
ಮಹಿಳೆಯರು, ಪುರುಷರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಬ್ಯಾಂಕ್‌ನಿಂದ ಸಾಲ ಪಡೆದು ತಮ್ಮ ಕಾಯಕಕ್ಕೆ ಹೊಸ ರೂಪವನ್ನು ನೀಡಿದ್ದಾರೆ. ಇಲ್ಲಿ ಪಾದರಕ್ಷೆ ತಯಾರಿಗೆ ಯಂತ್ರಗಳ ಬಳಕೆಯಾಗುವುದಿಲ್ಲ. ಎಲ್ಲವನ್ನು ರಟ್ಟೆ ಬಲದಿಂದಲೆ ಮಾಡಿ ಮುಗಿಸಬೇಕು. ವಿಶಿಷ್ಟ ಚಪ್ಪಲಿಗಳು ಇಲ್ಲಿ ತಯಾರಾಗುತ್ತವೆ.
ಕುರುಬರ ಚಪ್ಪಲಿಗಳು :
ಕುರುಬರು ಸದಾ ಕಾಡು, ಮುಳ್ಳಿನ ನಡುವೆ ತಿರುಗಾಡುವುದರಿಂದ ಇಂದಿಗೂ ಚರ್ಮದ ಚಪ್ಪಲಿಯನ್ನೇ ಧರಿಸುವುದು. ಇವನ್ನು ತೊಡುವುದರಿಂದ ದೇಹ ತಂಪಾಗಿ, ಕಾಲು ಒಡೆಯುವುದಿಲ್ಲವಂತೆ. ಇವರು ಮೊದಲಾಗಿ ತಿಳಿಸಿ ಬೇಕಾದ ರೀತಿಯಲ್ಲಿ ಚಪ್ಪಲಿಗಳನ್ನು ಮಾಡಿಸುತ್ತಾರೆ. ಎಮ್ಮೆ ಚರ್ಮದಿಂದ ತಯಾರಿಸುವ ಈ ಪಾದರಕ್ಷೆ ದಪ್ಪವಾಗಿದ್ದು ಎರಡರಿಂದ ಮೂರು ಕೆಜಿ ತೂಗುತ್ತದೆ. ನಾಲ್ಕೈದು ವರ್ಷಗಳ ಕಾಲ ಬಾಳಿಕೆ ಬರುವುದು ಇದರ ವಿಶೇಷತೆ. ಒಂದು ದಿನ ಮೂರು ಜನ ಕೆಲಸದಲ್ಲಿ ತೊಡಗಿದರೆ ಹತ್ತು ಜೊತೆ ಚಪ್ಪಲಿಗಳನ್ನು ತಯಾರಿಸುತ್ತಾರೆ. ಸಾಮಾನ್ಯವಾಗಿ ಒಂದು ಜೊತೆ ರೂ. ೪೦೦ ದರವಿರುತ್ತದೆ. ಹತ್ತು ಜೊತೆಯಿಂದ ಕಚ್ಚಾವಸ್ತು ಖರ್ಚು ಬಿಟ್ಟು ಒಂದುವರೆ ಸಾವಿರ ರೂಪಾಯಿ ಕೈ ಸೇರುತ್ತದೆ. ಗಂಗಾವತಿ, ಬಾಗಲಕೋಟೆಗೆ ಇಲ್ಲಿಂದ ಪೂರೈಕೆಯಾಗುತ್ತದೆ. ಚರ್ಮದ ಚಪ್ಪಲಿಗಳನ್ನು ಹೆಚ್ಚಾಗಿ ನೀರಿಗೆ ಉಪಯೋಗಿಸಬಾರದು ಎಂಬುವುದು ಇವರ ಕಿವಿಮಾತು. ಕೆಲವೊಮ್ಮೆ ದೇವರಿಗೆ ಹರಕೆ ಹೊತ್ತು ಚಪ್ಪಲಿ ಒಪ್ಪಿಸುವವರು ತಯಾರಿಸಿಕೊಡುವಂತೆ ಹೇಳುತ್ತಾರೆ. ಅದರ ಬೆಲೆ ರೂ. ೧೦ ಸಾವಿರದಿಂದ ೨೦ ಸಾವಿರದವರೆಗೆ ಇರುತ್ತದೆ.
ಸಾಮಾನ್ಯರು ಧರಿಸುವ ಚರ್ಮದ ಚಪ್ಪಲಿಗಳು:
ಕೆಲವು ಮಂದಿ ಸಾಮಾನ್ಯರು ಧರಿಸಬಹುದಾದಂತಹ ಚರ್ಮದ ಚಪ್ಪಲಿಗಳನ್ನಷ್ಟೇ ತಯಾರಿಸುತ್ತಾರೆ. ಇಲ್ಲಿನ ಹೊಳ್ಳಿಯಪ್ಪರವರದು ಸಣ್ಣಂದಿನಿಂದ ಇದೇ ಕಾಯಕ. ಒಂದು ದಿನಕ್ಕೆ ಎರಡು ಜೊತೆ ಪುರುಷರ ಚಪ್ಪಲಿಗಳನ್ನು ತಯಾರಿಸುತ್ತಾರೆ. ಇದಕ್ಕೆ ರೂ. ೯೦೦ ಖರ್ಚು ತಗಲುತ್ತದೆಯಂತೆ. ಗೋಕಾಕ್ ಸಂತೆಗೆ ಇವರು ಮಾರಾಟ ಮಾಡುತ್ತಿದ್ದು ಒಂದು ಜೊತೆ ತಯಾರಿಸಿದರೆ ರೂ. ೧೫೦ ಲಾಭ ಕೈ ಸೇರುತ್ತದೆ. ಸಂಪೂರ್ಣವಾಗಿ ಕೈ ಹೊಲಿಗೆಯ ಮೂಲಕ ತಯಾರಿಸುವ ಚರ್ಮದ ಚಪ್ಪಲಿಗಳು ಎರಡು ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಇದನ್ನು ಧರಿಸುವುದರಿಂದ ಅರೋಗ್ಯಕ್ಕೂ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಕೂಡಾ ಹೌದು. ಆದ್ದರಿಂದ ಸಾಕಷ್ಟು ಬೇಡಿಕೆಯಿದೆ ಎನ್ನುವುದು ಹೊಳ್ಳಿಯಪ್ಪರವರ ಅನುಭವದ ಮಾತು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.