ಸಂಪುಟ ವಿಸ್ತರಣೆ ಅಲ್ಲ, ಸಂಕಟ ವಿಸ್ತರಣೆ: ವಿಜಯೇಂದ್ರ ಲೇವಡಿ

By Web DeskFirst Published Dec 25, 2018, 1:04 PM IST
Highlights

ಸಚಿವ ಸಂಪುಟ ವಿಸ್ತರಣೆ ಆಗಿಲ್ಲ ಬದಲಿಗೆ ಸಂಕಟ ವಿಸ್ತರಣೆ ಆಗಿದೆ ಎಂದು  ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ವೈ ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಸರ್ಕಾರ ರೈತರ ಸಾಲ, ಬರ ಪರಿಸ್ಥಿತಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ.  ಸಾಲಮನ್ನಾ ವಿಷಯದಲ್ಲಿ ಸರ್ಕಾರ ಕುಂಟು ನೆಪ ಹೇಳುತ್ತಿದೆ.  ರಾಷ್ಟೀಕೃತ ಬ್ಯಾಂಕ್ ಗಳ ಸಾಲಮನ್ನಾ ವಿಷಯದಲ್ಲಿ ಬಿಜೆಪಿ ನಾಯಕರು ಅಡ್ಡಗಾಲು ಹಾಕ್ತಿದ್ದಾರೆ ಅಂತ ಆರೋಪಕ್ಕೆ ವಿಜಯೇಂದ್ರ ಕಿಡಿಕಾರಿದ್ದಾರೆ

ಗದಗ (ಡಿ. 25): ಸಚಿವ ಸಂಪುಟ ವಿಸ್ತರಣೆ ಆಗಿಲ್ಲ ಬದಲಿಗೆ ಸಂಕಟ ವಿಸ್ತರಣೆ ಆಗಿದೆ ಎಂದು  ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ವೈ ವಿಜಯೇಂದ್ರ ಲೇವಡಿ ಮಾಡಿದ್ದಾರೆ. 

ಸರ್ಕಾರ ರೈತರ ಸಾಲ, ಬರ ಪರಿಸ್ಥಿತಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ.  ಸಾಲಮನ್ನಾ ವಿಷಯದಲ್ಲಿ ಸರ್ಕಾರ ಕುಂಟು ನೆಪ ಹೇಳುತ್ತಿದೆ.  ರಾಷ್ಟೀಕೃತ ಬ್ಯಾಂಕ್ ಗಳ ಸಾಲಮನ್ನಾ ವಿಷಯದಲ್ಲಿ ಬಿಜೆಪಿ ನಾಯಕರು ಅಡ್ಡಗಾಲು ಹಾಕ್ತಿದ್ದಾರೆ ಅಂತ ಆರೋಪಕ್ಕೆ ವಿಜಯೇಂದ್ರ ಕಿಡಿಕಾರಿದ್ದಾರೆ. 

ಸಮ್ಮಿಶ್ರ ಸರ್ಕಾರ ತನ್ನ ಹುಳುಕು ಮುಚ್ಚಿಕೊಳ್ಳಲು ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡುತ್ತಿದೆ.  ಸಾಲಮನ್ನಾಕ್ಕೆ ಷರತ್ತುಗಳನ್ನು ಹಾಕಿ ರೈತರನ್ನು ಗೊಂದಲಕ್ಕೆ ಸಿಲುಕಿಸುವ ಕೆಲಸ ಮಾಡಿದೆ.  ಉತ್ತರ ಕರ್ನಾಟಕ ಬರಗಾಲ, ಸಾಲಮನ್ನಾ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.  


ಕೇಂದ್ರ ಸಚಿವ ಪಿಯೂಶ್ ಗೋಯೆಲ್, ಕಾಂಗ್ರೆಸ್‌ ಶಾಸಕ ಆನಂದ್ ಸಿಂಗ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ,  ಶಿಷ್ಟಾಚಾರ ಪ್ರಕಾರ ಕೇಂದ್ರ ಸಚಿವರು ಬಂದಾಗ ಹೋಗಿದ್ದಾರೆ.  ಯಡಿಯೂರಪ್ಪ ಸಿಎಂ ಆಗುವುದನ್ನು ಜನ ತೀರ್ಮಾನ ಮಾಡ್ತಾರೆ ಸಿದ್ದರಾಮಯ್ಯ ಅಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ. 

click me!