ಸಣ್‌ ಸುದ್ದಿಗಳು : ಬೆಂಗಳೂರಿನಲ್ಲಿ ಮೆಟ್ರೋ 600ನೇ ಸ್ಟೋರ್‌ ಆರಂಭ| ಮೂರೇ ಗಂಟೆಗಳಲ್ಲಿ ಬೆಂಝ್ ಕಾರ್‌ ಸರ್ವೀಸ್ !

By Suvarna NewsFirst Published Nov 16, 2021, 3:55 PM IST
Highlights

*ಬೆಂಗಳೂರಿನಲ್ಲಿ ಮೆಟ್ರೋ 600ನೇ ಸ್ಟೋರ್‌ 
*Mars Wrigley ಗ್ಯಾಲೆಕ್ಸಿ ಚಾಕೊಲೇಟ್‌ ಬ್ರಾಂಡ್‌ 
*ಫನ್‌ಸ್ಕೂಲ್‌ನ ಆಟಿಕೆ ಹಾಗೂ ಪಜಲ್‌ ಗೇಮ್‌ಗಳು
*ಸನ್‌ಫೀಸ್ಟ್‌ನ ಡಾರ್ಕ್ ಫ್ಯಾಂಟಸಿ ವೆನಿಲ್ಲಾ ಫಿಲ್ಸ್‌
*ಬಿಎಂಡಬ್ಲ್ಯೂ ಜಿಎಸ್‌ ಟ್ರೋಫಿ 2022ಗೆ ಸ್ಪರ್ಧಿಗಳಿಗೆ ಆಹ್ವಾನ

ಬೆಂಗಳೂರಿನಲ್ಲಿ ಮೆಟ್ರೋ 600ನೇ ಸ್ಟೋರ್‌! 

ಪಾದರಕ್ಷೆ ಮತ್ತು ಆ್ಯಕ್ಸೆಸರಿ ಬ್ರಾಂಡ್‌ ‘ಮೆಟ್ರೋ (Metro)’ದ 600ನೇ ಫ್ಲಾಗ್‌ಶಿಪ್‌ ಸ್ಟೋರ್‌ (Flagship Store) ಬೆಂಗಳೂರಿನಲ್ಲಿ ಆರಂಭವಾಗಿದೆ. ಗೋಪಾಲಪುರದ ಲೂಲು ಗ್ಲೋಬಲ್‌ ಮಾಲ್‌ನ 1300 ಚದರಡಿ ವಿಸ್ತೀರ್ಣದಲ್ಲಿ ಹೊಸ ಮಳಿಗೆ ತಲೆ ಎತ್ತಿದೆ. ಡಾ ವಿಂಚಿ, ಸ್ಕೆಚರ್ಸ್‌, ಐಡಿ, ಫಿಟ್‌ಫ್ಲಾಪ್‌ ಹಾಗೂ ಕ್ರಾಸ್‌ ಬ್ರಾಂಡ್‌ನ ಶೂಗಳ ಮಾರಾಟ ಇಲ್ಲಿ ನಡೆಯಲಿದೆ. ಮಹಿಳೆಯರ ಶೂ ಬೆಲೆ 990 ರು.ಗಳಿಂದ ಆರಂಭ. ಪುರುಷರ ಶೂಗಳು 1,490 ರು.ಗಳಿಂದ ಇಲ್ಲಿ ಲಭ್ಯವಿವೆ ಎಂದು ಕಂಪನಿ ತಿಳಿಸಿದೆ

Mars Wrigley ಗ್ಯಾಲೆಕ್ಸಿ ಚಾಕೊಲೇಟ್‌ ಬ್ರಾಂಡ್‌! 

ಸಾಂಪ್ರದಾಯಿಕ ಮಾದರಿಯ ಚಾಕ್ಲೇಟ್‌ಅನ್ನು ರಿಗ್ಲಿ ಇಂಡಿಯಾ ತನ್ನ ಗೆಲ್ಯಾಕ್ಸಿ ಚಾಕೊಲೇಟ್‌ ಬ್ರಾಂಡ್‌ ಮೂಲಕ ಬಿಡುಗಡೆ ಮಾಡಿದೆ. ಸ್ಮೂತ್‌ ಮಿಲ್ಕ್ (Smooth Milk) ಹಾಗೂ ಕ್ರಿಸ್ಪಿ ಶ್ರೇಣಿಯಲ್ಲಿ ಈ ಚಾಕೊಲೇಟ್‌ಗಳು ಬಿಡುಗಡೆಯಾಗಿವೆ. ಮೇಡ್‌ ಇನ್‌ ಇಂಡಿಯಾ ಕಾಂಸೆಪ್ಟ್‌ನಲ್ಲಿ ಈ ಚಾಕೊಲೇಟ್‌ ತಯಾರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಫನ್‌ಸ್ಕೂಲ್‌ನ ಆಟಿಕೆ ಹಾಗೂ ಪಜಲ್‌ ಗೇಮ್‌ಗಳು

ಸೂಪರ್‌ ಹೀರೋಗಳ ಚಿತ್ರ ರಿವೀಲ್‌ ಮಾಡುವ ಚಿಕ್ಕ ಮಕ್ಕಳ ಫಿಂಗರ್‌ ಪೇಂಟಿಂಗ್‌ ಕಿಟ್‌, ಟಾಮ್‌ ಆ್ಯಂಡ್‌ ಜೆರ್ರಿ ಮಾದರಿಯ ಫಜಲ್‌ಗಳು, ಬ್ಯುಸಿನೆಸ್‌ಗೆ ಸಂಬಂಧಿಸಿ ದಿ ಗೋಲ್ಡ್‌ ಕ್ವೆಸ್ಟ್‌ ಗೇಮ್‌, ಸ್ಮಾರ್ಟ್‌ ರೆಸ್ಟೋರೆಂಟ್‌ ಬ್ಯುಸಿನೆಸ್‌ ಬಗ್ಗೆ ವಿವರಿಸುವ ಬೆಲ್ಲಿ ಬ್ಯಾಟಲ್‌ ಇತ್ಯಾದಿ ಆಟಿಕೆ ಹಾಗೂ ಫಜಲ್‌ ಸಂಗ್ರಹವನ್ನು ಫನ್‌ ಸ್ಕೂಲ್‌ ಬಿಡುಗಡೆ ಮಾಡಿದೆ. ಇವು ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕ ಎಂದು ಕಂಪನಿ ತಿಳಿಸಿದೆ. ಬೆಲೆ: 249 ರು. ನಿಂದ ಆರಂಭ

ಸನ್‌ಫೀಸ್ಟ್‌ನ ಡಾರ್ಕ್ ಫ್ಯಾಂಟಸಿ ವೆನಿಲ್ಲಾ ಫಿಲ್ಸ್‌

ವೆನಿಲ್ಲಾ ಕ್ರೀಮ್‌ನಿಂದ ತುಂಬಿದ ಡಾರ್ಕ್ ಫ್ಯಾಂಟಸಿ ಬಿಸ್ಕೆಟ್‌ಅನ್ನು ಸನ್‌ಫೀಸ್ಟ್‌ ಬಿಡುಗಡೆ ಮಾಡಿದೆ. ಈ ಉತ್ಪನ್ನ ಬಿಡುಗಡೆ ಮಾಡಿ ಮಾತನಾಡಿದ ಐಟಿಸಿ ಫುಡ್‌ ಡಿವಿಜನ್‌ನ ಬಿಸ್ಕೆಟ್ಸ್‌ ಮತ್ತು ಕೇಕ್‌ ಕ್ಲಸ್ಟರ್‌ನ ಸಿಇಓ ಆಲಿ ಹ್ಯಾರಿಸ್‌ ಶೇರೆ, ‘ಗ್ರಾಹಕರೊಂದಿಗೆ ಮಾತುಕತೆ ನಡೆಸಿದಾಗ ಕ್ರೀಮ್‌ ವಿಭಾಗದಲ್ಲಿ ಹೊಸ ಉತ್ಪನ್ನಗಳಿಗೆ ಬೇಡಿಕೆ ಇರುವುದು ಕಂಡುಬಂತು. ಈ ಹಿನ್ನೆಲೆಯಲ್ಲಿ ಡಾರ್ಕ್ ಫ್ಯಾಂಟಸ್‌ ವೆನಿಲ್ಲಾ ಫಿಲ್ಸ್‌ ಹೊರ ಬಿಟ್ಟಿದ್ದೇವೆ’ ಎಂದರು.ಬೆಲೆ: 20 ರು. 

ಬಿಎಂಡಬ್ಲ್ಯೂ ಜಿಎಸ್‌ ಟ್ರೋಫಿ 2022ಗೆ ಸ್ಪರ್ಧಿಗಳಿಗೆ ಆಹ್ವಾನ

ಬಿಎಂಡಬ್ಲ್ಯೂ ಮೋಟರಾಡ್‌ ಇಂಡಿಯಾ, ಜಿಎಸ್‌ ಟ್ರೋಫಿ 2022ರ ಕ್ಲಾಲಿಫೈಯರ್‌ನಲ್ಲಿ ಭಾಗಿಯಾಗುವ ಅವಕಾಶವನ್ನು ತನ್ನ ಗ್ರಾಹಕರಿಗೆ ನೀಡಿದೆ. ಸಾಮಾನ್ಯ ರೇಸ್‌ಗಿಂತ ಇದು ಭಿನ್ನವಾಗಿದ್ದು ಸ್ಪರ್ಧಿಗಳು ಆಫ್‌ ರೋಡ್‌ನ ಕಲ್ಲು, ಮುಳ್ಳು, ಗುಡ್ಡ, ಅಧಿಕ ಉಷ್ಣತೆಯ ಜಾಗಗಳಲ್ಲಿ ತಮ್ಮ ರೈಡಿಂಗ್‌ ಕೌಶಲ್ಯ ತೋರಿಸಬೇಕು. ಈಗಾಗಲೇ ಬೆಂಗಳೂರಿನ. ಸ್ಪರ್ಧೆ ಮುಕ್ತಾಯಗೊಂಡಿದ್ದು, ಮುಂದೆ ದೆಹಲಿ, ಮುಂಬೈ ಮೊದಲಾದೆಡೆ ನಡೆಯಲಿದೆ. ಆಯ್ಕೆಯಾದ ಸ್ಪರ್ಧಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಇರುತ್ತದೆ ಎಂದು ಕಂಪನಿ ತಿಳಿಸಿದೆ.

ಮೂರೇ ಗಂಟೆಗಳಲ್ಲಿ  ಬೆಂಝ್ ಕಾರ್‌ ಸರ್ವೀಸ್

ಮರ್ಸಿಡಿಸ್‌ ಬೆನ್‌್ಝ ಇಂಡಿಯಾ ತನ್ನ ಜನಪ್ರಿಯ ಸವೀರ್‍ಸ್‌ ವ್ಯವಸ್ಥೆ ‘ಪ್ರೀಮಿಯರ್‌ ಎಕ್ಸ್‌ಪ್ರೆಸ್‌ ಪ್ರೈಮ್‌ 2.0’ವನ್ನು ಬೆಂಗಳೂರಿನಲ್ಲಿ ಆರಂಭಿಸಿದೆ. ಇದರಲ್ಲಿ ಕೇವಲ ಮೂರು ಗಂಟೆಗಳಲ್ಲಿ ಮರ್ಸಿಡಿಸ್‌ ಬೆನ್‌್ಝ ಕಾರ್‌ಗಳ ಸವೀರ್‍ಸ್‌ ಮಾಡಿಕೊಡಲಾಗುತ್ತದೆ. ‘ಮಾರ್‌ 2020’ ಬ್ರಾಂಡ್‌ ಮೂಲಕ ಹೊಸೂರು ರಸ್ತೆಯಲ್ಲಿರುವ ಅಕ್ಷಯ ಮೋಟಾಸ್‌ನಲ್ಲಿ ಈ ವರ್ಕ್ಶಾಪ್‌ ನಡೆಯಲಿದೆ. ಇಲ್ಲಿ ಸಂಪೂರ್ಣ ಡಿಜಿಟಲೈಸೇಶನ್‌ ವ್ಯವಸ್ಥೆ ಇದೆ ಎಂದು ಕಂಪನಿ ತಿಳಿಸಿದೆ.

ಭಾರತ್‌ ಪೇಯಿಂದ ಮರ್ಚೆಂಟ್‌ ಶೇರ್‌ಹೋಲ್ಡಿಂಗ್‌ ಪ್ರೋಗ್ರಾಂ

ಆಫ್‌ಲೈನ್‌ ಮೂಲಕ ವ್ಯವಹರಿಸುವ ವ್ಯಾಪಾರಿಗಳಿಗೆ ಹೂಡಿಕೆಗೆ ಅವಕಾಶ ನೀಡಿ, ಅವರನ್ನು ತನ್ನ ಪಾಲುದಾರರನ್ನಾಗಿ ಮಾಡಲು ಭಾರತ್‌ ಪೇ (Bharath Pay) ಮುಂದಾಗಿದೆ. ಇದಕ್ಕಾಗಿ ‘ಮರ್ಜೆಂಚ್‌ ಶೇರ್‌ ಹೋಲ್ಡಿಂಗ್‌ ಪ್ರೋಗ್ರಾಂ (ಎಂಎಸ್‌ಪಿ)’ಯನ್ನು ರೂಪಿಸಿದೆ. ಈ ಹೂಡಿಕೆಯ ಮೂಲಕ ವ್ಯಾಪಾರಿಗಳೂ ಮಾಲೀಕತ್ವದ ಖುಷಿ ಅನುಭವಿಸಬಹುದು ಎಂದು ಕಂಪನಿ ತಿಳಿಸಿದೆ. ಈ ಪ್ರೋಗ್ರಾಮ್‌ ಮೂಲಕ ಮುಂದಿನ ನಾಲ್ಕು ವರ್ಷಗಳಲ್ಲಿ ನೂರು ಮಿಲಿಯನ್‌ ಡಾಲರ್‌ ವಹಿವಾಟು ದಾಖಲಿಸುವ ನಿರೀಕ್ಷೆಯಲ್ಲಿದೆ ಭಾರತ್‌ ಪೇ.

click me!