ಕಮಲ ಹಾಸನ್​ ವಿರುದ್ಧ ವಂಚನೆ ಆರೋಪ: ನಿರ್ಮಾಪಕರಿಂದ ದೂರು ದಾಖಲು: ಆಗಿದ್ದೇನು?

By Suvarna NewsFirst Published May 8, 2024, 4:02 PM IST
Highlights

ನಟ ಕಮಲ ಹಾಸನ್​ ವಿರುದ್ಧ ವಂಚನೆ ಆರೋಪ ದಾಖಲಾಗಿದ್ದು,  ನಿರ್ಮಾಪಕರಿಂದ ದೂರು ದಾಖಲು ಆಗಿದೆ.  ಆಗಿದ್ದೇನು?
 

ನಟ, ರಾಜಕಾರಣಿ ಕಮಲ್ ಹಾಸನ್ ವಿರುದ್ಧ ತಮಿಳಿನ ಇಬ್ಬರು ಸಿನಿಮಾ ನಿರ್ಮಾಪಕರು ವಂಚನೆ ಆರೋಪ ಮಾಡಿದ್ದಾರೆ. ನಿರ್ದೇಶಕ ಮತ್ತು ನಿರ್ಮಾಪಕ ಲಿಂಗುಸಾಮಿ, ತಿರುಪತಿ ಬ್ರದರ್ಸ್‌ನ ಸಹ-ನಿರ್ಮಾಪಕ ಸುಭಾಷ್ ಚಂದ್ರ ಬೋಸ್ ಜೊತೆಗೆ ಕಮಲ್ ಹಾಸನ್ ವಿರುದ್ಧ ಒಪ್ಪಂದದ ಉಲ್ಲಂಘನೆಯ ಕುರಿತು ನಿರ್ಮಾಪಕರ ಮಂಡಳಿಗೆ ದೂರು ಸಲ್ಲಿಸಿದ್ದಾರೆ. 2015 ರ ಚಲನಚಿತ್ರ 'ಉತ್ತಮ ವಿಲನ್' ನಲ್ಲಿ ಮೂವರು ಒಟ್ಟಿಗೆ ಕೆಲಸ ಮಾಡಿದರು, ಇದು ತಿರುಪತಿ ಬ್ರದರ್ಸ್ ಅನ್ನು ಸಾಲಕ್ಕೆ ತಳ್ಳಿತು. 'ಉತ್ತಮ ವಿಲನ್' ಚಿತ್ರದ ವೈಫಲ್ಯದ ನಂತರ, ಕಮಲ್ ಹಾಸನ್ ಅವರೊಂದಿಗೆ ಚಿತ್ರ ಮಾಡುವುದಾಗಿ ಭರವಸೆ ನೀಡಿದರು, ಆದರೆ ಒಂಬತ್ತು ವರ್ಷಗಳಿಂದ ಅದನ್ನು ಅನುಸರಿಸಲಿಲ್ಲ. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. 


‘ಉತ್ತಮ ವಿಲನ್’ ಸಿನಿಮಾದ ಬಳಿಕ ಕಮಲ್ ಹಾಸನ್ ನಟಿಸಿರುವ ನಾಲ್ಕು ಸಿನಿಮಾಗಳಷ್ಟೆ ಬಿಡುಗಡೆ ಆಗಿವೆ. ಇದೀಗ ಕಮಲ್ ಹಾಸನ್ ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನದ ‘ಇಂಡಿಯನ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮಣಿರತ್ನಂ ನಿರ್ದೇಶನ ಮಾಡಿರುವ ‘ಥಗ್ ಲೈಫ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ರಾಜಕಾರಣಿಯೂ ಆಗಿರುವ ಕಮಲ್ ಹಾಸನ್ ರಾಜಕಾರಣದಲ್ಲಿಯೂ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಸಿನಿಮಾ ನಿರ್ಮಾಪಕರಾಗಿಯೂ ಕಮಲ್ ಹಾಸನ್ ಸಕ್ರಿಯವಾಗಿದ್ದಾರೆ. ಇದರ ನಡುವೆಯೇ ಇವರ ವಿರುದ್ಧ ಈಗ ದೂರು ದಾಖಲಾಗಿದೆ.  ಕಮಲ್ ಹಾಸನ್ ನಟಿಸಿ, ಕನ್ನಡದ ನಟ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದ ‘ಉತ್ತಮ ವಿಲನ್’ ಸಿನಿಮಾದ ನಿರ್ಮಾಪಕ ಲಿಂಗುಸ್ವಾಮಿ. ಲಿಂಗುಸ್ವಾಮಿ ಮಾತ್ರವೇ ಅಲ್ಲದೆ ಅವರೊಟ್ಟಿಗೆ ‘ಉತ್ತಮ ವಿಲನ್’ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಸುಭಾಷ್ ಚಂದ್ರ ಭೋಸ್ ಸಹ ಕಮಲ್ ವಿರುದ್ಧ ವಂಚನೆ ಆರೋಪ ಮಾಡಿದ್ದು, ನಿರ್ಮಾಪಕ ಸಂಘವು ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಆಲಿಯಾ ಡೀಪ್​ಫೇಕ್​ ಫೋಟೋ ವೈರಲ್​: ಆದ್ರೆ ಆ ಬಾರಿ ನೆಟ್ಟಿಗರ ಆಸೆಯೇ ಬೇರೆ! ಅದೇನು ನೋಡಿ...

ಕಮಲ್ ಹಾಸನ್ ಸ್ಕ್ರಿಪ್ಟ್ ಅನ್ನು ಹಲವು ಬಾರಿ ಬದಲಾಯಿಸಿದ ಹಿನ್ನೆಲೆಯಲ್ಲಿ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ವಿಫಲಗೊಳ್ಳಲು ಕಾರಣವಾಯಿತು. ಮಲಯಾಳಂನ ಸೂಪರ್‌ಹಿಟ್ ಚಿತ್ರ 'ದೃಶ್ಯಂ' ಅನ್ನು ರಿಮೇಕ್ ಮಾಡಲು ಅವರು ಬಯಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.  ಕಮಲ್ ಹಾಸನ್ ಅದನ್ನು ಮಾಡಲು ನಿರಾಕರಿಸಿದರು ಮತ್ತು ನಂತರ ಕೆಲವೇ ವಾರಗಳಲ್ಲಿ ಬೇರೆ ಬ್ಯಾನರ್‌ಗೆ ಚಿತ್ರವನ್ನು ಮಾಡಲು ಹೋದರು ಎನ್ನುವುದು ಅವರ ಆರೋಪ. ಉತ್ತಮ ವಿಲನ್’ ಸಿನಿಮಾದಿಂದ ತಮಗೆ ಸುಮಾರು 30 ಕೋಟಿ ರೂಪಾಯಿ ನಷ್ಟವಾಗಿತ್ತೆಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಕಮಲ್ ಹಾಸನ್ ಮತ್ತೊಂದು ಸಿನಿಮಾ ಮಾಡಿಕೊಡುವ ಮೂಲಕ ಆ ಹಣವನ್ನು ವಾಪಸ್​ ನೀಡುವುದಾಗಿ ಭರವಸೆ ನೀಡಿದ್ದರು. ಆಗಿನಿಂದಲೂ ಕಮಲ್ ಹಾಸನ್​ರ ಡೇಟ್ಸ್​ಗಳಿಗಾಗಿ ಕೇಳುತ್ತಲೇ ಇದ್ದೀವಾದರೂ ಕಮಲ್ ಹಾಸನ್ ಈವರೆಗೆ ನಮಗೆ ಡೇಟ್ಸ್ ನೀಡಿಲ್ಲವೆಂದು ನಿರ್ಮಾಪಕರು ಆರೋಪ ಮಾಡಿದ್ದಾರೆ.


ಅಂದಹಾಗೆ, 2015 ರಲ್ಲಿ ಬಿಡುಗಡೆ ಆದ ಕಮಲ್ ಹಾಸನ್ ನಟನೆಯ ‘ಉತ್ತಮ ವಿಲನ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮುಗ್ಗರಿಸಿತ್ತು. ಆ ಸಿನಿಮಾವನ್ನು ಕನ್ನಡದ ನಟ, ಕಮಲ್ ಹಾಸನ್ ಆಪ್ತ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಸೋತ ಕಾರಣ, ಲಿಂಗುಸ್ವಾಮಿ ಹಾಗೂ ಸುಭಾಷ್ ಚಂದ್ರ ಭೋಸ್ ಅವರಿಗೆ ಭಾರಿ ನಷ್ಟವಾಗಿತ್ತು. ಸಿನಿಮಾದಿಂದ ಆದ ನಷ್ಟ ತುಂಬಿ ಕೊಡಲು ಅದೇ ನಿರ್ಮಾಪಕರುಗಳೊಟ್ಟಿಗೆ ಮತ್ತೊಂದು ಸಿನಿಮಾ ಮಾಡುವ ವಾಗ್ದಾನವನ್ನು ಕಮಲ್ ಹಾಸನ್ ಮಾಡಿದ್ದರು. ಆದರೆ ‘ಉತ್ತಮ ವಿಲನ್’ ಸಿನಿಮಾ ಬಿಡುಗಡೆ ಆಗಿ ಒಂಬತ್ತು ವರ್ಷವಾದರೂ ಕಮಲ್ ಹಾಸನ್ ತಮ್ಮೊಟ್ಟಿಗೆ ಸಿನಿಮಾ ಮಾಡಿಲ್ಲ, ತಮಗೆ ಡೇಟ್ಸ್ ನೀಡಿಲ್ಲವೆಂದು ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದು, ತಮಿಳುನಾಡಿನ ಸಿನಿಮಾ ನಿರ್ಮಾಪಕರ ಸಂಘಕ್ಕೆ ಕಮಲ್ ವಿರುದ್ಧ ದೂರು ನೀಡಿ, ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ.

ಮಗು ಹುಟ್ಟುವ ಸಮಯದಲ್ಲಿ ಮದ್ವೆ ಫೋಟೋ ಡಿಲೀಟ್​ ಮಾಡಿದ್ದೇಕೆ ರಣವೀರ್‌​ ಸಿಂಗ್​? ಕೊನೆಗೂ ಸಿಕ್ತು ಕಾರಣ...

click me!