ಬಿಗ್ 3: ಹೊಳಲ್ಕೆರೆ ನಿರಾಶ್ರಿತರಿಗೆ ನ್ಯಾಯ ಸಿಕ್ಕಿತೆ?

Jul 14, 2018, 2:36 PM IST

ಹೊಳಲ್ಕೆರೆ(ಜು.14): ತಾಲೂಕಿನ ರಾಮಗಿರಿ ಬಡಾವಣೆಯಲ್ಲಿ ವಾಸಿಸುತ್ತಿದ್ದ ಜನರನ್ನು, ಬೇರೆ ಸ್ಥಳದಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿ ಒಕ್ಕಲೆಬಿಸಿತ್ತು.

ಮಾಜಿ ಸಚಿವ ಹೆಚ್. ಆಂಜನೇಯ ಈ ಜನರಿಗೆ ಆರ್ ಸಿಸಿ ಮನೆ ಕಟ್ಟಿ ಕೊಟುವುದಾಗಿ ಭರವಸೆ ನೀಡಿ ರಾಮಗಿರಿ ಬಡಾವಣೆ ಖಾಲಿ ಮಾಡಿಸಿದ್ದರು. ಆದರೆ ಕೇವಲ ಎರಡು ಮನೆ ಕಟ್ಟಿ ಕೈ ಎತ್ತಿದ್ದರು ಆಂಜನೇಯ. 

ಇವರ ಬದುಕು ಮೂರಾಬಟ್ಟೆಯಾಗಲಿದೆ ಎಂದು ಸುವರ್ಣ ನ್ಯೂಸ್ ಬಿಗ್ ೩ ವರದಿ ಮಾಡಿದ ಬಳಿಕ ಶಾಸಕ ಚಂದ್ರಪ್ಪ ಶಂಕುಸ್ಥಾಪನೆ ಕೂಡ ನೆರವೇರಿಸಿ ಶೀಘ್ರದಲ್ಲೇ ಮನೆಗಳ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು.

ಜನಪ್ರತಿನಿಧಿಗಳ ಈ ಭರವಸೆ ಎಲ್ಲಿಗೆ ಬಂದು ನಿಂತಿದೆ. ನಿರಾಶ್ರಿತರಿಗೆ ಮನೆ ಸಿಗಲಿದೆಯೇ?. ನಿರಾಶ್ರಿತರಿಗೆ ಮನೆ ಸಿಗುವವರೆಗೂ ಸುವರ್ಣ ನ್ಯೂಸ್  ಸುಮ್ಮನೆ ಕೂರಲ್ಲ ಎಂಬುದು ಈ ವಿಡಿಯೋ ಸಾಬೀತು ಮಾಡಿದೆ.