ದರ್ಶನ್‌ ಕೊಲೆ ಕೇಸ್‌ ವಿಚಾರವಾಗಿ ಕೊನೆಗೂ ಮಾತನಾಡಿದ್ರಾ ಸುಮಲತಾ, ವೈರಲ್‌ ಪೋಸ್ಟ್‌ ಹಿಂದಿನ ಅರ್ಥವೇನು?

By Santosh Naik  |  First Published Jul 1, 2024, 5:50 PM IST

Sumalatha Ambareesh Supports Darshan ನಟ ದರ್ಶನ್‌ ಕೊಲೆ ಕೇಸ್‌ನಲ್ಲಿ ಫಿಟ್‌ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದರ ಬೆನ್ನಲ್ಲಿಯೇ ಸಿನಿಮಾ ರಂಗದ ಗಣ್ಯರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ದರ್ಶನ್‌ರನ್ನು ಮಾತನಾಡಿಸಿ ಬರುತ್ತಿದ್ದಾರೆ. ಆದರೆ, ಈ ಘಟನೆಯ ಬಗ್ಗೆ ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡದ ಒಬ್ಬರೆಂದರೆ ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಷ್‌.


ಬೆಂಗಳೂರು (ಜು.1): ಕೊನೆಗೂ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಫಿಟ್‌ ಆಗಿರುವುದರ ಕುರಿತಾಗಿ ಸುಮಲತಾ ಅಂಬರೀಷ್‌ ಮಾತನಾಡಿದ್ದಾರೆ. ಮಂಡ್ಯದ ಮಾಜಿ ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಅಂಬರೀಷ್‌ ಇಲ್ಲಿಯವರೆಗೂ ಈ ಘಟನೆಯ ಬಗ್ಗೆ ಮಾತನಾಡಿರಲಿಲ್ಲ. ದರ್ಶನ್‌ರನ್ನು ತಮ್ಮ ದೊಡ್ಡ ಮಗ ಎಂದು ಸುಮಲತಾ ಅಂಬರೀಷ್‌ ಹೇಳಿದರೆ, ದರ್ಶನ್‌ ಅವರು ಕೂಡ ಸುಮಲತಾ ಅಂಬರೀಷ್‌ನ್ನು ಮದರ್‌ ಇಂಡಿಯಾ ಎಂದೇ ಕರೆಯುತ್ತಿದ್ದರು. ಅದರೆ, ಕೊಲೆ ಕೇಸ್‌ ಆಗಿ ಇಷ್ಟು ದಿನಗಳಾದರೂ ದರ್ಶನ್‌ ಪರವಾಗಿಯಾಗಲಿ, ವಿರುದ್ಧವಾಗಿ ಆಗಲಿ ಸುಮಲತಾ ಅಂಬರೀಷ್‌ ಹಾಗೂ ಅವರ ಪುತ್ರ ಅಭಿಷೇಕ್‌ ಅಂಬರೀಷ್‌ ಮಾತನಾಡಿರಲಿಲ್ಲ. ಅದರೆ, ಸೋಮವಾರ ತಮ್ಮ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ಕ್ರಿಪ್ಟಿಕ್‌ ಪೋಸ್ಟ್‌ ಹಂಚಿಕೊಂಡಿರುವ ಸುಮಲತಾ ಅಂಬರೀಷ್‌, ದರ್ಶನ್‌ ಪ್ರಕರಣದ ಬಗ್ಗೆ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ ಎನ್ನಲಾಗಿದೆ.

ಇನ್ಸ್‌ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಸುಮಲತಾ, ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಸಾಲನ್ನು ಹಂಚಿಕೊಂಡಿದ್ದಾರೆ. ' ಎಲ್ಲವೂ ಸರಿ ಹೋಗುವ ಮೊದಲು ಬಹಳಷ್ಟು ತಪ್ಪಾಗುತ್ತದೆ. ಈ ಹಂತದಲ್ಲಿ ಕೇವಲ ನಂಬಿಕೆ ಇರಲಿ..' ಎನ್ನುವ ಸಾಲನ್ನು ಹಂಚಿಕೊಂಡಿದ್ದಾರೆ. ಇದು ನಟ ದರ್ಶನ್‌ ಅವರಿಗೆ ಸಂಬಂಧಪಟ್ಟ ಹಾಗೆಯೇ ಸುಮಲತಾ ಮಾಡಿರುವ ಪೋಸ್ಟ್‌ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ದರ್ಶನ್‌ಗೆ ಎದುರಾದ ಸಂಕಷ್ಟಗಳ ಬಗ್ಗೆ ಪರೋಕ್ಷವಾಗಿ ಸುಮಲತಾ ಈ ಪೋಸ್ಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೊದಲಿನಿಂದಲೂ ಈ ಬಗ್ಗೆ ಮಾತನಾಡಿದ ಸ್ಯಾಂಡಲ್‌ವುಡ್‌ ತಾರೆ ಎಂದರೆ ಅದು ರಮ್ಯಾ ಮಾತ್ರ. ದರ್ಶನ್‌ ಪರಪ್ಪನ ಅಗ್ರಹಾರಕ್ಕೆ ಸೇರಿದ ಬಳಿಕ ಹಲವು ಸ್ಯಾಂಡಲ್‌ವುಡ್‌ ತಾರೆಯರು ಈ ಬಗ್ಗೆ ಮಾತನಾಡಿದ್ದಾರೆ. ನಟ ಶಿವರಾಜ್‌ಕುಮಾರ್‌ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ, ದರ್ಶನ್‌ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುಮಲತಾ ಅಂಬರೀಷ್‌, ಅಭಿಷೇಕ್‌ ಅಂಬರೀಷ್‌, ಯಶಸ್‌ ಸೂರ್ಯ, ಧನ್ವೀರ್‌ ಗೌಡ, ಸೃಜನ್‌ ಲೋಕೇಶ್‌ ಸೇರಿದಂತೆ ಇನ್ನೂ ಕೆಲವರು ಈ ಬಗ್ಗೆ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿರಲಿಲ್ಲ.

Latest Videos

undefined

ಕಳೆದ ಸಂಸತ್‌ ಚುನಾವಣೆಯಲ್ಲಿ ಮಂಡ್ಯದಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅಂಬರೀಷ್‌ ಗೆಲುವಿನಲ್ಲಿ ದರ್ಶನ್‌ ಅವರ ಪಾತ್ರ ಮಹತ್ವದ್ದಾಗಿತ್ತು. ಚುನಾವಣೆಯ ಆರಂಭದಿಂದ ಅತ್ಯಂದವರೆಗೂ ಅವರು ಸುಮಲತಾ ಅವರ ಬೆಂಬಲವಾಗಿ ನಿಂತಿದ್ದರು. ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ದರ್ಶನ್ "ಅಮ್ಮ ಕಣ್ಮುಚ್ಚಿ ಹಾಳು ಬಾವಿಗೆ ಬೀಳು ಅಂದ್ರು ನಾನು ಬೀಳುತ್ತೇನೆ. ಒಟ್ಟಿನಲ್ಲಿ ಅಮ್ಮ ಏನು ಹೇಳ್ತಾರೋ ಅದನ್ನು ಶಿರಸಾವಹಿಸಿ ಪಾಲಿಸುವುದಷ್ಟೇ ನನ್ನ ಮತ್ತು ನನ್ನ ತಮ್ಮನ ಕೆಲಸ. ಅಷ್ಟೊಂದು ಗಾಢವಾದ ಬಾಂಧವ್ಯ ನಮಗೂ ಆ ಮನೆಗೂ ಇದೆ" ಎಂದಿದ್ದರು.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಬಂಧನವಾದ ದಿನದಿಂದ ಸುಮಲತಾ ಅಂಬರೀಷ್‌ ಏನನ್ನೂ ಮಾತನಾಡಿಲ್ಲ. ಕೊನೆ ಪಕ್ಷ ದರ್ಶನ್‌ ಅವರನ್ನು ಬೆಂಬಲಿಸಿಯಾದರೂ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಬಹುತ್ತಿದ್ದು ಎಂದು ದರ್ಶನ್‌ ಅಭಿಮಾನಿಗಳು ಹೇಳಿದ್ದರು. ಆದರೆ, ಇಷ್ಟೆಲ್ಲಾ ಟೀಕೆಗಳ ನಡುವೆಯೂ  ಸುಮಲತಾ ಅಂಬರೀಷ್‌ ಯಾವ ಹೇಳಿಕೆಯೂ ನೀಡಿರಲಿಲ್ಲ.

ರಾಜಕೀಯ ಲಾಭಕ್ಕೆ ದರ್ಶನ್‌ರನ್ನು ಬಳಸಿಕೊಂಡ ಸುಮಲತಾ ಇವಾಗ ಮೌನವೇಕೆ?

ಘಟನೆ ಏನು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಪ್ರಕರಣದಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಬಂಧನವಾಗಿತ್ತು. ಫೆಬ್ರವರಿಯಿಂದಲೂ ದರ್ಶನ್‌ ಅವರ ಪ್ರೇಯಸಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್‌ ಕಳಿಸುತ್ತಿದ್ದ. ಈತನ ಅಕೌಂಟ್‌ಅನ್ನು ಬ್ಲಾಕ್‌ ಮಾಡಿದರೂ ಕೂಡ ಬೇರೆ ಬೇರೆ ಅಕೌಂಟ್‌ನಿಂದ ಪವಿತ್ರಾಗೆ ಮೆಸೇಜ್‌ ಮಾಡುತ್ತಿದ್ದ. ಟಾರ್ಚರ್‌ ತಾಳಲಾರದೆ ಪವಿತ್ರಾ ಗೌಡ ಈ ವಿಚಾರವನ್ನು ಮನೆಗೆಲಸದ ವ್ಯಕ್ತಿ ಪವನ್‌ಗೆ ತಿಳಿಸಿದ್ದಳು.ಇದು ದರ್ಶನ್‌ಗೂ ಗೊತ್ತಾಗಿದೆ. ಆ ನಂತರ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡಿಸಿದ ದರ್ಶನ್‌ ಪಟ್ಟಣಗೆರೆಯ ಶೆಡ್‌ನಲ್ಲಿ ಮನಬಂದಂತೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾಸ್ವಾಮಿ ಅಲ್ಲಿಯೇ ಸಾವು ಕಂಡಿದ್ದಾನೆ. ಬಳಿಕ ಶವವನ್ನು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಇನ್ನೊಂದು ಗ್ಯಾಂಗ್‌ಗೆ ಒಪ್ಪಿಸಲಾಗಿತ್ತು. ಅದಕ್ಕಾಗಿ 30 ಲಕ್ಷ ರೂಪಾಯಿಯನ್ನು ನೀಡಿದ್ದರು. ಈ ಹಣ ದರ್ಶನ್‌ ಅವರೇ ನೀಡಿದ್ದು ಎನ್ನಲಾಗುತ್ತಿದೆ.

ದರ್ಶನ್​ ಅಭಿಮಾನಿಗಳಿಂದ ಬ್ಯಾಡ್​ ಕಮೆಂಟ್ಸ್ ಟಾರ್ಚರ್: ಗುರು ನಾನ್‌ ಇನ್ನೂ ಚಿಕ್ಕವಳು ಎಂದ ಸೋನು ಗೌಡ!

ಹಣ ಪಡೆದ ಇನ್ನೊಂದು ಗ್ಯಾಂಗ್‌ ಶವವನ್ನು ಸುಮ್ಮನಹಳ್ಳಿ ಸತ್ ಅನುಗ್ರಹ ಅಪಾರ್ಟ್‌ಮೆಂಟ್‌ನ ಬದಿಯಲ್ಲಿರುವ ರಾಜಾಕಾಲುವೆಯಲ್ಲಿ ಎಸೆದು ಹೋಗಿದ್ದಾರೆ. ಆ ಬಳಿಕ ತಾವೇ ಕೊಲೆ ಮಾಡಿದ್ದಾಗಿ ಪೊಲೀಸ್‌ ಠಾಣೆಗೆ ಬಂದು ಹೇಳಿದ್ದಲ್ಲದೆ, ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ದೇವೆ ಎಂದಿದ್ದರು. ಆದರೆ, ಪೊಲೀಸರ ವಿಚಾರಣೆಯ ವೇಳೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ್ದರಿಂದ ಪೊಲೀಸರು ಮತ್ತಷ್ಟು ವಿಚಾರಣೆ ಮಾಡಿದ್ದಾರೆ. ಬಳಿಕ ಪ್ರಕರಣದಲ್ಲಿ ದರ್ಶನ್‌ ಪಾತ್ರವಿರೋದು ಬಯಲಾಗಿತ್ತು. ಈಗ ದರ್ಶನ್‌ ಜುಲೈ 4ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.

click me!