
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಮಾತನಾಡಿರುವ ಹಳೆಯ ವಿಡಿಯೋ ಒಂದು ವೈರಲ್ ಆಗ್ತಿದೆ. ಅದರಲ್ಲಿ 'ನನಗೆ ಗೊತ್ತಿರೋ ಪ್ರಕಾರ, ನಾವೆಲ್ಲಾ ಎಲ್ಲೋ ಒಂದ್ಕಡೆ ಹೋಗಿ ಇನ್ನೆಲ್ಲೋ ಒಂದ್ಕಡೆ ಸೆಟ್ಲ್ ಆಗ್ತೀವಿ ನಾವು.. ಎಷ್ಟೂ ಹುಡುಗೀರನ್ನ ನೋಡಿ ಕೊನೆಗೆ ನಮ್ಗೇ ಗೊತ್ತಿಲ್ದೇ ಇರೋ ಹುಡುಗೀರಿಗೆ ಹೋಗಿ ತಾಳಿ ಕಟ್ತೀವಿ ನಾವು. ಅದಾದ್ಮೇಲೆ ಇವ್ಳೇ ನನ್ ಹೆಂಡ್ತಿ, ಪ್ರೀತಿಸ್ಬೇಕು ನಾವು ಅನ್ನೋ ಒಂದ್ ಅಂಡರ್‌ಸ್ಟ್ಯಾಂಡಿಂಗ್‌ಗೆ ಬರ್ತೀವಿ ನಾವು..
ಯಾಕೆ ಅಂದ್ರೆ, ತಾಳಿ ಕಟ್ಟೋವಾಗ ಪ್ರೀತಿ ಅನ್ನೋದು ಇರೋದೇ ಇಲ್ಲ ನಮ್ಮಿಬ್ರ ಮಧ್ಯೆ.. ಇದು 90% ಜನರ ಜೀವನದಲ್ಲಿ ಆಗೋದೇ ಇದು. ನೂರರಲ್ಲಿ 90% ಗಿಂತ ಹೆಚ್ಚು ಜನರು ಮದುವೆ ದಿನ ಅಥವಾ ಕೆಲವು ದಿನ ಮೊದಲು ಮಾತ್ರ ತಾವು ಮದುವೆಯಾಗುವ ಹುಡುಗಿಯನ್ನು ನೋಡುತ್ತಾರೆ. ಅವ್ರು ಯಾರು ಅಂತ ಗೊತ್ತಿರಲ್ಲ, ಒಟ್ಟಿಗೆ ಬದುಕೋಕೆ ಆಗುತ್ತಾ ಅಂತ ಗೊತ್ತಿರಲ್ಲ, ಒಂದೇ ರೂಮಲ್ಲಿ ಇರ್ಬೇಕು, ಎಲ್ಲಾನೂ ಶೇರ್ ಮಾಡ್ಬೇಕು.
ಡಾ ರಾಜ್ ಅಂತಿಮ ದರ್ಶನಕ್ಕೆ ಬಂದ ವಿಷ್ಣುಗೆ ಬೈಯ್ದು ಕಳಿಸಿದ್ರು ಪಾರ್ವತಮ್ಮ; ಎಂಥಾ ಕರುಣಾಮಯಿ!
ಬಾತ್ ರೂಂ, ಬೆಡ್ ರೂಂ ಸೇರಿದಂತೆ ಎಲ್ಲಾನೂ ಶೇರ್ ಮಾಡ್ಕೋಬೇಕು. ಜೊತೆನಲ್ಲೇ ಕೂತ್ಕೋಬೇಕು, ಒಟ್ಟಿಗೇ ಓಡಾಡ್ಬೇಕು ಹೀಗೆಲ್ಲಾ ಇರುತ್ತೆ.. ಆದ್ರೆ, ಒಬ್ಬರ ಆಸಕ್ತಿ ಏನು, ಒಬ್ಬರ ನಡತೆ ಏನು, ನಡೆ ಏನು ಏನೂ ಗೊತ್ತಿರಲ್ಲ. ಆದ್ರೂ ನಾವು ತಾಳಿ ಕಟ್ಟಿಬಡ್ತೀವಿ. ಮದ್ವೆ ಆದ್ಮೇಲೆ ನಾವು ಅವ್ರನ್ನ ಲವ್ ಮಾಡೋದಕ್ಕೆ ಕಲಿತುಕೊಳ್ತೇವೆ. ಅವರ ವೀಕ್‌ನೆಸ್ ಮತ್ತು ಪ್ಲಸ್ ಪಾಯಿಂಟ್ ಎಲ್ಲಾನೂ ನಮ್ಗೆ ಗೊತ್ತಾಗೋದು ಆಮೇಲೇನೆ. ಅದೇ ಲೈಫ್..' ಎಂದಿದ್ದಾರೆ ಕಿಚ್ಚ ಸುದೀಪ್.
ವೈರಲ್ ಆಗ್ತಿರೋ ವಿಡಿಯೋ ತುಂಬಾ ಹಳೆಯದು. ಆಗ ಸುದೀಪ್ ಅವರಿನ್ನೂ ವಯಸ್ಸಿನಲ್ಲಿ ತುಂಬಾ ಚಿಕ್ಕವರು. ಅವರು ಅವರದೇ ಆದ ರೀತಿಯಲ್ಲಿ ಅಂದು ಜೀವನವನ್ನು ಅರ್ಥ ಮಾಡಿಕೊಂಡಿದ್ದರು. ಅದನ್ನೇ ಅವರು ಯಾರದೋ ಎದುರು ಹೇಳಿದ್ದಾರೆ. ಇಂದು ಸುದೀಪ್ ಜೀವನದ ಬಗ್ಗೆ ಬೇರೆಯದೇ ಅರ್ಥವನ್ನು ಖಂಡಿತ ಹೇಳುತ್ತಾರೆ. ಏಕೆಂದರೆ, ನಟ ಕಿಚ್ಚ ಸುದೀಪ್ ಜೀವನ ಕೂಡ ಆಗಿನಂತೆ ಈಗಿಲ್ಲ, ಈಗಿನಂತೆ ಆಗಿರಲಿಲ್ಲ.
ಕಿರಿಯರ ಜೊತೆ ಕೆಲ್ಸ ಮಾಡೋಕೆ ನಿಮ್ಗೆ ಸಂಕೋಚ ಆಗೋದಿಲ್ವೇ ಅಂದಿದ್ದಕ್ಕೆ ಅಣ್ಣಾವ್ರು ಏನಂದಿದ್ರು?
ಅಷ್ಟಕ್ಕೂ ಜೀವನ ಅಂದ್ರೆ ಏನು ಅನ್ನೋ ಪ್ರಶ್ನೆಗೆ ಸುದೀಪ್ ಆಗಲೀ ಅಥವಾ ಇನ್ಯಾರೇ ಆಗಲಿ ಒಂದೇ ಡೆಫನಿಷನ್ ಕೊಡಲು ಅಸಾಧ್ಯ. ಏಕೆಂದರೆ, ಪ್ರತಿಯೊಬ್ಬರ ಜೀವನವೂ ಬೇರೆಬೇರೆಯದೇ ರೀತಿಯಲ್ಲಿ ಇರುತ್ತದೆ. ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರ ವಯಸ್ಸು ಬೇರೆ, ಮನಸ್ಸು ಬೇರೆ.. ಇಲ್ಲಿ ಎಲ್ಲರ ಜೀವನ ಒಂದೇ ರೀತಿಯಾಗಿರಲು ಸಾಧ್ಯವಿಲ್ಲ. ಆದ್ದರಿಂದ ಸುದೀಪ್ ಆಗಲೀ ಪ್ರದೀಪ್ ಆಗಲೀ ಎಲ್ಲರ ಜೀವನದ ಬಗ್ಗೆ ಹೇಳಲು ಅಸಾಧ್ಯ.
ಯಾರೇ ಹೇಳಿದರೂ ಅದು ಅವರ ಜೀವನದ ಅನುಭವ ಅಥವಾ ಕಲ್ಪನೆ ಆಗಿರುತ್ತದೆ. ಬೇರೆಯವರ ಜೀವನದ ಬಗ್ಗೆ ಅವರು ಹೇಳಿದರೆ ಅದು ತಪ್ಪೇ ಆಗಿರುತ್ತದೆ. ಈ 'ಪರ್ಸ್ಂಟೇಜ್'ಗಳು ಕೂಡ ಪ್ರತಿಯೊಬ್ಬರ ಲೆಕ್ಕಾಚಾರದಲ್ಲೂ ಬೇರೆಯದೇ ಆಗಿರುತ್ತದೆ. ಆದರೆ, ಈ ವಿಡಿಯೋ ಸುದೀಪ್ ಅಭಿಮಾನಿಗಳಿಗೆ ಖಂಡಿತ ಖುಷಿ ಕೊಡುತ್ತದೆ. ಏಕೆಂದರೆ, ಸಾಕಷ್ಟು ವರ್ಷಗಳ ಹಿಂದೆ ನಟ ಸುದೀಪ್ ಹೀಗಿದ್ದರು ಎಂಬುದನ್ನು ನೋಡಬಹುದು. ಅಂದು ಅವರ ಅನುಭವ, ವಿಚಾರಧಾರೆ ಹೀಗಿತ್ತು ಎಂಬುದನ್ನು ಈ ವಿಡಿಯೋ ಮೂಲಕ ಅರ್ಥೈಸಿಕೊಳ್ಳಬಹುದು.
ಕ್ಯಾನ್ಸರ್ ಭಾದೆ ಬಗ್ಗೆ ಶಿವಣ್ಣ ಅಂತರಂಗದ ಮಾತು, ಎಂಥವರಿಗೂ ಕಣ್ಣೀರು ಬರದೇ ಇರದು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.