ಪ್ರವಾಸಿಗರ ಸ್ವರ್ಗ ಗೋವಾಕ್ಕೆ ಹೋದರೆ ಬೀಚ್ ನಿಂದ ಮೇಲೇಳಲು ಮನಸ್ಸೇ ಬರಲ್ಲ. ಆದರೂ ಅವವೇ ಬೀಚ್ ಗಳನ್ನು ನೋಡಿ ಬೋರ್ ಬಂತು ಅಂತಿರೋರು ಈ ಹೊಸ ಜಾಗಗಳನ್ನು ಎಕ್ಸ್‌ಪ್ಲೋರ್ ಮಾಡಬಹುದು.
ಬೀಚ್‌ಗಳು ಅದೆಷ್ಟೋ ಚೆಂದ ಇದ್ರೂ, ಒಮ್ಮೆ ಹೋದ ಕಡೆಗೇ ಹತ್ತಾರು ಬಾರಿ ಹೋಗೋದು ಬೋರು. ಅದರಲ್ಲೂ ಹೊಸ ಹೊಸ ಜಾಗಗಳನ್ನು ನೋಡ್ಬೇಕು ಅಂತಿರೋರು ಸಾಮಾನ್ಯವಾಗಿ ಹೋದ ಜಾಗಕ್ಕೇ ಮತ್ತೊಮ್ಮೆ ಹೋಗಲ್ಲ. ಆ ಟೈಮ್ ನಲ್ಲಿ ಹೊಸ ಜಾಗಗಳನ್ನು ಹುಡುಕುತ್ತಾರೆ. ಪ್ರವಾಸಿಗರ ಸ್ವರ್ಗ ಗೋವಾಕ್ಕೆ ಹೋದರೆ ಬೀಚ್ ನಿಂದ ಮೇಲೇಳಲು ಮನಸ್ಸೇ ಬರಲ್ಲ. ಆದರೂ ಅವವೇ ಬೀಚ್ ಗಳನ್ನು ನೋಡಿ ಬೋರ್ ಬಂತು ಅಂತಿರೋರು ಈ ಹೊಸ ಜಾಗಗಳನ್ನು ಎಕ್ಸ್‌ಪ್ಲೋರ್ ಮಾಡಬಹುದು.
ಭಗವಾನ್ ಮಹಾವೀರ ವೈಲ್ಡ್ ಲೈಫ್ ಸ್ಯಾಂಕ್ಚುರಿ
ಇದನ್ನು ಮೊದಲು ಮೊಲೆಮ್ ಗೇಮ್ ಸ್ಯಾಂಕ್ಚುರಿ ಅನ್ನೋ ಹೆಸರಿನಿಂದ ಕರೆಯುತ್ತಿದ್ದರು. ೧೯೬೯ರಲ್ಲಿ ಇದನ್ನು ಅಧಿಕೃತವಾಗಿ 'ವನ್ಯಜೀವಿ ರಕ್ಷಿತಾರಣ್ಯ' ಮಾಡಲಾಯಿತು. ಗೋವಾದ ಸಾಮಾನ್ಯ ಕಿನಾರೆಗಳಿಗಿಂತ ಡಿಫೆರೆಂಟಾದ ನೋಟಗಳು ನಿಮಗಿಲ್ಲಿ ಸಿಗುತ್ತವೆ. ಸಮುದ್ರಜೀವಿಗಳ ವೈವಿಧ್ಯ ನೋಡಿದಂತೆ ಇಲ್ಲಿನ ಪ್ರಾಣಿವೈವಿಧ್ಯಗಳನ್ನು ಈ ರಕ್ಷಿತಾರಣ್ಯದಲ್ಲಿ ನೋಡಿ ಖುಷಿ ಪಡಬಹುದು. ಟ್ರೆಕ್ಕಿಂಗ್ ಮಾಡ್ಬೇಕು ಅಂದುಕೊಂಡಿರುವವರಿಗೆ ಇಲ್ಲಿ ಚಾರಣ ಮಾಡೋದಕ್ಕೆ, ಬಂಡೆಗಳನ್ನು ಏರೋದಕ್ಕೆ, ಸಾಹಸ ಕ್ರೀಡೆಗಳಿಗೆ ಅವಕಾಶ ಇದೆ.
ಪ್ರವಾಸಿಗರ ಸ್ವರ್ಗ ಪಿಒಕೆ; ಹೋಗಿ ಬರಲು ತಡವೇಕೆ!? ಹೇಳಿ ಓಕೆ..ಓಕೆ!
ಕುಂಬರ್ಜುವಾ ಕಾಲುವೆ ಪ್ರದೇಶದ ಮಕರಗಳು
ಬೀಚ್ ಸೈಡ್ ನಲ್ಲಿ ಏನನ್ನೋ ಹೀರುತ್ತಾ ಸೋಮಾರಿಯಾಗಿ ಬಿದ್ದಿರೋ ಬದಲು ಇಲ್ಲಿನ ಚೆಂದದ ಕಾಲುವೆ ಪ್ರದೇಶಕ್ಕೆ ಭೇಟಿ ನೀಡಬಹುದು. ಹಿನ್ನೀರಿನ ದ್ವೀಪದಂಥಾ ಪ್ರದೇಶ ಇದು. ಅದ್ಭುತ ಪ್ರಕೃತಿ ಸೌಂದರ್ಯದ ತಾಣ. ಗೋವಾದ ಪೂರ್ವಭಾಗದಲ್ಲಿರುವ ಪಂಜಿಮ್ ನಿಂದ ಇಪ್ಪತ್ತು ಕಿಮೀ ದೂರದಲ್ಲಿದೆ. ತೀರದಲ್ಲಿ ಚಳಿ ಕಾಯಿಸುತ್ತಾ ಆಕಾಶಕ್ಕೆ ಬಾಯ್ತೆರೆದು ಬಿದ್ದಿರುವ ಮೊಸಳೆಗಳನ್ನು ನೀವಿಲ್ಲಿ ನೋಡಬಹುದು. ಮಗ್ಗರ್ ಜಾತಿಯ ಮೊಸಳೆಗಳ ತವರು ಅಂತ ಈ ಪ್ರದೇಶವನ್ನು ಕರೆಯುತ್ತಾರೆ.
ಸವೋಯ್ ಸ್ಪೈಸ್ ಗಾರ್ಡನ್
ಗೋವಾದ ಉತ್ತರ ಭಾಗದ ಸವೋಯ್ ಸ್ಪೈಸ್ ಗಾರ್ಡನ್ ಗೆ ಹೋದರೆ ಇಡೀ ವಾತಾವರಣದ ಸುವಾಸನೆಯಿಂದ ಕೂಡಿರೋದು ನಿಮ್ಮ ಗಮನಕ್ಕೆ ಬರುತ್ತೆ, ಬಹಳ ಅಪರೂಪದ ಔಷಧೀಯ ಸಸ್ಯಗಳು ಇಲ್ಲಿ ಕಾಣಸಿಗುತ್ತವೆ. ಸಸ್ಯ ಪ್ರಿಯರಿಗೆ ಈ ಜಾಗ ಇಷ್ಟ ಆಗೋದ್ರಲ್ಲಿ ಅನುಮಾನವೇ ಬೇಡ. ಏಕೆಂದರೆ ನಾವು ಈವರೆಗೆ ಕಂಡರಿಯದ ಬಣ್ಣ, ವಿಶೇಷತೆಗಳ, ಔಷಧೀಯ ಮಹತ್ವ ಹೊಂದಿರುವ ಗಿಡಗಳ ಖಜಾನೆಯೇ ಇಲ್ಲಿದೆ.
ನೀವು ಊಹಿಸದಷ್ಟು ಕಡಿಮೆ ಹಣದಲ್ಲಿ ಫಾರಿನ್ ನೋಡಬಹುದು!
ನೇತ್ರಾವಳಿ ಬಬ್ಲಿಂಗ್ ಲೇಕ್
ನಿಸರ್ಗದಲ್ಲಿ ಒಂದು ಗುಣವಿದೆ. ಅದು ಭಿನ್ನತೆ. ಒಂದು ಊರಿನಲ್ಲಿ ಒಂದು ಬಣ್ಣದಲ್ಲಿ ಕಾಣಿಸಿಕೊಳ್ಳುವ ಹೂವಿನ ಗಿಡವನ್ನು ಮತ್ತೊಂದೆಡೆಗೆ ಸ್ಥಳಾಂತರಿಸಿ ನೆಟ್ಟರೆ ಅದರಲ್ಲಿ ಬಿಡುವ ಹೂವಿನ ಬಣ್ಣದಲ್ಲಿ, ಆಕಾರದಲ್ಲಿ ವ್ಯತ್ಯಾಸ ಇರುತ್ತೆ. ಭೂ ಪ್ರದೇಶದಲ್ಲೂ ಏನೇನೋ ಭಿನ್ನತೆಗಳು. ಗೋವಾದ ನೇತ್ರಾವಳಿ ಬಬ್ಲಿಂಗ್ ಲೇಕ್‌ಗೆ ಬಂದರಂತೂ ಅಚ್ಚರಿ ಮೇಲೆ ಅಚ್ಚರಿ. ಈ ಕೊಳದಲ್ಲಿ ಸದಾ ಗುಳ್ಳೆಗಳನ್ನು ಕಾಣಬಹುದು. ಶುಭ್ರವಾದ ಈ ಕೊಳದ ತಡಿಯಲ್ಲಿ ನಿಂತು ಬುಳ ಬುಳನೆ ಚಿಮ್ಮುವ ಗುಳ್ಳೆಗಳನ್ನು ನೋಡೋದೆ ಖುಷಿ. ಈ ಭಾಗದ ಭೂಮಿಯಡಿ ಸಹಜ ಗ್ಯಾಸ್ ನ ಅಂಶವಿರೋದರಿಂದ ಹೀಗಾಗುತ್ತೆ.
ಕೊರ್ಲಾ ಘಾಟ್
ಗೋವಾ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಪ್ರದೇಶದಲ್ಲೇ ಈ ನಯನ ಮನೋಹರ ತಾಣ ಇರೋದು. ಅದ್ಬುತವಾದ ವ್ಯಾಲಿಗಳು, ದಟ್ಟ ಕಾಡುಗಳ ನಡುವಿನ ಈ ಪ್ರದೇಶ ಸ್ವರ್ಗೀಯ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಅಡ್ವೆಂಚರ್ ಇಷ್ಟ ಪಡೋರು ಹೋಗಲೇ ಬೇಕಾದ ತಾಣವಿದು. ಪ್ರಕೃತಿಯ ಆಸ್ವಾದನೆಯ ಜೊತೆಗೆ ನೀವಿಲ್ಲಿ ಟ್ರೆಕ್ಕಿಂಗ್ ಮಾಡಬಹುದು, ನಾನಾ ನಮೂನೆಯ ಹಕ್ಕಿಗಳನ್ನು ನೋಡಬಹುದು. ನಿಸರ್ಗದ ಅನೇಕ ಸೂಕ್ಷ್ಮ ದನಿಗಳನ್ನು ಕೇಳಬಹುದು.
ಇದರ ಜೊತೆಗೆ ಉತ್ತರ ಗೋವಾದಲ್ಲಿರುವ ಇನ್ನೊಂದು ತಾಣ ಹರ್ವಲೇಮ್ ಜಲಪಾತ, ದಟ್ಟ ಕಾಡಿನ ನಡುವಿನ ಸುಂದರ ಜಲರಾಶಿ ಇದು. ಡಾ. ಸಲೀಂ ಅಲಿ ಬರ್ಡ್ ಸ್ಯಾಂಕ್ಚುರಿಯೂ ಉತ್ತರ ಗೋವಾದಲ್ಲಿದೆ. ಇನ್ನೊಂದು ಆಕರ್ಷಣೆ ಇದೆ. ಹಾಲು ಬಿಳುಪಿನ ಮರಳಿರುವ ಚೆಂದದ ಸಮುದ್ರ ಇಲ್ಲಿದೆ. ಇದು ಕ್ಯೂರಿಮ್ ಬೀಚ್. ಈ ಬೀಚ್ ಅನ್ನು ನೋಡಿದಾಗ 'ವ್ಹಾವ್..' ಎಂಬೊಂದು ಉದ್ಗಾರ ನಿಮ್ಮ ಬಾಯಿಯಿಂದ ಹೊರ ಬೀಳದಿದ್ರೆ ಕೇಳಿ!