New Year 2023 : ಹೊಸ ವರ್ಷವನ್ನು ಹೊಸತಾಗಿ ವೆಲಕಂ ಮಾಡಲು ಇಲ್ಲಿವೆ ಟಿಪ್ಸ್

By Suvarna NewsFirst Published Dec 5, 2022, 5:16 PM IST
Highlights

ಡಿಸೆಂಬರ್ 31 ಯಾವಾಗ ಬರುತ್ತೆ ಅಂತಾ ಜನರು ಕಾಯ್ತಿದ್ದಾರೆ. ಹೊಸ ವರ್ಷವನ್ನು ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಏನೆಲ್ಲ ಮಾಡ್ಬೇಕು ಎಂಬ ಪ್ಲಾನ್ ಸಿದ್ಧವಾಗ್ತಿದೆ. ಈ ಬಾರಿ ಸ್ವಲ್ಪ ಭಿನ್ನವಾಗಿ ಹೊಸ ವರ್ಷ ಆಚರಣೆ ಮಾಡ್ಬೇಕು ಎನ್ನುವವರಿಗೆ ಕೆಲ ಟಿಪ್ಸ್ ಇಲ್ಲಿದೆ.
 

ಹೊಸ ವರ್ಷ ಬರ್ತಿದೆ. ಹೊಸ ನಿರೀಕ್ಷೆಗಳು ಹೆಚ್ಚಾಗ್ತಿವೆ. ಹೊಸ ವರ್ಷ ಹಳೆ ವರ್ಷಕ್ಕಿಂತ ಭಿನ್ನವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಹೊಸ ವರ್ಷದ ಆರಂಭ ಚೆನ್ನಾಗಿದ್ರೆ ಇಡೀ ವರ್ಷ ಚೆನ್ನಾಗಿರುತ್ತೆ ಎನ್ನುವ ನಂಬಿಕೆ ಕೆಲವರಿಗಿದೆ.  ಡಿಸೆಂಬರ್ 31 ಹಾಗೂ ಜನವರಿ ಒಂದನ್ನು ಕೆಲವರು ಅನೇಕ ವರ್ಷಗಳಿಂದ ಒಂದೇ ರೀತಿಯಲ್ಲಿ ಕಳೆಯುತ್ತಿರುತ್ತಾರೆ. ಹಳೆ ವರ್ಷಕ್ಕೆ ಬೈ ಹೇಳಿ ಹೊಸ ವರ್ಷವನ್ನು ವೆಲ್ ಕಂ ಮಾಡುವ ಹಳೆ ಸ್ಟೈಲ್ ನಿಮಗೆ ಬೋರ್ ಆಗಿದ್ರೆ ಬೇರೆ ವಿಧಾನ ಟ್ರೈ ಮಾಡಿ. ಆ ಮೂಲಕ ಹೊಸ ವರ್ಷಾರಂಭವನ್ನು ಎಂಜಾಯ್ ಮಾಡಿ. ನಾವಿಂದು ಹೊಸ ವರ್ಷವನ್ನು ನೀವು ಹೇಗೆಲ್ಲ ವೆಲ್ ಕಂ ಮಾಡ್ಬಹುದು ಅಂತಾ ನಿಮಗೆ ಹೇಳ್ತೆವೆ.

ಹೊಸ ವರ್ಷ (New Year) ವನ್ನು ಹೀಗೆ ಸ್ವಾಗತಿಸಿ (Welcome) :
ಲಾಂಗ್ ಡ್ರೈವ್ (Long Drive ) ಟ್ರೈ ಮಾಡಿ :
 ಹೊಸ ವರ್ಷವನ್ನು ವೆಲ್ ಕಂ ಮಾಡಲು ನೀವು ಲಾಂಗ್ ಡ್ರೈವ್‌ ಗೆ ಹೋಗಬಹುದು. ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲೂ ಹೊಸ ವರ್ಷದ ಸಂಭ್ರಮವನ್ನು ನೀವು ಮಧ್ಯರಾತ್ರಿ ನೋಡಬಹುದು. ಎಲ್ಲಡೆ ಹೊಸ ವರ್ಷದ ಆಚರಣೆಗಳು ನಡೆಯುತ್ತವೆ. ಕುಟುಂಬಸ್ಥರು ಅಥವಾ ಸ್ನೇಹಿತರೊಂದಿಗೆ ನೀವು ಲಾಂಗ್ ಡ್ರೈವ್ ಹೋಗಬಹುದು. ಲಾಂಗ್ ಡ್ರೈವ್ ಗೆ ಈ ಮೊದಲು ಹೋಗಿಲ್ಲ ಎನ್ನುವವರು ಇದನ್ನು ಟ್ರೈ ಮಾಡಬಹುದು. ಇದ್ರಿಂದ ಒಂದಲ್ಲ ನಿಮ್ಮ ಸುತ್ತಮುತ್ತಲಿನ ಅನೇಕ ಕಡೆ ಹೇಗೆ ವರ್ಷಾಚರಣೆ ಸಂಭ್ರಮವಿದೆ ಎನ್ನುವುದನ್ನು ನೀವು ನೋಡಬಹುದು.  ಹಾಗೆ ಲಾಂಗ್ ಡ್ರೈವ್ ಎಂಜಾಯ್ ಮಾಡಬಹುದು.  

New Year 2023: ಹೊಸ ವರ್ಷ ಹೆಚ್ಚಿರಲಿದೆ ಸಂಖ್ಯೆ 7ರ ಪ್ರಭಾವ

ಡಿನ್ನರ್ (Dinner) ಪ್ಲಾನ್ ಮಾಡಿ :  ನೆರೆಹೊರೆಯ ಯಾವುದೇ ಪ್ರಸಿದ್ಧ ಹೊಟೇಲ್ ಗೆ ನೀವು ಡಿನ್ನರ್ ಗೆ ಹೋಗಬಹುದು. ಕುಟುಂಬ ಅಥವಾ ಸ್ನೇಹಿತರೊಂದಿಗೆ ನೀವು ಹೋಗುವ ಯೋಚನೆ ಮಾಡಬಹುದು. ಹೊಸ ವರ್ಷದಂದು ಬಹುತೇಕ ಎಲ್ಲ ಹೊಟೇಲ್ ಗಳಲ್ಲೂ  ವಿಶೇಷ ಊಟದ ವ್ಯವಸ್ಥೆ, ಲೈಟಿಂಗ್ ವ್ಯವಸ್ಥೆ ಹಾಗೂ ಆಟ, ಸ್ಪರ್ಧೆ ಹೀಗೆ ಮೋಜಿನ ಚಟುವಟಿಕೆಗಳಿರುತ್ತವೆ. ನೀವು ಅದನ್ನು ಎಂಜಾಯ್ ಮಾಡಬಹುದು.  

ಒಳಾಂಗಣ ಆಟ :  ಮಕ್ಕಳು ಮತ್ತು ಕುಟುಂಬದೊಂದಿಗೆ ಒಳಾಂಗಣ ಆಟಗಳನ್ನು ಸಹ ಯೋಜಿಸಬಹುದು. ಒಳಾಂಗಣ ಆಟಗಳು ಬಹಳಷ್ಟು ವಿನೋದದಿಂದ ಕೂಡಿರುತ್ತವೆ. ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಹೊಸ ವರ್ಷದಲ್ಲಿ ನೀವು ಅನೇಕ ರೀತಿಯ ಆಟಗಳನ್ನು ಆಡಬಹುದು. ಹೊಸ ವರ್ಷವನ್ನು ಸ್ವಾಗತಿಸಲು ಇದು ಉತ್ತಮ ಮಾರ್ಗವಾಗಿದೆ. ಚಳಿಯಲ್ಲಿ ಟೀ, ಕಾಫಿ ಸೇವನೆ ಮಾಡ್ತಾ, ಸ್ನ್ಯಾಕ್ಸ್ ತಿನ್ನುತ್ತಾ ನೀವು ಆಟದ ಮಜವನ್ನು ಡಬಲ್ ಮಾಡಬಹುದು.

ಮನೆಯಲ್ಲೇ ಪಾರ್ಟಿ ಮಾಡಿ :  ಮನೆಯಿಂದ ಹೊರಗೆ ಹೋಗಲು ಇಷ್ಟವಿಲ್ಲ ಎನ್ನುವವರು, ಗಲಾಟೆ ಬೇಡ ಎನ್ನುವವರು ನೀವಾಗಿದ್ದರೆ ಮನೆಯಲ್ಲಿಯೇ ಪಾರ್ಟಿ ಮಾಡಿ. ಪಾರ್ಟಿಗಾಗಿ ನೀವು ನಿಮ್ಮ ಮನೆಯನ್ನು ಸುಂದರವಾಗಿ ಅಲಂಕರಿಸಿ. ಈ ಪಾರ್ಟಿಗೆ ನಿಮ್ಮ ಸಂಬಂಧಿಕರೊಂದಿಗೆ ನಿಮ್ಮ ಹತ್ತಿರದ ಮತ್ತು ನೆರೆಹೊರೆಯವರನ್ನು ಕೂಡ ಆಹ್ವಾನಿಸಬಹುದು.

New Year 2023: ಕ್ರಿಸ್‌ಮಸ್‌ನಿಂದ ನ್ಯೂ ಇಯರ್‌ವರೆಗೆ ರಜೆ ಎಂಜಾಯ್ ಮಾಡಲು ಇಲ್ಲಿವೆ ಬೆಸ್ಟ್ ತಾಣಗಳು

ನಿಮಗಿಷ್ಟದ ಸ್ಥಳಕ್ಕೆ ಹೋಗಿ : ಭಾರತದಲ್ಲಿ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಣೆ ಮಾಡುವ ಕೆಲ ಸ್ಥಳಗಳಿವೆ. ನೀವಿನ್ನೂ ಅಲ್ಲಿಯ ಸಂಭ್ರಮವನ್ನು ನೋಡಿಲ್ಲವೆಂದಾದ್ರೆ ಅಗತ್ಯವಾಗಿ ಈ ವರ್ಷ ಅಲ್ಲಿಗೆ ಹೋಗಿ. ಬಣ್ಣ ಬಣ್ಣದ ಲೈಟ್ಸ್ ಹಾಗೂ ಸಾಂಗ್ಸ್ ನಿಮ್ಮ ಖುಷಿಯನ್ನು ಡಬಲ್ ಮಾಡುತ್ತದೆ. 

ನಿಮಗಿಷ್ಟದ ಕೆಲಸ ಮಾಡಿ : ಹೊರಗೆ ಹೋಗಲು ಸಾಧ್ಯವಾಗ್ತಿಲ್ಲ, ಪಾರ್ಟಿ ಮಾಡಲು ಪುರುಸೊತ್ತಿಲ್ಲ ಎನ್ನುವವರು ಮನೆಯವರ ಜೊತೆ ಕುಳಿತು ಟಿವಿ ನೋಡ್ಬಹುದು. ಬಹುತೇಕ ಎಲ್ಲ ಚಾನೆಲ್ ಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಅನೇಕ ಕಾರ್ಯಕ್ರಮಗಳಿರುತ್ತವೆ. ಅದನ್ನು ನೋಡ್ತಾ ನೀವು ಹೊಸ ವರ್ಷವನ್ನು ಬರಮಾಡಿಕೊಳ್ಳಬಹುದು.   

click me!