General Knowledge: ವಕೀಲರು ಕಪ್ಪು ಕೋಟ್ ಧರಿಸೋದು ಏಕೆ?

Published : Dec 05, 2022, 02:46 PM IST
General Knowledge: ವಕೀಲರು ಕಪ್ಪು ಕೋಟ್ ಧರಿಸೋದು ಏಕೆ?

ಸಾರಾಂಶ

ನಮ್ಮಲ್ಲಿ ಒಂದೊಂದು ವೃತ್ತಿಗೆ ಒಂದೊಂದು ಬಣ್ಣ ಮೀಸಲಿದೆ. ಹಾಗೆ ವಕೀಲರಾದವರು ಕಪ್ಪು ಕೋಟ್ ಧರಿಸಬೇಕು. ಕಪ್ಪು ಕೋಟ್ ಹಿಂದೆ ದೊಡ್ಡ ಇತಿಹಾಸವಿದೆ. ನಾವಿಂದು ಅದ್ರ ಬಗ್ಗೆ ನಿಮಗೆ ಹೇಳ್ತೆವೆ.    

ವಕೀಲ ಎಂಬ ಹೆಸರು ಕೇಳಿದಾಗ ನಮ್ಮ ಮನಃಪಟಲದಲ್ಲಿ ಕಪ್ಪು ಕೋಟು ಧರಿಸಿರುವ ವ್ಯಕ್ತಿ ಬಂದು ಹೋಗ್ತಾರೆ. ಕೊರ್ಟ್ ಒಳಗೆ ಅಥವಾ ಕೋರ್ಟ್ ಸುತ್ತ ಮುತ್ತ ನೀವು ಕಪ್ಪು ಕೋಟು ಧರಿಸಿರುವ ವಕೀಲರನ್ನು ನೋಡಬಹುದು. ಸಿನಿಮಾಗಳಲ್ಲಿ ಕೂಡ ಕೋರ್ಟ್ ದೃಶ್ಯ ಬಂದಾಗ, ಕೋರ್ಟ್ ನಲ್ಲಿ ವಾದ ಮಾಡುವಾಗ ವಕೀಲರು ಕಪ್ಪು ಕೋಟ್ ಧರಿಸಿರ್ತಾರೆ. ಅನೇಕರಿಗೆ ವಕೀಲರು ಕಪ್ಪು ಕೋಟ್ ಧರಿಸಿರುತ್ತಾರೆ ಎಂಬುದು ಗೊತ್ತು. ಆದ್ರೆ ಯಾಕೆ ಎಂಬುದು ತಿಳಿದಿಲ್ಲ. ನಾವಿಂದು ಬೇರೆ ಬಟ್ಟೆ ಬಿಟ್ಟು ವಕೀಲರು ಯಾಕೆ ಕಪ್ಪು ಕೋರ್ಟ್ ಹಾಕಿಕೊಂಡೇ ವಾದ ಮಾಡ್ತಾರೆ ಎಂಬುದನ್ನು ನಿಮಗೆ ಹೇಳ್ತೆವೆ. 

ವಕೀಲ (Lawyer) ರ ಕಪ್ಪು (Black) ಕೋಟ್ ಇತಿಹಾಸ (History) : ವಕೀಲರ ಕಪ್ಪು ಕೋಟ್ ಇತಿಹಾಸವು ತುಂಬಾ ಹಳೆಯದು.  1327 ರಲ್ಲಿ ಮೊದಲ ಬಾರಿ ಎಡ್ವರ್ಡ್ III ಎಂಬುವವರು ವಕಾಲತ್ತು ಶುರು ಮಾಡಿದ್ರು ಎಂದು ನಂಬಲಾಗಿದೆ.  ಈ ಸಮಯದಲ್ಲಿ ನ್ಯಾಯಾಧೀಶರಿಗೆ ವಿಶೇಷ ವೇಷಭೂಷಣ ಸಿದ್ಧಪಡಿಸಲಾಯಿತು.  ಆರಂಭದಲ್ಲಿ ವಕೀಲರ ವೇಷಭೂಷಣವು ಕಪ್ಪು ಬಣ್ಣದ್ದಾಗಿರಲಿಲ್ಲ. 1637 ರಲ್ಲಿ ನ್ಯಾಯಾಧೀಶರು ಮತ್ತು ವಕೀಲರು ಸಾರ್ವಜನಿಕರ ಮುಂದೆ ಎದ್ದು ಕಾಣಬೇಕು ಎನ್ನುವ ಕಾರಣಕ್ಕೆ ಅವರ ಬಟ್ಟೆಯಲ್ಲಿ ಬದಲಾವಣೆ ತರಲಾಯ್ತು. ಅವರ ಬಟ್ಟೆಯನ್ನು ಕಪ್ಪು ಬಣ್ಣಕ್ಕೆ ಬದಲಿಸಲಾಯ್ತು. 1600 ರ ನಂತರ ವಕೀಲರು ಕಪ್ಪು ಬಟ್ಟೆ ಧರಿಸಲು ಶುರು ಮಾಡಿದ್ರು.

ಇದಲ್ಲದೆ  1694 ರಲ್ಲಿ ಕ್ವೀನ್ ಮೇರಿ ಅನಾರೋಗ್ಯದಿಂದ ನಿಧನರಾದಾಗ, ಆಕೆಯ ಪತಿ ಕಿಂಗ್ ವಿಲಿಯಮ್ಸ್,  ಸಾರ್ವಜನಿಕ ಶೋಕಾಚರಣೆ ವೇಳೆ  ಎಲ್ಲಾ ನ್ಯಾಯಾಧೀಶರು ಮತ್ತು ವಕೀಲರಿಗೆ ಕಪ್ಪು ಗೌನ್ ಧರಿಸುವಂತೆ ಆದೇಶಿಸಿದ್ದರು.  ಇಂಗ್ಲೆಂಡಿನ ರಾಜ ಚಾರ್ಲ್ಸ್ ನಿಧನರಾದಾಗ  ಎಲ್ಲಾ ವಕೀಲರು ಕಪ್ಪು ಕೋಟ್ ಧರಿಸಿ ಅವರ ಸಂತಾಪ ಸೂಚಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ ಕಪ್ಪು ಕೋಟು ಧರಿಸುವ ಪರಿಪಾಠ ನಡೆದುಕೊಂಡು ಬಂದಿದೆ. ಅಲ್ಲಿಂದ ಇಲ್ಲಿಯವರೆಗೂ ವಿದೇಶದಲ್ಲಿ ವಕೀಲರು ಕಪ್ಪು ಕೋಟ್ ಧರಿಸಿಯೇ ವಾದ ಮಾಡುತ್ತಾರೆ. 

ಭಾರತದಲ್ಲಿ ಯಾವಾಗ ಜಾರಿ ? : 1961 ರಲ್ಲಿ  ಭಾರತದಲ್ಲಿ ವಕೀಲರಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಮಾಡಲಾಯಿತು. ಅದರ ಅಡಿಯಲ್ಲಿ ವಕೀಲರು ಕಪ್ಪು ಕೋಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಯಿತು. ನಂತರ ಭಾರತದ ಎಲ್ಲಾ ವಕೀಲರು ಕಪ್ಪು ಕೋಟ್ ಧರಿಸಿ ಕೋರ್ಟ್ ಗೆ ಹಾಜರಾದ್ರು.  

Bhagavad Gita ಹೇಳುವುದ ಕೇಳಿ, ಕೆಟ್ಟ ಅಭ್ಯಾಸ ಬಿಟ್ಟು ಯಶಸ್ಸು ನಿಮ್ಮದಾಗಿಸಿಕೊಳ್ಳಿ!

ಕಪ್ಪು ಕೋಟ್ ಶಿಸ್ತು ಮತ್ತು ಆತ್ಮ ವಿಶ್ವಾಸದ ಸಂಕೇತವೆಂದು ಪರಿಗಣಿಸಲಾಗಿದೆ. ವಕೀಲರಿಗೆ ಈ ಡ್ರೆಸ್ ವಿಭಿನ್ನ ಐಡೆಂಟಿಟಿ ನೀಡುತ್ತದೆ.  ಕಪ್ಪು ಬಣ್ಣ ವಿಧೇಯತೆ ಮತ್ತು ಅಧೀನತೆಗೆ ಸಂಬಂಧಿಸಿದೆ. ಕಪ್ಪು ಬಣ್ಣವನ್ನು ಶಕ್ತಿ ಮತ್ತು ಅಧಿಕಾರದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂಗ್ಲೆಂಡ್‌ನಲ್ಲಿ ಕಪ್ಪು ಬಣ್ಣವನ್ನು ವೃತ್ತಿಯ  ಜನಪ್ರಿಯ ಜೊತೆ ಹೋಲಿಕೆ ಮಾಡಲಾಗುತ್ತದೆ. ಅದಕ್ಕಾಗಿಯೇ ಅನೇಕ ವಿಶೇಷ ಸಭೆಗಳಲ್ಲಿ ದೊಡ್ಡ ಅಧಿಕಾರಿಗಳು ಕಪ್ಪು ಬಟ್ಟೆ ಧರಿಸುತ್ತಾರೆ.

ಇಷ್ಟೇ ಅಲ್ಲ, ಕಪ್ಪು ಕೋಟು ದೇಹದ ಬೆವರನ್ನು ಹೀರಿಕೊಳ್ಳುವ ಶಕ್ತಿ ಹೊಂದಿದೆ. ಕೋರ್ಟ್ ನಲ್ಲಿ ವಾದ ಮಾಡುವಾಗ ವಕೀಲರು ಬೆವರುತ್ತಾರೆ. ಕಪ್ಪು ಬಣ್ಣ ಶಾಖವನ್ನು ಹೀರಿಕೊಳ್ಳುವ ಮೂಲಕ ಅವರ ದೇಹದ ಉಷ್ಣತೆಯನ್ನು ಕಾಪಾಡುತ್ತದೆ. 

ವೈನ್ ಬಾಟಲಿ 750 ಎಂಎಲ್ ಇರೋದ್ಯಾಕೆ?

ಇನ್ನೊಂದು ಕಾರಣವೆಂದ್ರೆ ಕಪ್ಪು ಕುರುಡುತನದ ಸಂಕೇತ.  ಕಾನೂನನ್ನು ಕುರುಡು ಎಂದು ಪರಿಗಣಿಸಲಾಗುತ್ತದೆ. ಕುರುಡರು ಎಂದಿಗೂ ಪಕ್ಷಪಾತಿಯಾಗಲಾರರು. ಅದಕ್ಕಾಗಿಯೇ ವಕೀಲರು ಕಪ್ಪು ಕೋಟುಗಳನ್ನು ಧರಿಸುತ್ತಾರೆ. ಕುರುಡರಂತೆ ಯಾವುದೇ ಪಕ್ಷಪಾತವಿಲ್ಲದೆ ಸತ್ಯಕ್ಕಾಗಿ ಹೋರಾಡಬಹುದು ಎಂಬುದು ಇದರ ಉದ್ದೇಶವಾಗಿದೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಟ್ಟ, ನೀಳ ಕೂದಲು ನಿಮ್ಮದಾಗಲು ಖರ್ಜೂರದ ಜೊತೆ ತುಪ್ಪ ಬೆರೆಸಿ….. ನೋಡಿ
ಹಸೆಮಣೆ ಏರುವ ಮುನ್ನ ಎಕ್ಸ್​ ಬಾಯ್​ಫ್ರೆಂಡ್​ ಜೊತೆ ಕೊನೆಯ ಹಗ್ ಮಾಡಿದ ವಧು! ಹೀಗೂ ಉಂಟು- ವಿಡಿಯೋ ವೈರಲ್​