ಸಿಇಒ ಲೈಫ್‌ಸ್ಟೈಲ್ ಹೇಗಿರುತ್ತದೆ?

By Web DeskFirst Published Jan 13, 2019, 12:46 PM IST
Highlights

ಕಂಪನಿ ಸಿಇಒಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಅತೀ ಹೆಚ್ಚು ವೇತನ ಪಡೆಯುವ ಇವರಿಗೆ ಒತ್ತಡ ಕೂಡಾ ಹಾಗೇ ಇರುತ್ತದೆ. ಇವರ ದಿನಚರಿ ಹೇಗಿರುತ್ತದೆ? ಹೇಗೆಲ್ಲಾ ಲೈಫ್ ಲೀಡ್ ಮಾಡ್ತಾರೆ ಇಲ್ಲಿದೆ ಮಾಹಿತಿ. 

ಬೆಂಗಳೂರು (ಜ. 13): ಒಂದು ಕಂಪನಿಯ ಅತಿದೊಡ್ಡ ಹುದ್ದೆ ಸಿಇಒ ಹುದ್ದೆ. ಈ ಕುರ್ಚಿಯಲ್ಲಿ ಕೂರುವವರು ಇಡೀ ಕಂಪನಿಯನ್ನು ಮುನ್ನಡೆಸುತ್ತಾರೆ. ಹಾಗಾಗಿ ಎಲ್ಲರಿಗಿಂತ ಹೆಚ್ಚು ಸಂಬಳವನ್ನೂ ಪಡೆಯುತ್ತಾರೆ, ಜೊತೆಗೆ ಎಲ್ಲರಿಗಿಂತ ಹೆಚ್ಚು
ಜವಾಬ್ದಾರಿಯನ್ನೂ ಹೊರುತ್ತಾರೆ.

2016 ರಲ್ಲಿ ಜಗತ್ತಿನ ಅತಿದೊಡ್ಡ 500 (ಫಾರ್ಚೂನ್ 500) ಕಂಪನಿಗಳ ಸಿಇಒಗಳ ಪೈಕಿ ಅತಿ ಕಡಿಮೆ ವಾರ್ಷಿಕ ಸಂಬಳ ಪಡೆದವರು 69 ಕೋಟಿ ರು. ಜೇಬಿಗಿಳಿಸಿದ್ದರು! ಸಾಮಾನ್ಯವಾಗಿ ಒಂದು ಕಂಪನಿಯ ನೌಕರನ ಸಂಬಳಕ್ಕಿಂತ ಆ
ಕಂಪನಿಯ ಸಿಇಒ ಸಂಬಳ 2 ರಿಂದ 5000 ಪಟ್ಟು ಹೆಚ್ಚಿರುತ್ತದೆ. ಹಾಗಿದ್ದರೆ ಅವರ ಬದುಕು ಹೇಗಿರುತ್ತದೆ? ಇಲ್ಲಿದೆ ಮಾಹಿತಿ. 

24 ಗಂಟೆ ಹೀಗೆ ಕಳೆಯುತ್ತಾರೆ? 

31 % ಆಫೀಸ್ ಕೆಲಸ | 25 % ವೈಯಕ್ತಿಕ ಕೆಲಸ | 29 % ನಿದ್ದೆ | 10 % ಸಂವಹನ, ಓಡಾಟ | 5 % ಬಿಡುವು

ಯಾವುದರ ಬಗ್ಗೆ  ಹೆಚ್ಚು ಗಮನ?

70 % ಸಮಯವನ್ನು ಹಿರಿಯ ಮ್ಯಾನೇಜರ್ ಸೇರಿದಂತೆ ಕಂಪನಿಯ ಒಳಗಿನ ಆಗುಹೋಗುಗಳಿಗೆ ನೀಡುತ್ತಾರೆ. 16 % ಸಮಯವನ್ನು ಉದ್ಯಮ ಪಾಲುದಾರರು, ಗ್ರಾಹಕರಿಗೆ ನೀಡುತ್ತಾರೆ 9 % ಸಮಯವನ್ನು ಹೊರಗಿನ
ಕಮಿಟ್‌ಮೆಂಟ್‌ಗೆ ನೀಡುತ್ತಾರೆ. 5 % ಸಮಯ ಬೋರ್ಡ್‌ಗೆ ನೀಡುತ್ತಾರೆ. 

ನಿದ್ದೆ

36 % ಸಿಇಒಗಳು ತಮಗೆ ಕಂಪನಿಗಳು ನಿದ್ದೆ ಮಾಡುವುದಕ್ಕೂ ಬಿಡುವುದಿಲ್ಲ ಎಂಬ ಭಾವನೆ ಹೊಂದಿದ್ದಾರೆ 47 % ಸಿಎಒಗಳು ತಾವು ಇಡೀ ದಿನ ಇ-ಮೇಲ್ ಮತ್ತು ಫೋನ್‌ಗೆ ಉತ್ತರಿಸಬೇಕೆಂದು ತಮ್ಮ ಕಂಪನಿ ಬಯಸುತ್ತದೆ ಎಂದು ಭಾವಿಸಿದ್ದಾರೆ. 

 ಸಂವಹನ ಹೇಗೆ?

61 % ಮುಖಾಮುಖಿ ಸಂವಹನ 24 % ವಿದ್ಯುನ್ಮಾನ ಉಪಕರಣಗಳ ಮುಖಾಂತರ 15 % ಫೋನ್ ಮತ್ತು ಲೆಟರ್

ಎಷ್ಟೊತ್ತು ಮೀಟಿಂಗ್ ಮಾಡ್ತಾರೆ?

ಸಿಇಒಗಳು 30 ನಿಮಿಷ ಅಥವಾ ಅದಕ್ಕಿಂತ ಕಡಿಮೆ

32 % ಸಿಇಒಗಳು ಒಂದು ಗಂಟೆ

21 % ಸಿಇಒಗಳು 1-2 ಗಂಟೆ

20 % ಸಿಇಒಗಳು 2 ಗಂಟೆಗಿಂತ ಹೆಚ್ಚು 

 ಆರೋಗ್ಯ

60 % ಸಿಇಒಗಳು ವಾರವಿಡೀ ವ್ಯಾಯಾಮ ಮಾಡುತ್ತಾರೆ. 50 % ಸಿಇಒಗಳು ಟ್ರೈನರ್‌ಗಳನ್ನು ಇಟ್ಟುಕೊಂಡಿದ್ದಾರೆ. 32 % ಸಿಇಒಗಳು ವೆಲ್‌ನೆಸ್ ಕೋಚ್ ಹೊಂದಿದ್ದಾರೆ. 32 % ಸಿಇಒಗಳು ಥೆರಪಿಸ್ಟ್‌ಗಳನ್ನು ಹೊಂದಿದ್ದಾರೆ. 

ಕಂಪನಿಯಲ್ಲಿ ಯಾವ ಕೆಲಸಕ್ಕೆ ಎಷ್ಟು ಸಮಯ ಕೊಡುತ್ತಾರೆ?

25 % ಜನರು ಮತ್ತು ಸಂಬಂಧ, 25 % ಉದ್ಯಮ ವಿಮರ್ಶೆ, 21 % ತಂತ್ರಗಾರಿಕೆ ನಿರ್ವಹಣೆ, 16 % ಸಂಸ್ಥೆ ಮತ್ತು ಸಂಸ್ಕೃತಿ, 4 % ಆಪರೇಟಿಂಗ್ ಪ್ಲಾನ್ಸ್,  4 % ವಿಲೀನ ಮತ್ತು ಸ್ವಾಧೀನ, 3 % ವೃತ್ತಿ ಬೆಳವಣಿಗೆ, 1 % ಬಿಕ್ಕಟ್ಟು
ನಿರ್ವಹಣೆ. 

click me!