ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವವರು ಅವರವರನ್ನು ಇಲ್ಲಿ ಕಂಡುಕೊಳ್ಳಬಹುದು ಅನ್ನುವುದು ಈ ಸಿನಿಮಾದ ಹೆಗ್ಗಳಿಕೆ. ಈ ಸಿನಿಮಾ ರೂಪಿಸಿರುವುದು ಹೊಸ ಉತ್ಸಾಹಿ ತಂಡ. ಹಾಗಾಗಿ ಈ ಸಿನಿಮಾದ ನಿರೂಪಣೆ, ಸಂಗೀತ, ಛಾಯಾಗ್ರಹಣದಲ್ಲಿ ಹೊಸತನ ಕಾಣಿಸುತ್ತದೆ.
ಆರ್.ಎಸ್.
ತುಸು ಸಂಕೋಚ, ಕೊಂಚ ಹಿಂಜರಿಕೆ ಹೊಂದಿರುವ ಮಧ್ಯಮ ವರ್ಗದ ಕುಟುಂಬದ ಸಾಫ್ಟ್‌ವೇರ್ ಇಂಜಿನಿಯರ್ ಹುಡುಗನೊಬ್ಬನ ಆತ್ಮಚರಿತ್ರೆಯಂತಹ ಕತೆ ಇದು. ಮಧ್ಯಮ ಗಾತ್ರದ ಸಾಫ್ಟ್‌ವೇರ್ ಕಂಪನಿಯ ಕಷ್ಟ ಸುಖ, ಮ್ಯಾನೇಜರ್‌ನ ಪಿತೂರಿ, ಸಹೋದ್ಯೋಗಿಯ ಲಾಭಕೋರತನ, ಅಮೆರಿಕಾ ಹೋಗುವ ಕನಸು, ಹೈಕ್‌ನಲ್ಲಿನ ತಾರತಮ್ಯ, ಆಫೀಸ್ ರಾಜಕೀಯ ಎಲ್ಲವನ್ನೂ ತೆರೆದಿಡುವ ಸಾಫ್ಟ್‌ವೇರ್ ಕಂಪನಿಯೊಂದರ ಚಿತ್ರಣವೂ ಹೌದು. ಇಲ್ಲೊಬ್ಬ ತರುಣ ಇದ್ದಾನೆ. ಬಾಲ್ಯದಲ್ಲಿ ಅಪ್ಪ, ಅಮ್ಮನಿಂದ ಬೈಸಿಕೊಳ್ಳುತ್ತಿದ್ದ ಹುಡುಗ. ಅವನು ಕೆಲಸಕ್ಕೆ ಸೇರಿದ ಮೇಲಿನ ಕತೆಯನ್ನು ನಿರ್ದೇಶಕರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
undefined
ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವವರು ಅವರವರನ್ನು ಇಲ್ಲಿ ಕಂಡುಕೊಳ್ಳಬಹುದು ಅನ್ನುವುದು ಈ ಸಿನಿಮಾದ ಹೆಗ್ಗಳಿಕೆ. ಈ ಸಿನಿಮಾ ರೂಪಿಸಿರುವುದು ಹೊಸ ಉತ್ಸಾಹಿ ತಂಡ. ಹಾಗಾಗಿ ಈ ಸಿನಿಮಾದ ನಿರೂಪಣೆ, ಸಂಗೀತ, ಛಾಯಾಗ್ರಹಣದಲ್ಲಿ ಹೊಸತನ ಕಾಣಿಸುತ್ತದೆ. ಎಲ್ಲೂ ಅಬ್ಬರ ಇಲ್ಲ. ಎತ್ತರ ತಗ್ಗುಗಳಿಲ್ಲ. ಪಾತ್ರಗಳು, ಪಾತ್ರಗಳ ವರ್ತನೆಗಳು, ಎದುರಾಗುವ ಪರಿಸ್ಥಿತಿಗಳು ಎಲ್ಲವನ್ನೂ ಬಹಳ ತಣ್ಣಗಿನ ಶೈಲಿಯಲ್ಲಿ, ತಾಳ್ಮೆಯಿಂದ ನಿರ್ದೇಶಕರು ಹೇಳಿದ್ದಾರೆ.
ಚಿತ್ರ: ಸ್ವಿಚ್ { ಕೇಸ್ ಎನ್
ನಿರ್ದೇಶನ: ಚೇತನ್ ಶೆಟ್ಟಿ
ತಾರಾಗಣ: ವಿಜಯ್ ಸೂರ್ಯ, ಶ್ವೇತಾ, ಪೃಥ್ವಿ ರಾಜ್, ಕಾರ್ತಿಕ್ ವೈಭವ್, ಸಂತೋಷ್ ಕರ್ಕಿ, ವಿಜಯ್ ಸಿದ್ದರಾಜ್
ರೇಟಿಂಗ್: 3
ಯುವ ಸಾಫ್ಟ್‌ವೇರ್ ಇಂಜಿನಿಯರ್ ಪಾತ್ರದಲ್ಲಿ ವಿಜಯ್ ಸೂರ್ಯ ಸೊಗಸಾಗಿ ನಟಿಸಿದ್ದಾರೆ. ಯುವ ಕಲಾವಿದರ ತಂಡ ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಿದೆ. ಕತೆಯು ಸಂಕೀರ್ಣವಾಗಿ ಕಾಣದೇ ಇರುವುದೇ ಇಲ್ಲಿನ ವಿಶೇಷತೆ. ಸಾಫ್ಟ್‌ವೇರ್ ಕ್ಷೇತ್ರ ಮತ್ತು ಮಧ್ಯಮ ವರ್ಗದ ಹುಡುಗನ ಕನಸುಗಳಿಗೆ ಟಾರ್ಚ್ ಬೆಳಕನ್ನು ಬೀರಿರುವ ಈ ಚಿತ್ರ ವಿಶಿಷ್ಟ ಪ್ರಯೋಗವಾಗಿ ಗಮನ ಸೆಳೆಯುತ್ತದೆ.