ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಶೀಘ್ರ ಪಾಸ್‌ಪೋರ್ಟ್‌ ಕೇಂದ್ರ

By Web DeskFirst Published Feb 3, 2019, 10:47 AM IST
Highlights

ದೇಶದ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿಯೂ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಸ್ಥಾಪನೆ | ದೇಶದ ಪ್ರಜೆ ಪಾಸ್‌ಪೋರ್ಟ್‌ಗಾಗಿ 50ಕ್ಕಿಂತ ಹೆಚ್ಚು ಕಿ.ಮೀ ಹೋಗಬಾರದು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛೆ 

ಅಲಹಾಬಾದ್‌ (ಫೆ.03): ದೇಶದ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿಯೂ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಸೇವಾ ಕೇಂದ್ರ ಹೊಂದಿಲ್ಲದ ಕ್ಷೇತ್ರಗಳಲ್ಲಿ ಶೀಘ್ರವೇ ಪಾಸ್‌ಪೋರ್ಟ್‌ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಕೇಂದ್ರದ ದೂರಸಂಪರ್ಕ ಖಾತೆ ರಾಜ್ಯ ಸಚಿವ ಮನೋಜ್‌ ಸಿನ್ಹಾ ಅವರು ಹೇಳಿದ್ದಾರೆ.

ಶನಿವಾರ ಕುಂಭ ಮೇಳದ ನೆನಪಿನಾರ್ಥವಾಗಿ ಸ್ಟಾಂಪ್‌ ಅನಾವರಣಗೊಳಿಸಿ ಮಾತನಾಡಿದ ಅವರು, ‘ದೇಶದ ಪ್ರಜೆ ಪಾಸ್‌ಪೋರ್ಟ್‌ಗಾಗಿ 50ಕ್ಕಿಂತ ಹೆಚ್ಚು ಕಿ.ಮೀ ಹೋಗಬಾರದು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛೆಯಾಗಿದೆ,’ ಎಂದರು. 2014ರಲ್ಲಿ ದೇಶದಲ್ಲಿ ಕೇವಲ 77 ಪಾಸ್‌ಪೋರ್ಟ್‌ ಕೇಂದ್ರಗಳಿದ್ದವು. ಆದರೆ, ಇದೀಗ ಅವುಗಳ ಸಂಖ್ಯೆ 300ಕ್ಕೆ ಹೆಚ್ಚಿಸಲಾಗಿದೆ ಎಂದರು.

 

click me!