ಖಾಸಗಿ ಆಸ್ಪತ್ರೆಗಳು ಕ್ಲೋಸ್

By Suvarna Web DeskFirst Published Nov 16, 2017, 8:29 AM IST
Highlights

ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಸೇರಿದಂತೆ 600 ಆಸ್ಪತ್ರೆಗಳು, 6 ಸಾವಿರ ಕ್ಲಿನಿಕ್​'ಗಳು  ಕ್ಲೋಸ್ ಆಗಿದ್ದು. ಸುಮಾರು 22 ಸಾವಿರಕ್ಕೂ ಹೆಚ್ಚು ವೈದ್ಯರಿಂದ ಅನಿರ್ಧಿಷ್ಟಾವಧಿ ಬಂದ್ ಮಾಡಿದ್ದು,  ತುರ್ತು ಸೇವೆ ಚಿಕಿತ್ಸೆ ಹೊರತುಪಡಿಸಿ ಎಲ್ಲಾ ಸೇವೆ ಬಂದ್ ಆಗಿವೆ.

ಬೆಂಗಳೂರು(ನ.16): ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ( ತಿದ್ದುಪಡಿವಿರೋಧಿಸಿ ಇಂದಿನಿಂದ ಸಿಲಿಕಾನ್ ಸಿಟಿಯಲ್ಲೂ ವೈದ್ಯರ ಮುಷ್ಕರ ಮುಂದುವರೆಸಿದ್ದಾರೆ. ಇದರಿಂದ ರೋಗಿಗಳ ಪರದಾಟ ಹೇಳತೀರದಾಗಿದೆ.

ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಸೇರಿದಂತೆ 600 ಆಸ್ಪತ್ರೆಗಳು, 6 ಸಾವಿರ ಕ್ಲಿನಿಕ್​'ಗಳು  ಕ್ಲೋಸ್ ಆಗಿದ್ದು. ಸುಮಾರು 22 ಸಾವಿರಕ್ಕೂ ಹೆಚ್ಚು ವೈದ್ಯರಿಂದ ಅನಿರ್ಧಿಷ್ಟಾವಧಿ ಬಂದ್ ಮಾಡಿದ್ದು,  ತುರ್ತು ಸೇವೆ ಚಿಕಿತ್ಸೆ ಹೊರತುಪಡಿಸಿ ಎಲ್ಲಾ ಸೇವೆ ಬಂದ್ ಆಗಿವೆ.

ಮಣಿಯುತ್ತಾ ಸರ್ಕಾರ

ಖಾಸಗಿ ವೈದ್ಯರಿಂದ ಧರಣಿ ಮುಂದುವರಿದಿದ್ದು, ಬೆಳಗಾವಿಯ ಸುವರ್ಣಸೌಧದ ಬಳಿ ವೈದ್ಯರು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರ ಮುಷ್ಕರಕ್ಕೆ ರಾಜ್ಯ ಸರ್ಕಾರ ಮಣಿಯುತ್ತಾ?  ಸರ್ಕಾರದಿಂದ ಯಾವ ನಿರ್ಧಾರ ಹೊರಬೀಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

click me!