹೌಹಾರುವಷ್ಟರಲ್ಲಿ, ಅವು ರೋಗಮುಕ್ತ ಸೊಳ್ಳೆಗಳು ಎಂದು ಧೈರ್ಯ ತುಂಬಿದ್ದರು!

click me!