Manjummel boys Malayalam Movie Review: ಹುಡುಗಾಟಿಕೆಯಲ್ಲಿ ಅಪಾಯದ ಗಡಿ ದಾಟಿ, ಸಿಕ್ಕಾಕಿಕೊಂಡು ನರಳೋ ಚಿತ್ರ

By Suvarna NewsFirst Published Mar 30, 2024, 1:03 PM IST
Highlights

2024ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ ಮುಂಜಾಮ್ಮೆಲ್ ಬಾಯ್ಸ್ ಯಾಕೆ ನೋಡಬೇಕು? ಈ ಚಿತ್ರದ ಸ್ಪೆಷಾಲಿಟಿ ಏನು? ಇಲ್ಲಿದೆ ರಿವ್ಯೂ.

- ಸಂತೋಶ್ ಕುಮಾರ್.ಎಲ್.ಎಂ

ಈ ಸಿನಿಮಾ ಕೊಡುವ theatrical experienceಗಾದರೂ ಈ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಬೇಕು. ಈಗಾಗಲೇ ನೀವೇನಾದರೂ ಈ ಸಿನಿಮಾದ one liner ಕೇಳಿದ್ದರೆ, ಅದು ಬಿಟ್ಟು ಕಥೆಯಲ್ಲಿ ಬೇರೇನಿಲ್ಲ. ಆದರೆ ಅದು ದೃಶ್ಯ ರೂಪದಲ್ಲಿ ಹೇಗೆ ಬಂದಿದೆ ಅಂತ ಅನುಭವಿಸಲು ಥಿಯೇಟರ್‌ನಲ್ಲಿ ನೋಡಬೇಕು. ಕ್ಯಾಮೆರಾ, ಹಿನ್ನೆಲೆ ಸಂಗೀತ, ಎಲ್ಲ ಹುಡುಗರ ಅದ್ಭುತ ನಟನೆ ಒಟ್ಟಾರೆ ಸಿನಿಮಾವನ್ನು ಕುತೂಹಲದಿಂದಲೇ ನೋಡಿಸಿಕೊಳ್ಳುತ್ತದೆ. ಕಥೆಗೆ ತಕ್ಕಂತೆ "Tug Of War" ಗೇಮ್ ಅನ್ನು ಬಳಸಿಕೊಂಡಿರುವುದು ಒಳ್ಳೆಯ ನಡೆ.

ಈ ಸಿನಿಮಾ ಬಗ್ಗೆ ಅನೇಕ ಗೆಳೆಯರು ಬರೆದಿದ್ದಾದರೂ ನನಗನಿಸಿದ ಮತ್ತೊಂದು ಅಂಶವನ್ನು ಹೇಳಲೇಬೇಕು. ಬೆಂಗಳೂರಿನ ರಿಂಗ್ ರೋಡ್ ಅಂದುಕೊಳ್ಳಿ. ಜನರ ಕಣ್ಣ ಮುಂದೆಯೇ ಒಂದಿಬ್ಬರು ಹುಡುಗರು ತಮ್ಮ ಬೈಕುಗಳಲ್ಲಿ ವ್ಹೀಲಿಂಗ್ ಮಾಡುತ್ತ ವಾಹನಗಳ ಮಧ್ಯೆ ಯಗ್ಗಾಮಗ್ಗಾ ನುಗ್ಗಿಸುತ್ತ ಎಲ್ಲರಿಗೂ ಭಯವಾಗುವಂತೆ ಬೈಕು ಚಲಾಯಿಸುತ್ತಿದ್ದಾರೆ. ನೋಡಿದವರೆಲ್ಲ ಅವರತ್ತ ಕೈ ತೋರಿಸುತ್ತ 'ಎಲ್ಲಾದರೂ ಬಿದ್ದೀರಾ, ಯಾಕಿಂತ ಹಾಳು ಬುದ್ಧಿ?' ಅಂತ ಬೈದು ಕೊಳ್ಳುತ್ತಲೇ ಅವರು ಮಾಡುವ ಚೇಷ್ಟೆಗಳನ್ನು ನೋಡುತ್ತಿದ್ದಾರೆ. ಅಲ್ಲಿ ಟ್ರಾಫಿಕ್ ಪೊಲೀಸರಿಲ್ಲದ್ದು ಆ ಯುವಕರಿಗೆ ಗೊತ್ತಾಗಿ ಅವರ ಚೇಷ್ಟೆಗಳು ಇನ್ನೂ ಹೆಚ್ಚಾಗಿದೆ. ಕಿರುಚುತ್ತಾ ವ್ಹೀಲಿಂಗ್ ಮಾಡುತ್ತ ಚಲಿಸುತ್ತಿರುವಾಗಲೇ ಒಬ್ಬಾತ ಬ್ಯಾಲೆನ್ಸ್ ಕಳೆದುಕೊಂಡು ಡಿವೈಡರಿಗೆ ಗುದ್ದಿದ್ದಲ್ಲದೇ ರಸ್ತೆಯಿಂದ ಅತ್ತ ಬಿದ್ದು ಆ ಕಡೆಯಿಂದ ಬರುತ್ತಿದ್ದ ಲಾರಿಯೊಂದರ ಕೆಳಗೆ ಕಾಲು ಕೊಟ್ಟಿದ್ದಾನೆ. ಅಲ್ಲಿ ಮುಂದೆ ಕಂಡಿದ್ದೆಲ್ಲ ಭಯಾನಕ ದೃಶ್ಯ. ಒಂದು ಕಡೆ ಆ ಹುಡುಗನಿಗಾಗಿದ್ದು ಅವರಿಗೆ ಬೇಸರ ತರಿಸಿದೆಯಾದರೂ, ಅದಕ್ಕೆ ಮೂಲ ಕಾರಣ ಆತನ ರಸ್ತೆಯಲ್ಲಿನ ಚೇಷ್ಟೆಯಲ್ಲದೆ ಮತ್ತೇನಿಲ್ಲ. ಅದರಿಂದಾಗಿ ಅವರಿಗೆ ಸಿಕ್ಕಾಪಟ್ಟೆ ಕೋಪ-ಆಕ್ರೋಶವೂ ಬರುತ್ತಿದೆ. ಅಂದು ಮನೆಗೆ ಹೋದ ಮೇಲೆ ಆ ಜನರಿಗೆ ಏನನ್ನಿಸಬಹುದು, ಅದೇ ಫೀಲ್ ನನಗೆ ಈ ಸಿನಿಮಾ ನೋಡಿದ ಮೇಲಾಗಿದ್ದು.

Merry Christmas Movie Review: ಸುಂದರ ಮೊಗದ ಹಿಂದಿನ ಕ್ರೂರತೆ ಇಷ್ಟಿರುತ್ತಾ?

ನನ್ನ ಪ್ರಕಾರ ಇದು survival thriller ಸಿನಿಮಾ ಅನ್ನುವದಕ್ಕಿಂತ ಗೆಳೆತನ (Friendship) ಎಂದರೇನು ಅಂತ ತೋರಿಸುವ ಡ್ರಾಮಾ ಅನ್ನಬಹುದು. ಈಗಾಗಲೇ ನೀವು ನೋಡಿರುವ survival thriller ಸಿನಿಮಾಗಳನ್ನೆಲ್ಲ ನೆನಪಿಸಿಕೊಂಡು ಗಮನಿಸಿ ನೋಡಿ. ಅವುಗಳಲ್ಲಿ ಬಹುತೇಕ ಕಥೆಗಳಲ್ಲಿ victimಗಳು accidentally ಹೋಗಿ ಆ ಕಷ್ಟದಲ್ಲಿ ಸಿಕ್ಕಿ ಹಾಕಿಕೊಳ್ಳುವಂಥವು. ಆದರೆ ಇಲ್ಲಿ ಹಾಗಲ್ಲ. ಹುಡುಗಾಟಿಕೆಯಲ್ಲಿ ಅಪಾಯದ ಗಡಿಯನ್ನು ದಾಟಿ ತಾನೇ ಸಿಕ್ಕಿಹಾಕಿಕೊಂಡು ನರಳುವಂಥದ್ದು. ಹಾಗಾಗಿ ಒಂದು ಕಡೆ ಸಿಕ್ಕಿಕೊಂಡವರು ಬೇಗ ಪಾರಾಗಿ ಬರಲಿ ಅಂತ ಮನಸ್ಸಿಗೆ ಅನ್ನಿಸಿದರೂ ಇನ್ನೊಂದು ಕಡೆ ಆ ಪರಿಸ್ಥಿತಿಗೆ ಕಾರಣರಾದ ಎಲ್ಲರ ಬಗ್ಗೆ ಕೋಪ ಬರುತ್ತದೆ. ಹಾಗಾಗಿ ಇದೊಂದು ರೀತಿಯ ನಮ್ಮೆಲ್ಲರಿಗೂ ನೀತಿಪಾಠವಾಗಬಲ್ಲ docudrama ಸಿನಿಮಾ.

ಕಥೆಯಲ್ಲಿ ಏನೆಲ್ಲ‌ ಮಾಡಬಹುದಾಗಿತ್ತು ಅಂತ‌ ಅನ್ನಿಸಿದರೂ, ನಿರ್ದೇಶಕರು ಆದಷ್ಟು 2006ರಲ್ಲಿ ನಡೆದ ನೈಜ ಘಟನೆಯನ್ನು ಯಥಾವತ್ತಾಗಿ ತೋರಿಸುವತ್ತ ಗಮನ ಹರಿಸಿದ್ದಾರೆ. ಹಾಗಾಗಿ ಇಲ್ಲಿ ಸರಿ-ತಪ್ಪು ಯಾವುದು ಅನ್ನುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಪೋಲಿಸರು, ಸ್ಥಳೀಯರು ಸಹಾಯ ಮಾಡಲು ಹಿಂದೇಟು ಹಾಕುತ್ತಾರೆ ಅನ್ನುವುದನ್ನು ತೋರಿಸಿರುವುದು ಹಾಗೇ ಇದ್ದಿರಬಹುದಾದರೂ, ಅದು ಯಾವ ಪರಿಸ್ಥಿತಿ ಮತ್ತು ಎಷ್ಟು ನಿಜ ಅನ್ನುವುದನ್ನು ನಾವು ಗಮನಿಸಲೇಬೇಕು. ಇದಕ್ಕೆ ತದ್ವಿರುದ್ಧವಾದ ವಿಷಯ ಹೇಳಿರುವ ಮತ್ತೊಂದು ಸಿನಿಮಾ ಬಗ್ಗೆ ನಾಳೆ ಬರೆಯತ್ತೇನೆ. 

Sirf Ek Bandaa Kaafi Hai Review: ಚಲನಚಿತ್ರದಲ್ಲಲ್ಲ, ನಿಜ ಜೀವನದಲ್ಲೂ ನ್ಯಾಯ ಸಾಮಾನ್ಯರಿಗೆ ಲಭ್ಯ!

ಇಡೀ ಸಿನಿಮಾವನ್ನು ಕೈ ಹಿಡಿದು ಜೊತೆಗೆ ಕರೆದೊಯ್ಯುವ 'ಗುಣ' ಸಿನಿಮಾದ 'ಕಣ್ಮಣಿ ಅನ್ಬೋಡು ಕಾದಲನ್ ನಾನ್ ಎಳುದುಮ್ ಕಡಿದಮೇ....' ಹಾಡು ಮಾತ್ರ ಮತ್ತೊಮ್ಮೆ ಎಲ್ಲರ ಬಾಯಲ್ಲಿ ಗುನುಗುತ್ತಿದೆ. ಇಳಯರಾಜಾ ಸಂಗೀತ ಮತ್ತೊಮ್ಮೆ ನೆನಪಿಗೆ ಬಂದು ಮನಸ್ಸು ಪುಳಕಿತವಾಗುತ್ತದೆ‌. Legend ನಟರನ್ನು, ಸಂಗೀತ ನಿರ್ದೇಶಕರು ಈ ಅಕ್ಕಪಕ್ಕದ ಸಿನಿಮಾರಂಗದವರು apt ಆಗಿ, ಕ್ರಿಯೇಟಿವ್ ಆಗಿ ಸೆಲೆಬ್ರೇಟ್ ಮಾಡೋದನ್ನು ನೋಡೋಕೆ ಚಂದ. 

ಒಂದು ವಿಷಯಕ್ಕೆ ಬಹಳ ಖುಶಿಯಾಯ್ತು. ಮಲಯಾಳಮ್ ಚಿತ್ರರಂಗ ತಮಗಿರುವ ಬಜೆಟ್ಟಿನಲ್ಲೇ ಎಲ್ಲ ಬಗೆಯ ವಿಭಿನ್ನ Genreಗಳ ಸಿನಿಮಾಗಳನ್ನು ಮಾಡಿ ಯಶಸ್ವಿಯಾಗುತ್ತಿದೆ. ಇಂಥ ಸಿನಿಮಾಗಳನ್ನು ನೋಡಿ ನಮ್ಮಲ್ಲೇ ಇರುವ ಕಥೆಗಳನ್ನು ಆಯ್ದುಕೊಂಡು ಸರಿಯಾದ Genreನ ಸಿನಿಮಾ ಮಾಡಿದರೆ ಯಶಸ್ಸಿನತ್ತ ನಾವೂ ನಡೆಯಬಹುದು.

click me!