ಭಾರತದಲ್ಲಿ ಶೀಘ್ರದಲ್ಲೇ ಬಿಕಿನಿ ಏರ್’ಲೈನ್ ಆರಂಭ?

By Suvarna Web DeskFirst Published Mar 19, 2018, 5:25 PM IST
Highlights
  • ವಿಯೆಟ್ನಾಂ’ನ ಕೈಗೆಟಕುವ ದರದ ವಿಮಾನಯಾನ ಸಂಸ್ಥೆಯೆಂದೇ ಖ್ಯಾತವಾಗಿರುವ ವಿಯೆಟ್’ಜೆಟ್
  • ಕಂಪನಿಯು ಈಗಾಗಲೇ ದೆಹಲಿಯಿಂದ ಹೋ ಚಿ ಮಿನ್ ನಗರಕ್ಕೆ ವಾರಕ್ಕೆ ನಾಲ್ಕು ಬಾರಿ ವಿಮಾನಸೇವೆಯನ್ನು ಘೋಷಿಸಿದೆ

ವಿಯೆಟ್ನಾಂ’ನ ಕೈಗೆಟಕುವ ದರದ ವಿಮಾನಯಾನ ಸಂಸ್ಥೆಯೆಂದೇ ಖ್ಯಾತವಾಗಿರುವ ವಿಯೆಟ್’ಜೆಟ್ ಕಂಪನಿಯು ಭಾರತದಲ್ಲಿಯೂ ತನ್ನ ಸೇವೆಯನ್ನು ಆರಂಭಿಸಲಿದೆಯೆಂದು ವರದಿಯಾಗಿದೆ.

ಗ್ಯುಯೆನ್ ಥಿ ಫಾಂಗ್ ಎಂಬ ಮಹಿಳಾ ಉದ್ಯಮಿ ಒಡೆತನದಲ್ಲಿರುವ ಈ ವಿಮಾನಯಾನ ಸಂಸ್ಥೆಯು ಬಿಕಿನಿ ಏರ್’ಲೈನ್ಸ್ ಎಂದೇ ಜನಪ್ರಿಯ! ಹೆಸರೇ ಸೂಚಿಸುವಂತೆ, ಈ ಕಂಪನಿಯ ವಿಮಾನಗಳಲ್ಲಿ ಏರ್’ಹಾಸ್ಟೆಸ್’ಗಳು ಬಿಕಿನಿ ಅಥವಾ ಈಜುಡುಗೆ ಧರಿಸಿರುತ್ತಾರೆ!

ವರದಿಗಳ ಪ್ರಕಾರ ಮುಂಬರುವ ಜುಲೈ-ಆಗಸ್ಟ್’ನಲ್ಲಿ ಈ ಸಂಸ್ಥೆಯು ಭಾರತದಲ್ಲಿ ಕಾರ್ಯಾರಂಭ ಮಾಡಲಿದೆ.

ಏರ್’ಹಾಸ್ಟೆಸ್’ಗಳ ವಿಭಿನ್ನವಾದ ಧಿರಿಸಿನಿಂದಾಗಿ ವಿಯೆಟ್’ಜೆಟ್ ವಿಮಾನಯಾನ ಸಂಸ್ಥೆಯು ವಿಯೆಟ್ನಾಂ’ನಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಸಂಸ್ಥೆಯ ಒಡತಿ ಗ್ಯುಯೆನ್ ಥಿ ಫಾಂಗ್ ಆ ಮೂಲಕ ದೇಶದ ಪ್ರಪಥಮ ಮಹಿಳಾ ಬಿಲಿಯನರ್ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

ಕಂಪನಿಯು ಈಗಾಗಲೇ ದೆಹಲಿಯಿಂದ ಹೋ ಚಿ ಮಿನ್ ನಗರಕ್ಕೆ ವಾರಕ್ಕೆ ನಾಲ್ಕು ಬಾರಿ ವಿಮಾನಸೇವೆಯನ್ನು ಘೋಷಿಸಿದೆ.

ಪರಿಚಾರಕಿಯರ ಧಿರಿಸಿನ ಕಾರಣದಿಂದಾಗಿ ಇದು ಜಗತ್ತಿನಲ್ಲೇ ವಿವಾದಾತ್ಮಕ ವಿಮಾನಸಂಸ್ಥೆಯೆಂದು ಹೇಳಲಾಗುತ್ತಿದೆ. ಏಕೆಂದರೆ ಬಹಳಷ್ಟು ದೇಶಗಳು ಏರ್’ಹಾಸ್ಟೆಸ್’ಗಳ ಈ ಡ್ರೆಸ್ ಕೋಡ್’ಗೆ ವಿರೋಧ ವ್ಯಕ್ತಪಡಿಸಿವೆ.  ಭಾರತದಲ್ಲೂ ಇದಕ್ಕೆ ವಿರೋಧ ವ್ಯಕ್ತವಾಗುವುದನ್ನು ಅಲ್ಲಗೆಳೆಯುವಂತಿಲ್ಲ.

click me!