ಅಂಟಾರ್ಕ್‌ಟಿಕ್ ಮೇಲೆ ನಡೆಯಲು ಹೊರಟವರ ಮೊದಲ ಹಡಗು ಇದು. ಆದರೆ ಹಡಗು ಮುರಿದು ಕನಸು ಛಿದ್ರವಾಗಿತ್ತು. 105 ವರ್ಷಗಳ ಬಳಿಕ ಈ ಹಡಗು ಹೇಗಿದೆ?
ಅಂಟಾರ್ಕ್‌ಟಿಕ್ (Antarctic) ನಡುಗಡ್ಡೆಯ ಮಧ್ಯದಲ್ಲಿ ಇರುವ ವೆಡ್ಡೆಲ್ ಸೀ (Weddel Sea) ಎಂಬ ಸಮುದ್ರದಲ್ಲಿ 105 ವರ್ಷಗಳ ಹಿಂದೆ ಹಿಮಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡು, ನಂತರ ಮುಳುಗಿಹೋದ ಎಂಡುರೆನ್ಸ್ (Endurance) ಎಂಬ ಹಡಗು (Shipwreck) ಪತ್ತೆಯಾಗಿದೆ.
1915ರಲ್ಲಿ ಮುಳುಗಿದ ಈ ಹಡಗನ್ನು ಸಮುದ್ರ ವಿಜ್ಞಾನಿಗಳು ಈ ವಾರ ಪತ್ತೆ ಮಾಡಿದ್ದಾರೆ. ನೂರು ವರ್ಷಗಳ ಹಿಂದೆ ಮುಳುಗಿದ್ದರೂ, ಸಮುದ್ರ ನೀರಿನಲ್ಲಿ 10,000 ಅಡಿಗಳ ಆಳದಲ್ಲಿ ಕುಳಿತಿದ್ದರೂ, ನೌಕೆ ಒಂದಿಷ್ಟೂ ತುಕ್ಕು ಹತ್ತದೆ, ಕೆಡದೆ, ನಿನ್ನೆ ಮೊನ್ನೆಯಷ್ಟೇ ಮುಳುಗಿದಂತೆ ಇದೆ ಎಂದು ಶೋಧಕರು ತಿಳಿಸಿದ್ದಾರೆ. ಇದರ ಅಪರೂಪದ ಚಿತ್ರಗಳನ್ನು ಹೊರಬಿಟ್ಟಿದ್ದಾರೆ. ಫಾಕ್‌ಲ್ಯಾಂಡ್ಸ್ ಮೆರಿಟೈಮ್ ಹೆರಿಟೇಜ್ ಟ್ರಸ್ಟ್ ಎಂಬ ಸಂಸ್ಥೆಯ ಶೋಧಕರು ಇದನ್ನು ಕಂಡುಹಿಡಿದಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ಸಮುದ್ರದಲ್ಲಿ ಮುಳುಗಿದ ನೌಕೆಗಳು, ಸಾಗರದ ಆಳದಲ್ಲಿ ಇರಬಹುದಾದ ಅಮೂಲ್ಯ ಸಂಪತ್ತು- ಇವುಗಳನ್ನೆಲ್ಲ ಶೋಧಿಸಿ ತೆಗೆಯುವುದು ಇವರ ಕಾರ್ಯ.
ಇದನ್ನು ಹುಡುಕುವುದು ತುಂಬಾನೇ ಕಷ್ಟವಾಗಿತ್ತು. ಯಾಕೆಂದರೆ ಇದು ಇದ್ದ ಪ್ರದೇಶ. ಇಲ್ಲಿ ಅದನ್ನು ಹುಡುಕಿ ತೆಗೆಯುವುದು ಅಸಾಧ್ಯ ಎಂದೇ ಎಲ್ಲರೂ ಭಾವಿಸಿದ್ದರು. ಇದು ಸದಾ ಐಸ್‌ನಿಂದ ತುಂಬಿದ ಪ್ರದೇಶವಾಗಿತ್ತು. ವಾಸ್ತವವಾಗಿ ವೆಡ್ಡೆಲ್ ಸಮುದ್ರವೇ ಸದಾ ನೀರ್ಗಲ್ಲುಗಳ ರಾಶಿಯಿಂದ ಸುತ್ತುವರಿದಿರುತ್ತದೆ. ಈ ಪ್ರದೇಶದಲ್ಲಿ ಸದಾ ಮೈನಸ್ 18 ಡಿಗ್ರಿಯಿಂದ ಕೆಳಗಿರುತ್ತದೆ ತಾಪಮಾನ. ಐಸ್‌ಕಲ್ಲುಗಳನ್ನು ಕತ್ತರಿಸಿಕೊಂಡು ಆ ಪ್ರದೇಶವನ್ನು ಸೇರಬೇಕು. ಇಷ್ಟೆಲ್ಲ ಕಷ್ಟಗಳನ್ನು ಎದುರಿಸಿ ಫಾಕ್‌ಲ್ಯಾಂಡ್ ತಂಡ ಆ ಪ್ರದೇಶದಲ್ಲಿ ಸಬ್‌ಮರ್ಸಿಬಲ್‌ಗಳನ್ನು ಬಳಸಿ, ಸಾಗರದಡಿಯಲ್ಲಿ ಹುಡುಕಾಡಿ, ಕಡೆಗೂ ಅದು ಅಡಗಿದ ಸ್ಥಳವನ್ನು ಪತ್ತೆಹಚ್ಚಿತು ಮೂರು ಸಾವಿರ ಮೀಟರ್ ಅಥವಾ ಮೂರು ಕಿಲೋಮೀಟರ್ ಆಳದಲ್ಲಿ ಹುದುಗಿದ್ದ ಈ ನೌಕೆಯ ಬಳಿ ಹೋಗುವುದೂ ತ್ರಾಸದಾಯಕವೇ ಆಗಿತ್ತು.
ಅದಿರಲಿ, ಈ ನೌಕೆಗಾಗಿ ಇಷ್ಟೊಂದು ಹುಡುಕಾಟವೇಕೆ?
Gender Disparity: ಭಾರತದಲ್ಲಿ ಪ್ರತಿ 5 ಹೂಡಿಕೆದಾರರಲ್ಲಿ ಕೇವಲ ಒಬ್ಬಳು ಮಹಿಳೆ!
undefined
ಇಷ್ಟೆಲ್ಲ ಶೋಧಿಸಿ ಪತ್ತೆಹಚ್ಚಿದ ಈ ನೌಕೆಯಲ್ಲಿ ಅಮೂಲ್ಯವಾದ ಚಿನ್ನಾಭರಣದಂಥ ಸ್ವತ್ತುಗಳು ಏನೂ ಇಲ್ಲ. ಇದು ಐಸ್‌ನಲ್ಲಿ ಸಿಕ್ಕಿಹಾಕಿಕೊಂಡು ಅದರ ಮುಂದಿನ ಭಾಗ ಮುರಿದಿತ್ತು. ಹಿಂದೆಯೂ ಮುಂದೆಯೂ ಹೋಗಲಾಗದೆ ಸಿಲುಕಿಕೊಂಡು ಹಡಗಿನಿಂಧ ಕ್ಯಾಪ್ಟನ್ ಶಕಲ್‌ಟನ್ (Shakleton) ಮತ್ತಿತರ ಸಿಬ್ಬಂದಿ ಪುಟ್ಟ ದೋಣಿಗಳಿಗೆ ದಾಟಿಕೊಂಡು ಬಲು ಕಷ್ಟದಿಂದ, ಸಮುದ್ರದ ಅಬ್ಬರವನ್ನು ಉತ್ತರಿಸಿ ಹೇಗೋ ಊರಿಗೆ ಮರಳಿದ್ದರು. ನಂತರ ಯಾರೂ ಈ ನೌಕೆಯ ಗತಿ ಏನಾಯಿತೆಂದು ನೋಡಲು ಹೋಗಿರಲಿಲ್ಲ. ಶಕಲ್‌ಟನ್ ನೇತೃತ್ವದಲ್ಲಿ ಅಂಟಾರ್ಕ್‌ಟಿಕ್ ಧ್ರುವದ ಶೋಧಕ್ಕೆ ಹೋದ ತಂಡ ಇದಾಗಿತ್ತು. ಐಸ್‌ನಲ್ಲಿ ಸಿಲುಕಿಕೊಂಡ ಹಡಗು ಬೇಸಿಗೆಯಲ್ಲಿ ಐಸ್ ನೀರಾದಾಗ, ಛಿದ್ರಗೊಂಡ ಹಡಗಿನೊಳಗೆ ನೀರು ತುಂಬಿಕೊಂಡು ಅದು ಆಳಕ್ಕೆ ಮುಳುಗಿದೆ. ಎಂಡುರೆನ್ಸ್ ಹಡಗಿಗೆ ಮಹತ್ವ ಬರಲು ಅದು ಹೊರಟ ಉದ್ದೇಶವೇ ಕಾರಣ. ಆಂಗ್ಲೋ ಐರಿಶ್ ಮೂಲದ ಕ್ಯಾಪ್ಟನ್ ಶಕಲ್‌ಟನ್‌ನ ತಂಡ, ಅಂಟಾರ್ಕ್‌ಟಿಕಾವನ್ನು ಕಾಲ್ನಡಿಗೆಯಲ್ಲಿ ನಡೆದು ನೋಡಲು ಪ್ರಯತ್ನಿಸಲು ಮುಂದಾಗಿತ್ತು. ಈ ಸಾಹಸಕ್ಕೆ ಹೊರಟ ಮೊದಲ ತಂಡವಿದು, ಆದರೆ ಹಡಗು ಮುಳುಗುವ ಮೂಲಕ ಸಾಹಸ ಕೈದಾಗಿತ್ತು. ಹೀಗಾಗಿ ಇದಕ್ಕೆ ಮಹತ್ವ. ಈ ಹಡಗಿನಲ್ಲಿ ಅಮೂಲ್ಯ ವಸ್ತುಗಳೇನೂ ಇಲ್ಲ. ಎಲ್ಲರೂ ಪ್ರತಿಕೂಲ ವಾತಾವರಣದಿಂದ ಬದುಕಿ ಪಾರಾಗಿ ಬಂದಿದ್ದುದೇ ಪವಾಡ. ತನ್ನ ಎಲ್ಲ ಸಿಬ್ಬಂದಿಯನ್ನೂ ಜೀವಹಾನಿಯಿಲ್ಲದೆ ೮೦೦ ಕಿಲೋಮೀಟರ್ ದೂರ ದೋಣಿಗಳಲ್ಲಿ ಕರೆತಂದು ರಕ್ಷಿಸಲು ಕ್ಯಾಪ್ಟನ್ ಶಕಲ್‌ಟನ್ ಶಕ್ತನಾಗಿದ್ದ. ಅದಕ್ಕೇ ಆತನನ್ನು ಹೀರೋ ಎಂದು ಕೊಂಡಾಡಲಾಗುತ್ತದೆ.
ಕುಟುಂಬದಲ್ಲಿ cancer ಇತಿಹಾಸ ಇದ್ರೆ, ಈ 5 ಆಹಾರದಿಂದ ದೂರವೇ ಇರಿ
ಹಡಗೇನೋ ಪತ್ತೆಯಾಗಿದೆ, ಆದರೆ ಅದರಿಂಧ ಏನನ್ನೂ ತರುವಂತಿಲ್ಲ. ಅದಕ್ಕೆ ಕಾರಣ ಅಂಟಾರ್ಕ್‌ಟಿಕ್ ಒಪ್ಪಂದ. ಈ ಒಪ್ಪಂದದ ಪ್ರಕಾರ ಈ ಭೂಭಾಗ ಎಲ್ಲ ದೇಶಗಳಿಗೆ ಸೇರಿದುದು. ಅಲ್ಲಿನ ಯಥಾಸ್ಥಿತಿಯನ್ನು ಕದಡುವಂತಿಲ್ಲ. ಅಲ್ಲಿಂದ ಏನನ್ನೂ ತರುವಂತಿಲ್ಲ, ಏನನ್ನೂ ಕೊಂಡೊಯ್ಡು ಅಲ್ಲಿ ಬಿಡುವಂತಿಲ್ಲ. ಅಲ್ಲಿ ವಾತಾವರಣದಲ್ಲಾಗಲೀ, ಜೀವವೈವಿಧ್ಯದಲ್ಲಾಗಲೀ ಮಧ್ಯಪ್ರವೇಶ ಮಾಡುವಂತಿಲ್ಲ. ಹೀಗಾಗಿ ಮುಳುಗಿದ ಹಡಗು ಇನ್ನು ಮುಂಧೆ ಅಂತಾರಾಷ್ಟ್ರೀಯ ಪ್ರಾಚ್ಯವಸ್ತು ಎಂದು ಪರಿಗಣಿಸಲ್ಪಡುತ್ತದೆ. ತಾಕತ್ತಿದ್ದವರು ಅಲ್ಲಿ ಹೋಗಿ ಅದನ್ನು ನೋಡಿ ಬರಬಹುದು. ವಿಶೇಷ ಎಂದರೆ ಈ ಹಡಗು ಹೆಚ್ಚುಕಡಿಮೆ ಯಥಾಸ್ಥಿತಿಯಲ್ಲಿರುವುದು. ಈ ಹಡಗು ಆಗಿನ ಕಾಲದ ತಂತ್ರಜ್ಞಾನ ಬಳಸಿ ಹೆಚ್ಚಿನ ಪಾಲು ಮರ ಹಾಗೂ ಸ್ವಲ್ಪ ಅಂಶ ಕಬ್ಬಿಣದಿಂದ ಮಾಡಲ್ಪಟ್ಟಿದೆ. ನಂಬಿದ್ರೆ ನಂಬಿ, ಆ ಮರ ಕೂಡ ಏನೂ ಆಗದೆ ಹಾಗೇ ಇದೆ ಯಾಕೆಂದರೆ ಇಲ್ಲಿ ಜಗತ್ತಿನ ಇತರ ಭಾಗಗಳಲ್ಲಿರುವಂತೆ ಮರವನ್ನು ಭಕ್ಷಿಸುವ ಗೆದ್ದಲಿನಂಥ ಸಮುದ್ರಜೀವಿಗಳಿಲ್ಲ.
Womens day: ಹೆಣ್ಣುಮಗುವನ್ನು ಬೆಳೆಸುವ ಖುಷಿಯೇ ಬೇರೆ, ನೀವಿದನ್ನು ಗಮನಿಸಿದ್ದೀರಾ?
ಈ ವರ್ಷ ಈ ಹಡಗನ್ನು ಪತ್ತೆ ಮಾಡುವಲ್ಲಿ ವಾತಾವರಣವೂ ನೆರವಾಗಿದೆ, 1970ರಿಂದಲೇ ಹಡಗಿಗಾಗಿ ಹುಡುಕಾಟ ನಡೆಯುತ್ತಿದ್ದರೂ ಅದು ಪತ್ತೆಯಾಗಿರಲಿಲ್ಲ. ಈ ವರ್ಷ, ಮುಳುಗಿದ ಹಡಗಿನ ಸುತ್ತಮುತ್ತ ಇರುವ ಐಸ್‌ನಲ್ಲಿ ಬಹುಭಾಗ ಕರಗಿದೆ. ಹೀಗಾಗಿ ದೋಣಿಗಳು, ಸಬ್‌ಮರ್ಸಿಬಲ್‌ಗಳು ಅದರ ಬಳಿಗೆ ಹೋಗಲು ಸಾಧ್ಯವಾಗಿದೆ. ಯಾರೋ ಅನಾಮಿಕ ದಾನಿ ಈ ಹಡಗಿನ ಪತ್ತೆಗಾಗಿ ಕೋಟಿಗಟ್ಟಲೆ ಡಾಲರ್ ಹೂಡಿದ್ದಾರೆ. ಅವರ್ಯಾರೆಂದು ಗೊತ್ತಾಗಿಲ್ಲ.