82 ವರ್ಷದ ವೃದ್ಧೆ ಮೇಲೆ 23 ವರ್ಷದ ಯುವಕನಿಂದ ಅತ್ಯಾಚಾರ

By Web DeskFirst Published Sep 4, 2018, 7:27 PM IST
Highlights

ಕಾಮಕ್ಕೆ ಕಣ್ಣಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಆದರೆ ಈ ಪ್ರಕರಣ ಮಾತ್ರ ಎಂಥವರನ್ನು ಒಂದು ಕ್ಷಣ ಮೂಢರನ್ನಾಗಿಸಬಹುದು. 

ಗಜಿಯಾಬಾದ್[ಸೆ.4] 82 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 23 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಟ್ರೋನಿಕಾ ಸಿಟಿ ಪೊಲೀಸ್ ಸ್ಟೇಶನ್ ಲಿಮಿಟ್ಸ್ ನಲ್ಲಿ ಪ್ರಕರಣ ನಡೆದಿದ್ದು ಸಂತ್ರಸ್ತೆಯ ಕುಟುಂಬದವರು ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಆರೋಪಿ ಮತ್ತು ಸಂತ್ರಸ್ತೆ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು.

ಕಟ್ಟದ ನೆಲ ಮಹಡಿಯಲ್ಲಿ ಇಬ್ಬರು ವಾಸಮಾಡುತ್ತಿದ್ದರು. ವೃದ್ಧೆ ತನ್ನ ಮೊಮ್ಮಕ್ಕಳೊಂದಿಗೆ ಇದ್ದರೆ ಆರೋಪಿ ಕಟ್ಟಡದ ಇನ್ನೊಂದು ಮಗ್ಗುಲಲ್ಲಿ ವಾಸವಾಗಿದ್ದ.  ಭಾನುವಾರ ರಾಥ್ರಿ 11 ಗಂಟೆ ಸುಮಾರಿಗೆ ಅಜ್ಜಿಯ ಮನೆಗೆ ನುಗ್ಗಿದ ಆರೋಪಿ ನಿದ್ರಿಸುತ್ತಿದ್ದವಳ ಮೇಲೆ ಎರಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

click me!