ಹೆಲಿಕಾಪ್ಟರ್‌ಗಿಲ್ಲ ಅನುಮತಿ: ಫೋನ್‌ನಲ್ಲೇ ಮಾತಾಡಿದ ಯೋಗಿ!

By Web DeskFirst Published Feb 3, 2019, 4:03 PM IST
Highlights

ಪ.ಬಂಗಾಳದಲ್ಲಿ ಮುಂದುವರೆದ ಟಿಎಂಸಿ VS ಬಿಜೆಪಿ ವಾರ್| ಉತ್ತರ ಪ್ರದೇಶ ಸಿಎಂ ಹೆಲಿಕಾಪ್ಟರ್‌ ಇಳಿಯಲು ಅನುಮತಿ ನಿರಾಕರಣೆ| ಫೋನ್ ಮೂಲಕವೇ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್| ಉತ್ತರ ಬಂಗಾಳದ ರಾಯ್‌ಗಂಜ್ ಮತ್ತು ಬಲೂರ್‌ಘಾಟ್‌ನಲ್ಲಿ ಯೋಗಿ ಸಭೆ|

ಕೋಲ್ಕತ್ತಾ(ಫೆ.03): ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಲಿಕಾಪ್ಟರ್ ಇಳಿಸಲು ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿದೆ. 

Uttar Pradesh Chief Minister Office: The permission for the CM Yogi Adityanath's rally in West Bengal today has been declined by the West Bengal government without any prior notice. (File pic) pic.twitter.com/FQmTbsG1fV

— ANI UP (@ANINewsUP)

ಉತ್ತರ ಬಂಗಾಳದ ರಾಯ್‌ಗಂಜ್ ಮತ್ತು ಬಲೂರ್‌ಘಾಟ್‌ನಲ್ಲಿ ಇಂದು ಯೋಗಿ ಒಟ್ಟು ಎರಡು ರ‍್ಯಾಲಿಗಳಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಹೆಲಿಕಾಪ್ಟರ್ ಇಳಿಯಲು ಅನುಮತಿ ನೀಡದಿರುವುದರಿಂದ ಫೋನ್ ಮುಖಾಂತರವೇ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ.

West Bengal: Visuals from Balurghat in South Dinajpur district. UP CM Yogi Adityanath will address a public rally though mobile phone, shortly. pic.twitter.com/t6vQNTZy8C

— ANI (@ANI)

ಈ ಮೊದಲು ಮಾಲ್ಡಾ ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಹೆಲಿಕಾಪ್ಟರ್‌ ಇಳಿಸುವುದಕ್ಕೂ ಮಮತಾ ಸರ್ಕಾರ ಅನುಮತಿ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

UP CM in Lucknow while addressing a rally in Balurghat,South Dinajpur via telephone:Mamata Ji must accept that you don’t misuse admn. in a democracy, the way it's being done in West Bengal.The way Bengal’s admn is functioning as the workers of TMC, should not be acceptable at all pic.twitter.com/3WArf2f9hR

— ANI UP (@ANINewsUP)
click me!