ಕಣ್ಣಲ್ಲೇ ರೇಪ್: ನಟಿ ಇಶಾ ಗುಪ್ತಾ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಉದ್ಯಮಿ!

By Web DeskFirst Published Jul 20, 2019, 8:47 PM IST
Highlights

ಸಂಕಷ್ಟದಲ್ಲಿ ಬಾಲಿವುಡ್ ನಟಿ ಇಶಾ ಗುಪ್ತಾ| ಹೋಟಲ್ ಉದ್ಯಮಿ ರೋಹಿತ್ ವಿಗ್ ವಿರುದ್ಧ ಆರೋಪ| ತಮ್ಮನ್ನು ಕಣ್ಣಲ್ಲೇ ರೇಪ್ ಮಾಡಿದ ರೋಹಿತ್ ಎಂದಿದ್ದ ಇಶಾ| ಇಶಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ರೋಹಿತ್ ವಿಗ್| ಇಶಾ ಗುಪ್ತಾ ಆರೋಪದಿಂದ ಗೌರವಕ್ಕೆ ಧಕ್ಕೆಯಾಗಿದೆ ಎಂದ ರೋಹಿತ್|  

ನವದೆಹಲಿ(ಜು.20): ಗೆಳೆಯರೊಂದಿಗೆ ಪಾರ್ಟಿ ಮಾಡುತ್ತಿದ್ದಾಗ ಹೋಟೆಲ್ ಮಾಲೀಕ ನನ್ನನ್ನು ಕಣ್ಣಲ್ಲೆ ರೇಪ್ ಮಾಡಿದ ಎಂದು ಆರೋಪಿಸಿದ್ದ ಬಾಲಿವುಡ್ ನಟಿ ಇಶಾ ಗುಪ್ತಾ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಶಾ ಗುಪ್ತಾ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ, ಹೋಟೆಲ್ ಮಾಲೀಕ ರೋಹಿತ್ ವಿಗ್ ನಟಿಯ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ  ದಾಖಲಿಸಿದ್ದಾರೆ.

ಹೋಟೆಲ್ ಉದ್ಯಮಿ ರೋಹಿತ್ ವಿಗ್ ತಮ್ಮ ವಕೀಲ ವಿಕಾಸ್ ಪಹ್ವಾರ್ ಮೂಲಕ ಇಶಾ ಗುಪ್ತಾ ವಿರುದ್ಧ ಸಾಕೇತ್ ಕೋರ್ಟ್ ನಲ್ಲಿ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. 

ನಟಿಯ ಸುಳ್ಳು ಆರೋಪದಿಂದಾಗಿ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದ ನಿತ್ಯ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದು, ಇದರಿಂದ ತಮ್ಮ ಹಾಗೂ ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ ಎಂದು ರೋಹಿತ್ ಹೇಳಿದ್ದಾರೆ.

ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ನಟಿಯಿಂದ ತಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೋಹಿತ್ ವಿಗ್ ಕೋರಿದ್ದು, ನ್ಯಾಯಾಲಯ ಪ್ರಕರಣವನ್ನು ಆ.28ಕ್ಕೆ ಮುಂದೂಡಿದೆ. 

If a woman like me can feel violated and unsafe in the county, then idk what girls around feel. Even with two securities around I felt getting raped.. you’re a swine.. he deserves to rot

— Esha Gupta (@eshagupta2811)

ಇತ್ತೀಚಿಗಷ್ಟೇ ಇಶಾ ಗುಪ್ತಾ ರೆಸ್ಟೋರೆಂಟ್ ಮಾಲೀಕ ರೋಹಿತ್ ತಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡರು ಎಂದು ಸಾಮಾಜಿಕ ಜಾಲತಾಣದಲ್ಲಿ ದುಖಃ ತೋಡಿಕೊಂಡಿದ್ದರು.

Men like Rohit vig, are the reason women don’t feel safe any where. You around me with your eyes and stares was enough

— Esha Gupta (@eshagupta2811)
click me!