ಮೋದಿ ಪ್ರಧಾನಿಯಾದ ನಾಲ್ಕೇ ವರ್ಷದಲ್ಲಿ 800 ಉಗ್ರರ ಹತ್ಯೆ

By Web DeskFirst Published Jul 4, 2019, 8:02 AM IST
Highlights

ಮೋದಿ ಪ್ರಧಾನಿಯಾದ ನಾಲ್ಕೇ ವರ್ಷದಲ್ಲಿ 800 ಉಗ್ರರ ಹತ್ಯೆ| 2018ರೊಂದರಲ್ಲೇ 249 ಮಂದಿ ಹತ್ಯೆ 

ನವದೆಹಲಿ[ಜು.04]: ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೊದಲ ನಾಲ್ಕು ವರ್ಷಗಳಲ್ಲಿ ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದಲ್ಲಿ ಬರೋಬ್ಬರಿ 800 ಉಗ್ರರನ್ನು ಹತ್ಯೆ ಮಾಡಿವೆ. ಈ ಸಂಬಂಧ ಕೇಂದ್ರ ಸರ್ಕಾರವೇ ಬುಧವಾರ ಸಂಸತ್ತಿಗೆ ಮಾಹಿತಿ ನೀಡಿದೆ.

2014ರಿಂದ 2018ರವರೆಗೆ 800 ಉಗ್ರರು ಹತ್ಯೆಯಾಗಿದ್ದಾರೆ. 2018ರೊಂದರಲ್ಲೇ 249 ಮಂದಿಯನ್ನು ಹತ್ಯೆ ಮಾಡಲಾಗಿದೆ. 2014ರಲ್ಲಿ 104, 2015ರಲ್ಲಿ 97, 2016ರಲ್ಲಿ 140, 2017ರಲ್ಲಿ 210 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯಕ್‌ ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

ಭಾರತ-ಪಾಕಿಸ್ತಾನ ಗಡಿ ಸೇರಿದಂತೆ ಉಗ್ರರ ಚಟುವಟಿಕೆಗಳಿರುವ ಕಡೆಗಳಲ್ಲಿ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿದ್ದು, ಶೋಧಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು. ಇದೇ ವೇಳೆ, ಮಾಚ್‌ರ್‍, ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಕ್ರಮವಾಗಿ 267, 234 ಮತ್ತು 221 ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ ಎಂದು ತಿಳಿಸಿದರು.

click me!