ದಿನಪೂರ್ತಿ ಹೊಟ್ಟೆ ತುಂಬಾ ತಿನ್ತಾ, ಕಣ್ತುಂಬಾ ನಿದ್ದೆ ಮಾಡ್ತಾ ಇರ್ಬೇಕು ಅನ್ನೋದು ಹಲವರ ಆಸೆ. ಕೆಲ್ಸ ಮಾಡೋದು ಅಂದ್ರೆ ಸಾಕು ಮೂಗು ಮುರೀತಾರೆ. ಆದ್ರೆ ಸುಮ್ನೆ ನಿದ್ದೆ ಮಾಡಿದ್ರೆ ಸಾಕು, ಈ ಸಂಸ್ಥೆಯಲ್ಲಿ ಲಕ್ಷಗಟ್ಟಲೆ ಸ್ಯಾಲರಿ ಕೊಟ್ತಾರೆ. ಅರೆ, ಇದೇನು ವಿಚಿತ್ರ ಅನ್ಬೇಡಿ. ಹೆಚ್ಚಿನ ಮಾಹಿತಿ ಇಲ್ಲಿದೆ.
ಜಗತ್ತಿನಲ್ಲಿ ಅದೆಷ್ಟು ಚಿತ್ರವಿಚಿತ್ರವಾದ ಆಸಕ್ತಿಕರ ಉದ್ಯೋಗ (Job)ಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ಅಚ್ಚರಿಯಾಗೋದು ಖಂಡಿತ. ಇಡೀ ದಿನಾ ಟಿವಿ ನೋಡುವುದು, ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕೆಲಸ (Work) ಮಾಡಿಕೊಳ್ಳುವುದು, ಸುಮ್ಮನೆ ಸೂಟ್ ಹಾಕಿಕೊಂಡು ಓಡಾಡುವುದಕ್ಕೆ ಕೂಡಾ ಸಂಬಳ ಕೊಡೋ ವಿಚಾರಗಳ ಬಗ್ಗೆ ನೀವು ಈ ಹಿಂದೆ ಕೇಳಿದ್ದೀರಿ. ಆದರೆ, ಇದು ಒಂಥರಾ ವಿಚಿತ್ರ. ದಿನವಿಡೀ ಮಲಗಿದ್ರೆ ಸಾಕು ವರ್ಷಕ್ಕೆ ಲಕ್ಷಾನುಗಟ್ಟಲೆ ದುಡ್ಡು ಮಾಡ್ಬೋದು.
ನಿದ್ದೆ ಮಾಡೋ ಟ್ಯಾಲೆಂಟ್ ಇದ್ರೆ ಲಕ್ಷಗಟ್ಟಲೆ ಸಂಬಳ
ಮ್ಯಾಟ್ರೆಸ್ ಕಂಪನಿ ಕ್ಯಾಸ್ಪರ್ ವೃತ್ತಿಪರ ನ್ಯಾಪರ್‌ಗಳನ್ನು ನೇಮಿಸಿಕೊಳ್ಳುತ್ತಿದ್ದು, ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಯುಎಸ್ ಮ್ಯಾಟ್ರೆಸ್ ಸಂಸ್ಥೆಯು ಅಸಾಧಾರಣ ಸ್ಲೀಪಿಂಗ್ ಸಾಮರ್ಥ್ಯದೊಂದಿಗೆ ವೃತ್ತಿಪರ ನ್ಯಾಪರ್‌ಗಳನ್ನು ಹುಡುಕುತ್ತಿದೆ ನ್ಯೂಯಾರ್ಕ್ ಮೂಲದ ಕಂಪನಿ ಕ್ಯಾಸ್ಪರ್ ಜನರನ್ನು ನೇಮಿಸಿಕೊಳ್ಳುತ್ತಿದೆ. ವೃತ್ತಿಪರ ಸ್ಲೀಪರ್ಸ್ ಆಗಿ ತಮ್ಮ ಅನುಭವದ ಬಗ್ಗೆ ಸಾಮಾಜಿಕ ಮಾಧ್ಯಮ ವಿಷಯವನ್ನು ರಚಿಸಬೇಕಾಗುತ್ತದೆ. ಕಂಪನಿಯ ಉದ್ಯೋಗ ಪೋಸ್ಟಿಂಗ್ ಪ್ರಕಾರ, ಆದರ್ಶ ಅಭ್ಯರ್ಥಿಯು ಅಸಾಧಾರಣ ಮಲಗುವ ಸಾಮರ್ಥ್ಯ, ಸಾಧ್ಯವಾದಷ್ಟು ನಿದ್ರೆ (Sleep) ಮಾಡುವ ಬಯಕೆ ಮತ್ತು ಯಾವುದನ್ನಾದರೂ ಮಲಗುವ ಸಾಮರ್ಥ್ಯ ಹೊಂದಿರಬೇಕು. ಅಭ್ಯರ್ಥಿಯು ನಿದ್ದೆಯ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವ ಮತ್ತು ಮಾತನಾಡುವ ಉತ್ಸಾಹ ಹೊಂದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
undefined
ದಿನಿವಿಡೀ ಸುಮ್ನೆ ಕ್ಯಾಂಡಿ ತಿನ್ತಿದ್ರೆ ಸಾಕು, ವರ್ಷಕ್ಕೆ 61 ಲಕ್ಷ ರೂ. ಸ್ಯಾಲರಿ !
ಇದಲ್ಲದೆ, ನಿದ್ರೆಗೆ ಪಾವತಿಸುವುದರ ಜೊತೆಗೆ, ಯಶಸ್ವಿ ಅಭ್ಯರ್ಥಿಗಳು ಕೆಲಸ ಮಾಡಲು ಪೈಜಾಮಾಗಳನ್ನು ಧರಿಸಲು ಸಹ ಅನುಮತಿಸಲಾಗುವುದು, ಉಚಿತ ಕಂಪನಿ ಉತ್ಪನ್ನಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ ಮತ್ತು ಅರೆಕಾಲಿಕ ವೇಳಾಪಟ್ಟಿಯ ನಮ್ಯತೆಯನ್ನು ಹೊಂದಿರುತ್ತಾರೆ ಎಂದು ಕಂಪೆನಿ ತಿಳಿಸಿದೆ. ತಮ್ಮ ಅಪ್ಲಿಕೇಶನ್‌ನ ಭಾಗವಾಗಿ ಟಿಕ್‌ಟಾಕ್‌ನಲ್ಲಿ ತಮ್ಮ ನಿದ್ರೆಯ ಕೌಶಲ್ಯವನ್ನು ಪ್ರದರ್ಶಿಸಲು ಮಹತ್ವಾಕಾಂಕ್ಷಿ ಸ್ಲೀಪರ್‌ಗಳನ್ನು ಪ್ರೋತ್ಸಾಹಿಸಲಾಗುತ್ತದೆ, ಕಂಪನಿಯು ಉದ್ಯೋಗ (Job) ಅರ್ಜಿಯನ್ನು ಆಗಸ್ಟ್ 11ರ ವರೆಗೆ ತೆರೆದಿರುತ್ತದೆ ಎಂದು ಹೇಳಿದೆ.
ಅಲಾರಂ ಹೊಡೆದಾಗಲ್ಲೆಲ್ಲಾ ಏಳ್ಬೇಕು, ತಿಂಗಳಿಗೆ ಭರ್ತಿ 26 ಲಕ್ಷ ಸಂಬಳ !
ಜಸ್ಟ್ ಮಲಗಿದೋರನ್ನು ಎಬ್ಬಿಸೋದಷ್ಟೇ ಕೆಲ್ಸ. ಇದರಿಂದ ನಿದ್ದೆ (Sleep)ಯಿಂದ ಏಳೋರು ಗಳಿಸ್ತಿರೋದು ತಿಂಗಳಿಗೆ ಬರೋಬ್ಬರಿ 26 ಲಕ್ಷ ಗಳಿಸ್ಬೋದು. ಜೇಕಿ ಬೋಹ್ಮ್ ಎಂಬ ವೀಡಿಯೋ ಇನ್‌ಫ್ಲುಯೆನ್ಸರ್ ಜನರಿಗೆ ಈ ಆಫರ್ ನೀಡಿದ್ದಾರೆ. ಯಾವ ರೀತಿಯಾದರೂ ಸರಿ ಅವ್ರನ್ನು ಗಾಢ ನಿದ್ದೆಯಿಂದ ಎಬ್ಬಿಸ್ಬೇಕು. ಇದರಿಂದ ಬೋಹ್ಮ್ ತಿಂಗಳಿಗೆ ಲಕ್ಷ ಲಕ್ಷ ಗಳಿಸ್ತಿದ್ದಾರೆ.
ಜೇಕಿ ಬೋಹ್ಮ್ ನಿದ್ರೆಗೆ ಭಂಗ ತರುವ ಹಲವು ವಸ್ತುಗಳನ್ನು ತಮ್ಮ ರೂಮಿನಲ್ಲಿ ತಂದು ಇರಿಸಿಕೊಂಡಿದ್ದಾರೆ. ಸ್ಪೀಕರ್, ಬಬಲ್ ಯಂತ್ರ ಮೊದಲಾದವುಗಳನ್ನು ಕೋಣೆಯಲ್ಲಿ ಇರಿಸಲಾಗಿದ್ದು, ಇದನ್ನು ಉಪಯೋಗಿಸಿ ನಿದ್ರಾಭಂಗಗೊಳಿಸಬಹುದು. ಅಥವಾ ಇತರ ಯಾವುದೇ ವಿಧಾನವನ್ನು ಸಹ ಅನುಸರಿಸಬಹುದು. ಒಟ್ಟಾರೆ ವ್ಯಕ್ತಿ ನಿದ್ದೆಯಿಂದ ಎದ್ದರಾಯಿತು ಅಷ್ಟೆ. ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಇದಕ್ಕಾಗಿ ತಿಂಗಳಿಗೆ 26 ಲಕ್ಷ ರೂ. ಬೋಹ್ಮ್‌ಗೆ ಪಾವತಿಯಾಗುತ್ತಿದೆ. ಬೋಹ್ಮ್ ತಮ್ಮ ಕೆಲವು ಅನುಯಾಯಿಗಳನ್ನು ತನ್ನನ್ನು ಎಚ್ಚರಗೊಳಿಸಲು ಪ್ರೋತ್ಸಾಹಿಸುತ್ತಾರೆ. ಅನುಯಾಯಿಗಳು ಅಲಾರಾಂಗಾಗಿ ಯಾವುದೇ ಹಾಡನ್ನು ಮಾಡಬಹುದು ಮತ್ತು ಕಿರಿಕಿರಿಗೊಳಿಸುವ ಬೆಳಕಿನ ಪ್ರದರ್ಶನವನ್ನು ಸಹ ಏರ್ಪಡಿಸಬಹುದು.
ಟಿಕ್‌ಟಾಕರ್ ಬೋಹ್ಹ್ ಸೋಷಿಯಲ್ ಮೀಡಿಯಾ (Social Media)ದಲ್ಲಿ 5.2 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಮಧ್ಯರಾತ್ರಿ 12:30ಕ್ಕೆ ಬೋಹ್ಮ್ ನಿದ್ರೆಯಿಂದ ಥಟ್ಟನೆ ಎಚ್ಚರಗೊಂಡಿರುವುದನ್ನು ತೋರಿಸುವ ವೀಡಿಯೋ 7 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಅವನ ಕೊಠಡಿಯಲ್ಲಿರುವ ಸ್ಪೀಕರ್ ಮಧ್ಯರಾತ್ರಿ 2 ಗಂಟೆಗೆ ಜೋರಾಗಿ ಡಬ್‌ಸ್ಟೆಪ್ ಟ್ಯೂನ್‌ಗಳನ್ನು ನುಡಿಸುವುದನ್ನು ತೋರಿಸುವ ಇನ್ನೊಂದು ವೀಡಿಯೋ ಸಹ ವೈರಲ್ ಆಗಿದೆ. ಜೇಕಿ ಬೋಹ್ಮ್ ತನ್ನ ವೀಕ್ಷಕರನ್ನು ಬೇರೆ ಬೇರೆ ರೀತಿಯಲ್ಲಿ ಎಚ್ಚರಗೊಳಿಸಲು ಅನುವು ಮಾಡಿಕೊಡುವ ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರಿಸಲು ಬಯಸುತ್ತಾರೆ..