Published : Mar 11, 2025, 07:32 AM ISTUpdated : Mar 11, 2025, 11:00 PM IST

Kannada Entertainment Live: ತಪ್ಪು ಜಾಗದಲ್ಲಿ ಉದಿತ್​ ನಾರಾಯಣ್​ ಮುತ್ತು ಕೊಟ್ಟರು ಎಂದ ಬಾಲಿವುಡ್​ ನಟಿ! ಗಾಯಕ ಹೇಳಿದ್ದೇನು?

ಸಾರಾಂಶ

ಬೆಂಗಳೂರು (ಮಾ.10): ಏಷ್ಯಾನೆಟ್‌ ಸುವರ್ಣನ್ಯೂಸ್‌ ಮನರಂಜನಾ ಲೈವ್‌ ಬ್ಲಾಗ್‌.  ಕನ್ನಡ ಟಿವಿ ಸೀರಿಯಲ್‌ಗಳು, ಸ್ಯಾಂಡಲ್‌ವುಡ್‌, ಬಾಲಿವುಡ್‌, ಕಾಲಿವುಡ್‌, ಮಾಲಿವುಡ್‌, ಕನ್ನಡ ಕಿರುತೆರೆ, ಒಟಿಟಿ ಸಿರೀಸ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ. ಅದರೊಂದಿಗೆ ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳ ವಿಮರ್ಶೆ, ಹಳೆಯ ಹಾಡುಗಳ ಅವಲೋಕನಗಳ ವಿವರಗಳು ಇಲ್ಲಿರಲಿದೆ.
 

Kannada Entertainment Live: ತಪ್ಪು ಜಾಗದಲ್ಲಿ ಉದಿತ್​ ನಾರಾಯಣ್​ ಮುತ್ತು ಕೊಟ್ಟರು ಎಂದ ಬಾಲಿವುಡ್​ ನಟಿ! ಗಾಯಕ ಹೇಳಿದ್ದೇನು?

11:00 PM (IST) Mar 11

ತಪ್ಪು ಜಾಗದಲ್ಲಿ ಉದಿತ್​ ನಾರಾಯಣ್​ ಮುತ್ತು ಕೊಟ್ಟರು ಎಂದ ಬಾಲಿವುಡ್​ ನಟಿ! ಗಾಯಕ ಹೇಳಿದ್ದೇನು?

ಉದಿತ್​ ನಾರಾಯಣ ಅವರ  ಮುತ್ತಿನ ವಿವಾದಕ್ಕೆ ಸಂಬಂಧಿಸಿದಂತೆ ಖುದ್ದು ಗಾಯಕನೇ ತಮಾಷೆಯ ಉತ್ತರ ನೀಡಿದ್ದಾರೆ. ಅವರ ಪರವಾಗಿ ನಟಿ ನಿಂತಿದ್ದಾರೆ. ಏನಿದು ವಿಷ್ಯ?
 

ಪೂರ್ತಿ ಓದಿ

10:12 PM (IST) Mar 11

ರಾಧಿಕಾ ಡ್ರೆಸ್,​ ಕೆಜಿಎಫ್​ ನಟಿ ಮೌನಿ ರಾಯ್​ಗೆ ಗಿಫ್ಟ್​ ಕೊಟ್ಟ ಯಶ್​? ಅರೆರೆ... ಇದೇನಿದು ಭಾರಿ ಸದ್ದು?

ನಟಿ ರಾಧಿಕಾ ಪಂಡಿತ್​ ಮತ್ತು ಕೆಜಿಎಫ್​ ನಟಿ ಮೌನಿ ರಾಯ್​ ಅವರು ಒಂದೇ ರೀತಿಯ ಔಟ್​ಫಿಟ್​ ಧರಿಸಿರುವ ವಿಡಿಯೋ ವೈರಲ್​ ಆಗಿದ್ದು, ಇದಕ್ಕೆ ತಮಾಷೆಗಳ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ.
 

ಪೂರ್ತಿ ಓದಿ

09:59 PM (IST) Mar 11

ಡಿವೋರ್ಸ್‌ ಆಗಿ 9 ತಿಂಗಳು, ಮತ್ತೆ ಒಂದಾಗೋ ಚಾನ್ಸ್‌ ಇದ್ಯಾ? ಉತ್ತರ ಕೊಟ್ಟ ಚಂದನ್‌ ಶೆಟ್ಟಿ, ನಿವೇದಿತಾ ಗೌಡ!


ಬಿಗ್‌ ಬಾಸ್‌ ಕನ್ನಡ ಸೀಸನ್‌ 5 ಶೋ ಖ್ಯಾತಿಯ ನಿವೇದಿತಾ ಗೌಡ, ಚಂದನ್‌ ಶೆಟ್ಟಿ ಅವರು ಮತ್ತೆ ಒಂದಾಗ್ತಾರಾ ಎಂಬ ಪ್ರಶ್ನೆ ಎದ್ದಿದೆ. ಇನ್ನು ಈ ಜೋಡಿ ನಟನೆಯ ʼಮುದ್ದು ರಾಕ್ಷಸಿʼ ಸಿನಿಮಾ ಶೂಟಿಂಗ್‌ ಮುಗಿದಿದೆ. ಡಿವೋರ್ಸ್‌ ವಿಷಯವಾಗಿ ನಿವೇದಿತಾ, ಚಂದನ್‌ ಶೆಟ್ಟಿ ಅವರು ಮಾಧ್ಯಮದ ಮುಂದೆ ಮಾತನಾಡಿದ್ದಾರೆ.

ಪೂರ್ತಿ ಓದಿ

09:43 PM (IST) Mar 11

ಮಗು ಹೆತ್ತು ಪೂರ್ಣಿ ಕೈಗಿತ್ತು ತುಳಸಿ ಸಾವು? ಮುಗಿಯಲಿದೆ ಶ್ರೀರಸ್ತು ಶುಭಮಸ್ತು- ಇದೇನಿದು ಟ್ವಿಸ್ಟ್​?

ಶ್ರೀರಸ್ತು ಶುಭಮಸ್ತು ಸೀರಿಯಲ್​ನ ಪ್ರೊಮೋ ಬಿಡುಗಡೆಯಾಗಿದ್ದು, ಇದನ್ನು ನೋಡಿದರೆ,  ಧಾರಾವಾಹಿ ಮುಗಿಯುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಏನಿದೆ ಇದರಲ್ಲಿ?
 

ಪೂರ್ತಿ ಓದಿ

09:10 PM (IST) Mar 11

ಪ್ರಜ್ವಲ್​- ಅಕ್ಷತಾ ಅತ್ಯುತ್ತಮ ನಟ, ನಟಿ: ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ- ಪಡೆದ ಹಣವೆಷ್ಟು ? ​ ಡಿಟೇಲ್ಸ್​ ಇಲ್ಲಿದೆ...

2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದೆ. ಪ್ರಜ್ವಲ್ ದೇವರಾಜ್ ಮತ್ತು ಅಕ್ಷತಾ ಪಾಂಡವಪುರ ಅವರಿಗೆ ಅತ್ಯುತ್ತಮ ನಟ, ನಟಿಯಾಗಿ ಆಯ್ಕೆಯಾಗಿದ್ದಾರೆ. ಫುಲ್​ ಡಿಟೇಲ್ಸ್​ ಇಲ್ಲಿದೆ.
 

ಪೂರ್ತಿ ಓದಿ

07:13 PM (IST) Mar 11

ನಿವೇದಿತಾ ಗೌಡ, ಚಂದನ್‌ ಶೆಟ್ಟಿ ಮತ್ತೆ ಒಂದಾದ್ರಾ? ಕಣ್ಣೊರೆಸಿದ ಆ ವಿಡಿಯೋ ಅಸಲಿ ಸತ್ಯ ಏನು?

Bigg Boss Niveditha Gowda And Chandan Shetty News: ʼಬಿಗ್‌ ಬಾಸ್ʼ‌ ಖ್ಯಾತಿಯ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಡಿವೋರ್ಸ್‌ ಪಡೆದಿದ್ದಾರೆ. ಈಗ ನಿವೇದಿತಾ ಗೌಡ ಅವರು ಚಂದನ್‌ ಶೆಟ್ಟಿಯನ್ನು ನೋಡಿ ಕಣ್ಣೀರು ಹಾಕ್ತಿರೋ ವಿಡಿಯೋ ಭಾರಿ ವೈರಲ್‌ ಆಗ್ತಿದೆ. ಈ ಬಗ್ಗೆ ಈ ಜೋಡಿ ಸ್ಪಷ್ಟನೆ ನೀಡಿದೆ. 

ಪೂರ್ತಿ ಓದಿ

07:12 PM (IST) Mar 11

ಅಪ್ಪನ ಹತ್ರ ದುಡ್ಡು ತಗೋಂಡ್ರು ವಾಪಸ್ ಕೊಡ್ತೀನಿ, ಆರ್ಥಿಕವಾಗಿ ನಂಗೆ ಯಾವ ಕಷ್ಟನೂ ಇಲ್ಲ: ಮಿಲನಾ ನಾಗರಾಜ್

ಆರ್ಥಿಕವಾಗಿ ಹೆಣ್ಣು ಮಕ್ಕಳು ಎಷ್ಟು ಸ್ಟ್ರಾಂಗ್ ಇರಬೇಕು. ಸಿನಿಮಾ ಮತ್ತು ಕೆಲಸಗಳಿಗಿಂತ ಫ್ಯಾಮಿಲಿಯನ್ನು ಮುಂದೆ ಇಡಬೇಕು ಎಂದ ಮಿಲನಾ.

ಪೂರ್ತಿ ಓದಿ

06:46 PM (IST) Mar 11

ಹೆಣ್ಣೊಪ್ಪಿಸುವ ಶಾಸ್ತ್ರ: ಕಣ್ಣೀರು ಹಾಕ್ತಿದ್ದ ಪತ್ನಿ ಸಿವಶ್ರೀಗೆ ಮುತ್ತಿಟ್ಟು ಸಮಾಧಾನ ಮಾಡಿದ ತೇಜಸ್ವಿ ಸೂರ್ಯ!

tejasvi surya sivasri skandaprasad marriage: ಸಿವಶ್ರೀ ಸ್ಕಂದ ಹಾಗೂ ನಟ ತೇಜಸ್ವಿ ಸೂರ್ಯ ಅವರೀಗ ಸತಿ-ಪತಿಗಳಾಗಿದ್ದಾರೆ. ಸಿವಶ್ರೀಯ ಹೆಣ್ಣೊಪ್ಪಿಸುವ ಶಾಸ್ತ್ರದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗ್ತಿದೆ. 

ಪೂರ್ತಿ ಓದಿ

06:23 PM (IST) Mar 11

ನನ್ನನ್ನು ನಂಬಿ ಇಂಡಸ್ಟ್ರಿಗೆ ಕರ್ಕೊಂಡು ಬಂದಿದ್ದೇ ಚಿಕ್ಕಣ್ಣ, ಅಪ್ಪು ಸರ್ ಮಾತು ಮರೆತಿಲ್ಲ: ದರ್ಶಿನಿ

ಚಿಕ್ಕಣ್ಣ ಅಂದು ಕೊಟ್ಟ ಅವಕಾಶವನ್ನು ನೆನಪಿಸಿಕೊಂಡು ಧನ್ಯವಾದಗಳನ್ನು ತಿಳಿಸಿದ ದರ್ಶಿನಿ. ಸೀರಿಯಲ್ ಮತ್ತು ಕೊರಿಯೋಗ್ರಾಫಿ ಹೇಗೆ ಮ್ಯಾನೇಜ್ ಮಾಡುತ್ತಿದ್ದಾರೆ?

ಪೂರ್ತಿ ಓದಿ

05:43 PM (IST) Mar 11

ಪೋಲಿಗಳಿಂದ ಸೇಫ್‌ ಆಗಲು ಈ ಪಿನ್ ಬಳಸಬೇಕು ಎಂದು ನಟಿ ಜಯಮಾಲಾಗೆ ಟಿಪ್ಸ್‌ ಕೊಟ್ಟರಂತೆ ಲೀಲಾವತಿ!

ಮಜಾ ಮನೆಯಲ್ಲಿ ಕಾಮಿಡಿ ಮಾತ್ರವಲ್ಲ ಸೇಫ್ಟ್‌ ಟಿಪ್‌ಗಳನ್ನು ಹಂಚಿಕೊಂಡ ಜಯಮಾಲಾ. ಲೀಲಾವತಿ ಅಮ್ಮನವರು ಎಷ್ಟು ಸ್ಮಾರ್ಟ್ ಎಂದ ನೆಟ್ಟಿಗರು.

ಪೂರ್ತಿ ಓದಿ

04:56 PM (IST) Mar 11

ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದು, ಫ್ಯಾನ್ಸ್‌ಗೆ ಕೊಟ್ಟ ಮಾತು ಉಳಿಸ್ಕೊಂಡ ಕಿರಣ್‌ ರಾಜ್!‌

Kannada Actor kiran Raj New Serial karna: ಕನ್ನಡತಿ ಧಾರಾವಾಹಿಯಲ್ಲಿ ಹರ್ಷನಾಗಿ ಕನ್ನಡ ಕಿರುತೆರೆಯನ್ನು ಆಳಿದ ನಟ ಕಿರಣ್‌ ರಾಜ್‌ ಈಗ ಕರ್ಣನ ಪೋಷಾಕು ಧರಿಸಿದ್ದಾರೆ. ಈ ಬಾರಿ ಡಾಕ್ಟರ್‌ ಆಗಿ ಹೀರೋ ಸೆಂಟ್ರಿಕ್‌ ಕಥೆಯಲ್ಲಿ ಮಿಂಚಲಿದ್ದಾರೆ. ಅಷ್ಟೇ ಅಲ್ಲದೆ ಈ ಸೀರಿಯಲ್‌ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನುವ ಹೆಗ್ಗಳಿಕೆ ಕೂಡ ಪಡೆದಿದ್ದಾರೆ. 

ಪೂರ್ತಿ ಓದಿ

04:19 PM (IST) Mar 11

ಸಪ್ತಮಿ ಗೌಡ ಪ್ರೀತಿಯ ಸಿಂಬಾ ಗುಂಡು ಇನ್ನಿಲ್ಲ; ಫೋಟೋ ಹಂಚಿಕೊಂಡು ಕಣ್ಣೀರಿಟ್ಟ ನಟಿ

ತಮ್ಮ ಪ್ರೀತಿಯ ಶ್ವಾನ ನೆನೆದು ಪತ್ರ ಬರೆದ ಸಪ್ತಮಿ ಗೌಡ. ಸಿಂಬಾ ಗುಂಡು ಇಲ್ಲದೆ ಜೀವನ ಎಷ್ಟು ಕಷ್ಟ ಅಂತ ಗೊತ್ತಿರಲಿಲ್ಲ ಎಂದ ನಟಿ....

ಪೂರ್ತಿ ಓದಿ

04:02 PM (IST) Mar 11

ಅಣ್ಣಯ್ಯ ಧಾರಾವಾಹಿ: ಈ ಕಾರಣಕ್ಕೆ ಗುಂಡಮ್ಮಗೆ ಈ ವಾರದ ಕಿಚ್ಚನ ಚಪ್ಪಾಳೆ ಕೊಡ್ಲೇಬೇಕು ಎಂದ ವೀಕ್ಷಕರು!

Annayya Kannada Serial: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಣ್ಣಯ್ಯʼ ಧಾರಾವಾಹಿಯಲ್ಲಿ ಪ್ರೀತಿಸಿದ ಹುಡುಗಿಗೆ ಜಿಮ್‌ ಸೀನ ಮದುವೆಯಾಗಿರೋದು ಗೊತ್ತಾಗಿದೆ. ಹೀಗಾಗಿ ಹುಡುಗಿ ತಂದೆ ಸೀನನಿಗೆ ನಿಂದಿಸಲು ಬಂದರೆ, ಗುಂಡಮ್ಮ ಮಾತ್ರ ಚಾಮುಂಡಿ ಅವತಾರ ತಾಳಿದ್ದಾಳೆ. 
 

ಪೂರ್ತಿ ಓದಿ

03:02 PM (IST) Mar 11

ಸಹೋದರಿಯರ ಜೊತೆ ಭವ್ಯಾ ಗೌಡ ಫೋಟೋಶೂಟ್; ಕ್ಯಾಮೆರಾಮ್ಯಾನ್ ಕೂಡ ಏನ್ ಡವ್ ಮಾಡ್ತಿದ್ದಾರೆ ಅನ್ನೋದಾ?

ಡಿಫರೆಂಟ್ ಸೀರೆಯಲ್ಲಿ ಮಿಂಚಿದ ಅಕ್ಕ-ತಂಗಿಯರು. ಇಲ್ಲಿ ಯಾರು ಸೂಪರ್, ಯಾರು ಮದುವೆ ನೆಕ್ಸಟ್‌ ಹಾಗೂ ಯಾರು ನಮಗೆ ಗರ್ಲ್‌ಫ್ರೆಂಡ್‌ ಅಂತ ಗೆಸ್ ಮಾಡ್ತಿದ್ದಾರೆ ನೆಟ್ಟಿಗರು.

ಪೂರ್ತಿ ಓದಿ

02:55 PM (IST) Mar 11

ಕೋಣ ಚಿತ್ರದ ಶೂಟಿಂಗ್‌ ವೇಳೆ ತಲೆ ಸುತ್ತಿ ಬಿದ್ದ ತನಿಷಾ ಕುಪ್ಪಂಡ !

ಬಿಗ್ ಬಾಸ್ ಮಾಜಿ ಸ್ಪರ್ಧಿ ತನಿಷಾ ಕುಪ್ಪಂಡ, ಕೋಣ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ವೇಳೆ ಅವರು ತಲೆ ಸುತ್ತಿ ಬಿದ್ದಿದ್ದು, ಅದ್ರ ವಿಡಿಯೋ ವೈರಲ್ ಆಗಿದೆ. 
 

ಪೂರ್ತಿ ಓದಿ

02:15 PM (IST) Mar 11

ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವರನ್ನು ಡ್ಯಾನ್ಸ್ ಮಾಸ್ಟರ್ ಮಾಡಿದ ಟಾಲಿವುಡ್ ಹೀರೋ ಇವರೇನಾ?

ಪ್ರಭುದೇವ ಸೌತ್‌ನಲ್ಲಿ ಅಪರೂಪದ ನಟ. ಮಲ್ಟಿ ಟ್ಯಾಲೆಂಟ್ ಇರೋ ವ್ಯಕ್ತಿ ಪ್ರಭುದೇವ್. ತನ್ನ ಡ್ಯಾನ್ಸ್ ಪ್ರತಿಭೆಯಿಂದ ಇಂಡಿಯನ್ ಮೈಕಲ್ ಜಾಕ್ಸನ್ ಅಂತ ಗುರುತಿಸಿಕೊಂಡ ಪ್ರಭುದೇವ ಆಮೇಲೆ ಹೀರೋ ಆಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ಡೈರೆಕ್ಟರ್ ಆಗಿ ಮಿಂಚಿದರು. ಪ್ರಭುದೇವ್ ತುಂಬಾ ಚಿತ್ರಗಳಿಗೆ ಡ್ಯಾನ್ಸ್ ಕೊರಿಯೋಗ್ರಫಿ ನೀಡಿದ್ದಾರೆ.

ಪೂರ್ತಿ ಓದಿ

02:10 PM (IST) Mar 11

ಅಯ್ಯಯ್ಯೋ...ಸಲ್ಮಾನ್ ಖಾನ್‌ ಜೊತೆ ಸಿನಿಮಾ ಮಾಡೋಕೆ ರಶ್ಮಿಕಾ ಮಂದಣ್ಣ ಇಷ್ಟೋಂದ ಹಣ ಕೇಳಿದ್ರಾ?

ರಶ್ಮಿಕಾ ಮಂದಣ್ಣ ಡಿಮ್ಯಾಂಡ್ ಮಾಡ್ಲಿ ಬಿಡ್ಲಿ ಮಾಡಿರೋ ಹೆಸರಿಗೆ, ಗಳಿಸಿರುವ ಪ್ರೀತಿಗೆ ಸಂಭಾವನೆ ಪಡೆದಿದ್ದಾರೆ. ಇಲ್ಲಿದೆ ಫುಲ್ ಮಾಹಿತಿ...

ಪೂರ್ತಿ ಓದಿ

01:59 PM (IST) Mar 11

ಸೌಂದರ್ಯರನ್ನ ಸ್ಟಾರ್ ನಟ ಮೋಹನ್ ಬಾಬು ಕೊಲೆ ಮಾಡ್ಸಿದ್ರಾ?: ಕಂಪ್ಲೇಂಟ್ ಕೊಟ್ಟೋರು ಯಾರು? ಏನಿದು ಹೊಸ ಕತೆ!

ನಟಿ ಸೌಂದರ್ಯ ಅವರ ಸಾವು ಸಹಜ ಸಾವಾ? ಸೌಂದರ್ಯ ಅವರನ್ನ ಸ್ಟಾರ್ ನಟ ಮೋಹನ್ ಬಾಬು ಕೊಲೆ ಮಾಡ್ಸಿದ್ರಾ? ಸೌಂದರ್ಯ ತೀರಿಕೊಂಡ 20 ವರ್ಷಗಳ ನಂತರ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟ ಆ ವ್ಯಕ್ತಿ ಯಾರು? ನಿಜಾಂಶ ಏನು? 

ಪೂರ್ತಿ ಓದಿ

01:51 PM (IST) Mar 11

ನನ್ನ ಗಂಡನ ಸಿನಿಮಾಗೆ ಮಾತ್ರ ಹೀಗ್ಯಾಕೆ? ಯಾಕೆ ಬರಲ್ಲಾ ಆ ಮನಸ್ಸು: ಜ್ಯೋತಿಕಾ ಬೇಸರ

Actress Jyothika Upset: ನಟಿ ಜ್ಯೋತಿಕಾ ಸಂದರ್ಶನವೊಂದರಲ್ಲಿ, ತಮ್ಮ ಪತಿ ಸೂರ್ಯ ಅವರ ಸಿನಿಮಾಗಳು ಮಾತ್ರ ಕಠಿಣ ವಿಮರ್ಶೆಗಳನ್ನು ಎದುರಿಸುತ್ತಿವೆ ಎಂದು ಹೇಳಿದ್ದಾರೆ.

ಪೂರ್ತಿ ಓದಿ

01:33 PM (IST) Mar 11

ಕೌನ್ ಬನೇಗಾ ಕರೋಡಪತಿ ಹೊಸ ಹೋಸ್ಟ್ ಯಾರು? ಬಚ್ಚನ್ ಬದಲಿಗೆ ಬರುತ್ತಿರೋ ನಟಿ ಯಾರು?

KBC New Host: ಅಮಿತಾಭ್ ಬಚ್ಚನ್ ಕೆಬಿಸಿ ತೊರೆಯುವ ಊಹಾಪೋಹಗಳ ನಡುವೆ, ಹೊಸ ಹೋಸ್ಟ್‌ಗಾಗಿ ಸಮೀಕ್ಷೆ ನಡೆಸಲಾಯಿತು. ಶಾರುಖ್ ಖಾನ್ ಮತ್ತು ಟಾಪ್ ನಟಿಯ ಹೆಸರು ಮುಂಚೂಣಿಯಲ್ಲಿದೆ. ಕೆಬಿಸಿಯ ಹೊಸ ಮುಖ ಯಾರು ಆಗಬಹುದು?

ಪೂರ್ತಿ ಓದಿ

01:33 PM (IST) Mar 11

ಸಾವಿತ್ರಿ ಗಂಡ ನಟಿಸಿದ ಏಕೈಕ ತೆಲುಗು ಚಿತ್ರ ಇದೇನಾ.. ಅವರು ತೀರಿಕೊಂಡ ನಂತರ ಚಿರಂಜೀವಿ ಜೊತೆ ನಟಿಸಿದ್ದು ಯಾಕೆ?

ಮಹಾನಟಿ ಸಾವಿತ್ರಿ ತೆಲುಗು ಸಿನೆಮಾ ಇತಿಹಾಸದಲ್ಲಿ ಒಂದು ಲೆಜೆಂಡ್. ಸಾವಿತ್ರಿ ಗಂಡ ಜೆಮಿನಿ ಗಣೇಶನ್ ಅಂತ ನಿಮಗೆಲ್ಲಾ ಗೊತ್ತೇ ಇದೆ. ಸಾವಿತ್ರಿ ಇದ್ದಾಗ ಜೆಮಿನಿ ಗಣೇಶನ್ ಒಂದೇ ಒಂದು ತೆಲುಗು ಚಿತ್ರದಲ್ಲಿ ನಟಿಸಲಿಲ್ಲ. ಆದರೆ ಸಾವಿತ್ರಿ ತೀರಿಕೊಂಡ ಮೇಲೆ ಒಂದೇ ಒಂದು ತೆಲುಗು ಸಿನಿಮಾದಲ್ಲಿ ಜೆಮಿನಿ ಗಣೇಶನ್ ನಟಿಸಿದರು.

ಪೂರ್ತಿ ಓದಿ

01:10 PM (IST) Mar 11

ಕೊನೆಗೂ ಜಾನು ಬುದ್ಧಿವಂತೆ ಆದ್ಳು.. ಹೊಡಿರಿ ಚಪ್ಪಾಳೆ; ಒಂಟಿಯಾದ ಸೈಕೋ ಜಯಂತ್!

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾನು ಕ್ಯಾಮೆರಾಗಳನ್ನು ಪತ್ತೆ  ಹಚ್ಚಿದ್ದಾಳೆ. ಜಯಂತ್‌ನಿಂದ ಅಜ್ಜಿ ಕೋಮಾಗೆ ಹೋಗಿದ್ದು, ಜಾನು ತವರಿಗೆ ಬಂದಿದ್ದಾಳೆ. ಜಯಂತ್ ಒಬ್ಬಂಟಿಯಾಗಿ ದುಃಖದಲ್ಲಿ ಊಟ ಮಾಡುತ್ತಿದ್ದಾನೆ.

ಪೂರ್ತಿ ಓದಿ

01:08 PM (IST) Mar 11

ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್; ಮಾ.12ರಿಂದ ಮೈಸೂರಿನಲ್ಲಿ 4 ದಿನ ಡವಿಲ್ ಚಿತ್ರೀಕರಣಕ್ಕೆ ಅನುಮತಿ!

ನಟ ದರ್ಶನ್ ತೂಗುದೀಪ ಅವರಿಗೆ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಮೈಸೂರಿನಲ್ಲಿ ಮಾ.12ರಿಂದ 15ರವರೆಗೆ ಚಿತ್ರೀಕರಣ ನಡೆಯಲಿದ್ದು, 32 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಪೂರ್ತಿ ಓದಿ

12:12 PM (IST) Mar 11

'ಭಾಗ್ಯಲಕ್ಷ್ಮೀ' ಧಾರಾವಾಹಿ; ಭಾಗ್ಯ ಶ್ರೀಮಂತೆಯಾಗೋದು ಕನಸು ಅನ್ಕೋಬೇಡಿ! ಇಲ್ಲೇ ಇರೋದು ಅಸಲಿ ಮ್ಯಾಟರ್!‌

Bhagyalakshmi Kannada Serial ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಭಾಗ್ಯ ಶ್ರೀಮಂತಳಾಗಿದ್ದಾಳೆ, ತಾಂಡವ್‌ ಅಳುತ್ತಿದ್ದಾನೆ. ಇದು ಕನಸಾಗಿರಬಹುದು. ಆದರೆ ಸೀರಿಯಲ್‌ ತಂಡ ಮುಂದಿನ ಕತೆ ಗುಟ್ಟು ಬಿಟ್ಟುಕೊಡ್ತಿದ್ಯಾ? 
 

ಪೂರ್ತಿ ಓದಿ

11:24 AM (IST) Mar 11

ರಾಮ್ ಚರಣ್ ಅವರಿಂದ ಪಾತ್ರೆ ತೊಳಿಸಿದ ಪುಷ್ಪ ನಿರ್ದೇಶಕ ಸುಕುಮಾರ್: ವಿಷಯ ತಿಳಿದ ಚಿರಂಜೀವಿ ಏನ್ ಮಾಡಿದ್ರು?

ರಾಮ್ ಚರಣ್ ಅವರಲ್ಲಿದ್ದ ನಟನಾ ಪ್ರತಿಭೆಯನ್ನು ಹೊರತಂದ ಸಿನಿಮಾ 'ರಂಗಸ್ಥಳಂ'. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಚರಣ್ ಪಾತ್ರೆ ತೊಳೆಯುವ ಸನ್ನಿವೇಶದ ಬಗ್ಗೆ ಸುಕುಮಾರ್ ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ಪೂರ್ತಿ ಓದಿ

11:21 AM (IST) Mar 11

ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಇಂಡಸ್ಟ್ರಿಯಲ್ಲಿ ಈಗ ಖಡಕ್ ವಿಲನ್; 'ಮೂಕುತಿ ಅಮ್ಮನ್- 2' ಚಿತ್ರದಲ್ಲಿ ದುನಿಯಾ ವಿಜಯ್

ತೆಲುಗು ಅಯ್ತು ಈಗ ತಮಿಳು ಚಿತ್ರರಂಗದಲ್ಲಿ ಹಿಟ್‌ ಕೊಡಲು ಮುಂದಾಗಿದ್ದಾರೆ ದುನಿಯಾ ವಿಜಯ್. ಅವಕಾಶಕ್ಕಾಗಿ ಕಷ್ಟ ಪಡುತ್ತಿದ್ದ ಇಂಡಸ್ಟ್ರಿಯಲ್ಲಿ ಬೆಳೆದು ನಿಂತ ನಟ...... 

ಪೂರ್ತಿ ಓದಿ

10:57 AM (IST) Mar 11

HCL ಕಂಪೆನಿಯ ಮುಖ್ಯಸ್ಥೆಯಾಗುವ ಮುನ್ನ ಪತ್ರಕರ್ತೆಯಾಗಿದ್ದ, ದೇಶದ 3ನೇ ಶ್ರೀಮಂತೆಯ ನೆಟ್‌ವರ್ತ್ ಎಷ್ಟು?

ಭಾರತದ ಶ್ರೀಮಂತ ಮಹಿಳೆ: ರೋಶ್ನಿ ನಾಡರ್, ಶಿವ ನಾಡರ್ ಅವರ ಪುತ್ರಿ, 3.13 ಲಕ್ಷ ಕೋಟಿ ನಿವ್ವಳ ಮೌಲ್ಯದೊಂದಿಗೆ ಮೂರನೇ ಶ್ರೀಮಂತ ಭಾರತೀಯರಾಗಿದ್ದಾರೆ. ಅವರು HCL ಜವಾಬ್ದಾರಿಯನ್ನು ಹೊಂದಿದ್ದಾರೆ. ಆದಾಗ್ಯೂ, ಅವರು ಬೇರೆ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡಲು ಬಯಸಿದ್ದರು.

ಪೂರ್ತಿ ಓದಿ

10:47 AM (IST) Mar 11

ಮದುವೆಯಾಗಿ 6 ತಿಂಗಳಿಗೆ ಡಿವೋರ್ಸ್‌; ʼಟ್ರಯಲ್‌ಗೋಸ್ಕರ ವಿವಾಹವಾದೆʼ ಎಂದ ಖ್ಯಾತ ಕಿರುತೆರೆ ನಟಿ!

Actress Aditi Sharma Divorce: ಇತ್ತೀಚೆಗೆ ಯಜುವೇಂದ್ರ ಚಾಹಲ್ ಹಾಗೂ ಧನಶ್ರೀ ಡಿವೋರ್ಸ್‌ ವಿಚಾರ ಸದ್ದು ಮಾಡ್ತಿದೆ. ಈಗ ಅದಿತಿ ಶರ್ಮಾ ಅವರು ಮದುವೆಯಾಗಿ ಆರು ತಿಂಗಳಿಗೆ ಡಿವೋರ್ಸ್‌ಗೆ ಮುಂದಾಗಿದ್ದಾರೆ. ಸಹನಟನ ಜೊತೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಪತಿ ಡಿವೋರ್ಸ್‌ ಕೊಡಲು ಮುಂದಾಗಿದ್ದಾರಂತೆ. 

ಪೂರ್ತಿ ಓದಿ

10:46 AM (IST) Mar 11

ಸಿನಿಮಾ ಸೆಲೆಬ್ರಿಟಿ ಅಂದ್ರೆ ಕೆಸರೆರಚೋಕೆ ರೆಡಿನಾ?: ಗಾಯಕಿ ಕಲ್ಪನಾ ಗರಂ ಆಗಿದ್ದು ಯಾರ ವಿರುದ್ಧ?

ಗಾಯಕಿ ಕಲ್ಪನಾ ರಾಘವೇಂದ್ರ ಕಳೆದ ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ತನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಪೂರ್ತಿ ಓದಿ

09:55 AM (IST) Mar 11

ರಿಯಲ್‌ ಆಗಿ ಆಗಲ್ಲ ಎಂದು ರೀಲ್‌ನಲ್ಲಿ ವೀಕ್ಷಕರ ಆಸೆ ಈಡೇರಿಸಲು ಸಜ್ಜಾದ ʼಮುದ್ದು ಸೊಸೆʼ ಹೀರೋ ತ್ರಿವಿಕ್ರಮ್!‌

Trivikram Starrer Muddhu Sose Kannada Serail: ಖಾಸಗಿ ವಾಹಿನಿಯಲ್ಲಿ ಮುದ್ದು ಸೊಸೆ ಧಾರಾವಾಹಿ ಪ್ರಸಾರ ಆಗಲಿದೆ. ಈಗಾಗಲೇ ಪ್ರೋಮೋ ರಿಲೀಸ್‌ ಆಗಿದ್ದು, ತ್ರಿವಿಕ್ರಮ್‌, ಪ್ರತಿಮಾ ಹೀರೋ, ಹೀರೋಯಿನ್‌ ಎನ್ನೋದು ಬಹಿರಂಗ ಆಗಿದೆ. ಈಗ ಇನ್ನೊಂದು ಪ್ರೋಮೋ ರಿಲೀಸ್‌ ಆಗಿದ್ದು, ಸಾಕಷ್ಟು ಕುತೂಹಲ ಸೃಷ್ಟಿಮಾಡಿದೆ. 

ಪೂರ್ತಿ ಓದಿ

09:42 AM (IST) Mar 11

ನಟಿ ರಶ್ಮಿಕಾ ಮಂದಣ್ಣಗೆ ಆ ಅರ್ಥದಲ್ಲಿ ಹೇಳಿಲ್ಲ: ಶಾಸಕ ರವಿಕುಮಾರ್ ಗೌಡ ಗಣಿಗ

ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಕರ್ನಾಟಕ ಕಾಂಗ್ರೆಸ್ ಎಂಎಲ್ಎ ರವಿ ಕುಮಾರ್ ಗೌಡ ಗಣಿಗ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಅವರು ತಮ್ಮ ಹಿಂದಿನ ಹೇಳಿಕೆಗೆ ಮತ್ತಷ್ಟು ಸ್ಪಷ್ಟನೆ ನೀಡಿದ್ದಾರೆ.

ಪೂರ್ತಿ ಓದಿ

09:30 AM (IST) Mar 11

ರಂಭಾ ಮುಂದೆ ಡ್ಯಾನ್ಸರ್‌ ಆಗಿ ಪರಿಚಯ.. ಈಗ ಪ್ಯಾನ್ ಇಂಡಿಯಾ ಬಾಕ್ಸಾಫೀಸ್ ಶೇಕ್ ಮಾಡ್ತಿರೋ ಹೀರೋಯಿನ್ ಯಾರು?

ರಂಭಾ ಅಂದ್ರೆ ಒಂದು ಕಾಲದಲ್ಲಿ ಡ್ಯಾನ್ಸ್ ಸೆನ್ಸೇಷನ್, ಗ್ಲಾಮರ್ ಸೆನ್ಸೇಷನ್. ಅಂಥ ರಂಭಾ ಮುಂದೆ ಒಂದು ಹುಡುಗಿ ಡ್ಯಾನ್ಸರ್ ಆಗಿ ಮಿಂಚಿದಳು. ಆದ್ರೆ ಈಗ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಬಾಕ್ಸಾಫೀಸ್ ಶೇಕ್ ಮಾಡ್ತಿದ್ದಾಳೆ.

ಪೂರ್ತಿ ಓದಿ

09:19 AM (IST) Mar 11

ನೋ.. ಇದು ಶಂಕರ್‌ನಾಗ್‌ ಅವರದ್ದು..! ಇಳಯರಾಜ ಗುಡುಗು: ಇದು ಕನ್ನಡಿಗರು ಹೆಮ್ಮಪಡುವಂತಹ ವಿಷಯ!

Shankar Nag: ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಶಂಕರ್ ನಾಗ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ ಎಂದು ಡ್ರಮರ್ ಅರುಣ್ ಕುಮಾರ್ ಸರಿಗಮಪ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಪೂರ್ತಿ ಓದಿ

08:36 AM (IST) Mar 11

ಸೂಪರ್‌ಹಿಟ್ ಅಪ್ಪ-ಮಗನ ಜೋಡಿಗೆ ಇಬ್ಬರು ಸ್ಟಾರ್ ನಟಿಯರು, ಆದ್ರೂ ಕಲೆಕ್ಷನ್ ಬರಲಿಲ್ಲ, ಮೊದಲ ದಿನವೇ ಮುಗ್ಗರಿಸಿದ ಸಿನಿಮಾ

ಸಲ್ತನತ್ ಸಿನಿಮಾ ಬಿಡುಗಡೆಯಾಗಿ 39 ವರ್ಷ ಆಯ್ತು. 1986ರಲ್ಲಿ ಬಂದ ಈ ಚಿತ್ರದ ನಿರ್ದೇಶಕ ಮುಕುಲ್ ಆನಂದ್. ಸಿನಿಮಾ ರಿಲೀಸ್ ಆದ ಕೂಡಲೇ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತಿತು, ಇದರಿಂದ ನಿರ್ಮಾಪಕರಿಗೆ ಕೋಟಿ ನಷ್ಟವಾಯಿತು.

ಪೂರ್ತಿ ಓದಿ

07:34 AM (IST) Mar 11

ಪುನೀತ್‌ ಜನ್ಮದಿನಕ್ಕೆ 5 ವಿಶೇಷ ಪೋಸ್ಟ್‌ ಕಾರ್ಡ್‌

ಮಾರ್ಚ್‌ 17ಕ್ಕೆ ಪುನೀತ್‌ ರಾಜ್‌ಕುಮಾರ್‌ 50ನೇ ಜನ್ಮದಿನ. ಈ ಹಿನ್ನಲೆಯಲ್ಲಿ ಅಂಚೆ ಇಲಾಖೆಯಲ್ಲಿ ಪೋಸ್ಟ್‌ ಕಾರ್ಡ್‌ ರಿಲೀಸ್‌ ಆಗಲಿದೆ. ಅಪ್ಪು, ನಗುಮುಖದ ರಾಜಕುಮಾರ, ಪವರ್‌ ಸ್ಟಾರ್‌, ಕರ್ನಾಟಕ ರತ್ನ ಸೇರಿ 5 ವಿಶೇಷ ಅಂಚೆ ಕಾರ್ಡ್‌ಗಳು ರಿಲೀಸ್‌ ಆಗಲಿದೆ.

07:33 AM (IST) Mar 11

ಅಪ್ಪು ಕ್ರೀಡಾಭಿಮಾನಿಯಾಗಿದ್ದರು, ಅವರ ಆಶಯ ಮುಂದುವರಿಸುತ್ತೇವೆ: ಅಶ್ವಿನಿ ಪುನೀತ್ ರಾಜ್ಕುಮಾರ್

ನಂಜನಗೂಡಿನಲ್ಲಿ ಪುನೀತ್ ರಾಜ್‌ಕುಮಾರ್ ಕ್ರಿಕೆಟ್ ಕಪ್‌ಗೆ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಪುನೀತ್ ಅವರ ಆಶಯಗಳನ್ನು ಮುಂದುವರೆಸುವುದಾಗಿ ಹೇಳಿದರು. ಯುವಕರಿಗೆ ಸ್ಫೂರ್ತಿ ನೀಡುವ ಚಿತ್ರಗಳನ್ನು ನಿರ್ಮಿಸಲಾಗುವುದು ಎಂದರು.

ಪೂರ್ತಿ ಓದಿ

07:32 AM (IST) Mar 11

ಮಾತು ಬಾರದ, ಕಿವಿ ಕೇಳಿಸದ ಪ್ರಖ್ಯಾತ ನಟಿಯ ಮದುವೆ ಫಿಕ್ಸ್‌, ಗಂಟೆ ಬಾರಿಸೋ ಫೋಟೋ ಹಂಚಿಕೊಂಡ ನಟಿ!

ಕಿವುಡು ಮತ್ತು ಮೂಗಿಯಾಗಿದ್ದರೂ, ನಟಿ ಅಭಿನಯ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಯಶಸ್ಸು ಗಳಿಸಿದ್ದಾರೆ. ಅವರು ಪುನೀತ್ ರಾಜ್‌ಕುಮಾರ್ ಅವರ 'ಹುಡುಗರು' ಚಿತ್ರದಲ್ಲಿ ನಟಿಸಿದ್ದು, ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಪೂರ್ತಿ ಓದಿ


More Trending News