ಊಟ ಕೊಟ್ಟು ರೇಪ್ ಮಾಡುವ ನೈಜಿರಿಯಾ ಸೈನಿಕರು..!

First Published May 25, 2018, 1:12 PM IST
Highlights

ನೈಜಿರಿಯಾದಲ್ಲಿ ಸೇನೆ ಮತ್ತು ಉಗ್ರ ಸಂಘಟನೆ ಬೋಕೊ ಹರಾಂ ನಡುವಿನ ಸಂಘರ್ಷ ತೀವ್ರಗೊಂಡಿದೆ. ಉಗ್ರರ ನೆಲೆಗಳ ಮೇಲೆ ಹಿಡಿತ ಸಾಧಿಸಿರುವ ಸೇನೆ, ಒಂದೊಂದೇ ನೆಲೆಗಳನ್ನು ವಶಪಡಿಸಿಕೊಳ್ಳುತ್ತಾ ಮುನ್ನುಗ್ಗುತ್ತಿದೆ. ಆದರೆ ಈ ವೇಳೆ ನಾಗರಿಕರ ಮೇಲೆ ಸೇನೆ ನಡೆಸಿದ ದೌರ್ಜನ್ಯ ವಿಶ್ವ ವೇದಿಕೆಯಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

ಬೆಂಗಳೂರು (ಮೇ.25): ನೈಜಿರಿಯಾದಲ್ಲಿ ಸೇನೆ ಮತ್ತು ಉಗ್ರ ಸಂಘಟನೆ ಬೋಕೊ ಹರಾಂ ನಡುವಿನ ಸಂಘರ್ಷ ತೀವ್ರಗೊಂಡಿದೆ. ಉಗ್ರರ ನೆಲೆಗಳ ಮೇಲೆ ಹಿಡಿತ ಸಾಧಿಸಿರುವ ಸೇನೆ, ಒಂದೊಂದೇ ನೆಲೆಗಳನ್ನು ವಶಪಡಿಸಿಕೊಳ್ಳುತ್ತಾ ಮುನ್ನುಗ್ಗುತ್ತಿದೆ. ಆದರೆ ಈ ವೇಳೆ ನಾಗರಿಕರ ಮೇಲೆ ಸೇನೆ ನಡೆಸಿದ ದೌರ್ಜನ್ಯ ವಿಶ್ವ ವೇದಿಕೆಯಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

ಈ ಕುರಿತು ಅಮ್ನೆಸ್ಟಿ ಇಂಟರನ್ಯಾಶನಲ್ ಸಂಸ್ಥೆ ವರದಿ ನೀಡಿದ್ದು, ಉಗ್ರರ ವಶದಲ್ಲಿರುವ ನಗರಗಳನ್ನು ವಶಪಡಿಸಿಕೊಂಡ ಬಳಿಕ ಸೇನೆ ಅಲ್ಲಿನ ಸ್ಥಳೀಯ ಜನರೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದೆ ಎಂದು ಆರೋಪಿಸಿದೆ. ನೈಜಿರಿಯನ್ ಸೈನಿಕರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದು, ನಾಗರಿಕರಿಗೆ ಭಾರೀ ಪ್ರಮಾಣದ ಹಿಂಸೆ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಂತ್ರಸ್ಥ ನಾಗರಿಕರಿಗೆ ಸಹಾಯ ಮಾಡುವ ನೆಪದಲ್ಲಿ ಲೈಂಗಿಕ ತೃಷೆ ತೀರಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ನಿರ್ಗತಿಕರಿಗೆ ಊಟ, ನೀರು ನೀಡಿದ ಬಳಿಕ ಅವರ ಮೇಲೆಯೇ ಅತ್ಯಾಚಾರ ನಡೆಸಲಾಗುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದವರನ್ನು ಸೈನಿಕರು ಚಿತ್ರಹಿಂಸೆ ನೀಡಿ ಕೊಲ್ಲುತ್ತಿದ್ದಾರೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಬೊಕೋ ಹರಾಂ ಮತ್ತು ಸೇನೆ ನಡುವಿನ ಕಾಳಗದಲ್ಲಿ ನಾಗರಿಕರೂ ಸೇರಿದಂತೆ ಇದುವರೆಗೂ ಸುಮಾರು ೩೦ ಸಾವಿರ ಜನರು ಸಾವನ್ನಪ್ಪಿದ್ದಾರೆ.

click me!