ಕರಾವಳಿಯಲ್ಲಿ ‘ಮಹಾ’ ಚಂಡಮಾರುತ ಎಚ್ಚರಿಕೆ

By Kannadaprabha NewsFirst Published Nov 1, 2019, 9:13 AM IST
Highlights

ಅರಬ್ಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತ ಗುರುವಾರ ಗಂಭೀರ ಸ್ವರೂಪದ ಚಂಡಮಾರುತವಾಗಿ ಬದಲಾಗಿದೆ. ಮತ್ತೊಂದು ಚಂಡಮಾರುತ ಟಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. 

ಚೆನ್ನೈ [ನ.01]:  ಅರಬ್ಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತ ಗುರುವಾರ ಗಂಭೀರ ಸ್ವರೂಪದ ಚಂಡಮಾರುತವಾಗಿ ಬದಲಾಗಿದೆ. ಲಕ್ಷದ್ವೀಪ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸೃಷ್ಟಿಯಾಗಿರುವ ‘ಮಹಾ’ ಹೆಸರಿನ ಚಂಡಮಾರುತ ವಾಯವ್ಯ ದಿಕ್ಕಿನತ್ತ ಮುಖಮಾಡಿದೆ. 

ಉತ್ತರ ಲಕ್ಷದ್ವೀಪವನ್ನು ಹಾದು ಮುಂದೆ ಸಾಗುವ ಎಲ್ಲಾ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ಮಧ್ಯ ಅರಬ್ಬೀ ಸಮುದ್ರ ಸಮುದ್ರವನ್ನು ಪ್ರವೇಶಿಸಲಿದೆ. ಚಂಡಮಾರುತದ ಪರಿಣಾಮವಾಗಿ ಕರ್ನಾಟಕ, ಕೇರಳ ಕರಾವಳಿ, ಪಶ್ಚಿಮ ಘಟ್ಟಪ್ರದೇಶಗಳು ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚಂಡ ಮಾರುತದ ಪರಿಣಾಮವಾಗಿ ಅರಬ್ಬೀ ಸಮುದ್ರದಲ್ಲಿ 100ರಿಂದ 120 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. 

ಚಂಡ ಮಾರುತದ ಹಿನ್ನೆಲೆಯಲ್ಲಿ ಲಕ್ಷ ದ್ವೀಪದಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನ.4ರ ವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

click me!