ಅವನ ಸಂಗಕ್ಕಾಗಿ ಗಂಡನನ್ನೇ ಕೊಂದಳು : ದೇಹದ ಖಾಸಗಿ ಅಂಗಗಳ ಹಿಸುಕಿ ಹಿಂಸೆ ಕೊಟ್ಟರು

By Kannadaprabha NewsFirst Published Nov 19, 2020, 10:14 AM IST
Highlights

ಪ್ರಿಯಕರನ ಸಂಗಕ್ಕಾಗಿ ಆಕೆ ತನ್ನ ಗಂಡನನ್ನೇ ಕೊಂದಳು. ಗಂಡನ ಕೊಲೆ ಮಾಡಲು ಪ್ರಿಯಕರನ ಸಹಾಯವನ್ನು ಪಡೆದಳು ಕೊನೆ ಕ್ಷಣದಲ್ಲಿ ಆ ಕೊಲೆ ರಹಸ್ಯ ಬಯಲಾಯಿತು. 

ತುರುವೇಕೆರೆ (ನ.19):  ಕೊನೆಯುಸಿರೆಳೆದಿದ್ದ ಯುವಕನ ಶವವನ್ನು ಇನ್ನೇನು ಚಿತೆಯಲ್ಲಿಟ್ಟು ಸುಡಬೇಕು ಎನ್ನುವಷ್ಠರಲ್ಲಿ ಬಂದ ಅನುಮಾನ ಆತನ ಪತ್ನಿ ಸೇರಿದಂತೆ ಮೂವರನ್ನು ಜೈಲಿಗೆ ತಳ್ಳುವಂತೆ ಮಾಡಿದೆ.

ತಾಲೂಕಿನ ಮಾಯಸಂದ್ರದ ಮಂಜುನಾಥ (30) ನವೆಂಬರ್‌ 12 ರಂದು ತನ್ನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಪತ್ನಿ ವಿದ್ಯಾ ತನ್ನ ಗಂಡ ನಿಧನ ಹೊಂದಿದ ಸಂಗತಿಯನ್ನು ಪತಿಯ ಪೋಷಕರಿಗೆ ರಾತ್ರಿಯೇ ತಿಳಿಸಿದ್ದಾಳೆ. ಆರೋಗ್ಯದಲ್ಲಿ ಏರುಪೇರಾದ ಕಾರಣಕ್ಕೆ ಮಂಜುನಾಥ ಕೊನೆಯುಸೆರೆಳೆದಿರಬಹುದು ಎಂದು ಮಂಜುನಾಥನ ಪೋಷಕರು ನಂಬಿದ್ದರು.

ವಸತಿ ಗೃಹದಲ್ಲಿ ವಿವಾಹಿತೆ ಜೊತೆಗೆ ಸಿಕ್ಕಿಬಿದ್ದ ಅರಣ್ಯ ಅಧಿಕಾರಿ : ಎರಡು ದಿನ ಜೊತೆಗೆ ಇದ್ರು ...

ಮಂಜುನಾಥನ ಶವವನ್ನು ಪತ್ನಿಯ ಊರಾದ ಚಿಕ್ಕಶೆಟ್ಟಿಕೆರೆಯಲ್ಲಿ ದಹನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಶವವನ್ನು ಚಿತೆಯ ಮೇಲೆ ಮಲಗಿಸಲಾಗಿತ್ತು. ಆ ವೇಳೆ ಮೃತ ಮಂಜುನಾಥನ ತಂದೆಗೆ ತನ್ನ ಮಗನ ಸಾವು ಅಸಜವಾಗಿದೆ ಎಂಬ ಅನುಮಾನ ತಲೆಗೆ ಹೊಕ್ಕಿದೆ. ಕೂಡಲೇ ಪೋಲಿಸರಿಗೆ ಕರೆ ಮಾಡಿ ತನ್ನ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸ್ಥಳಕ್ಕೆ ಬರುವಂತೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೋಲಿಸರು ಚಿತೆಯ ಮೇಲಿರಿಸಲಾಗಿದ್ದ ಮಂಜುನಾಥನ ಶವವನ್ನು ತುರುವೇಕೆರೆಯ ಶವಾಗಾರಕ್ಕೆ ತಂದಿದ್ದಾರೆ. ತಪಾಸಣೆ ವೇಳೆ ಮೇಲ್ನೋಟಕ್ಕೆ ಮಂಜುನಾಥನ ಕುತ್ತಿಗೆಯನ್ನು ಹಿಸುಕಲಾಗಿದೆ ಹಾಗೂ ದೇಹದ ಅಂಗಾಗ ಹಾಗೂ ಗುಪ್ತಾಂಗವನ್ನು ಹಿಸುಕಲಾಗಿದೆ ಎಂದು ಕಂಡುಬಂತು. ಮರಣೋತ್ತರ ಪರೀಕ್ಷಾ ಸಂದರ್ಭದಲ್ಲಿ ಪತ್ನಿ ವಿದ್ಯಾ ಸಹ ಇದ್ದಳು. ಶವದ ಮೇಲಾಗಿರುವ ಸಂಗತಿಗಳನ್ನು ಯಾರಿಗೂ ಹೇಳದೇ ಜಾಣತನ ತೋರಿದ ಸ್ಥಳೀಯ ಪೋಲಿಸರು ಸಹಜವಾಗೇ ಮಂಜುನಾಥನ ಶವವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರು.

ಮಂಜುನಾಥನ ಅಂತ್ಯ ಸಂಸ್ಕಾರ ಆದ ತರುವಾಯ ಜಾಗೃತರಾದ ಪೋಲಿಸರು ಮಂಜುನಾಥನ ಪತ್ನಿ ವಿದ್ಯಾಳ ಮೊಬೈಲ್‌ ಫೋನ್‌ ಮಾಹಿತಿ ಸಂಗ್ರಹಿಸಿದರು. ಆಗಲೇ ಕೊಲೆಯ ರಹಸ್ಯ ಜಗಜ್ಜಾಹೀರಾಗಿದ್ದು. ಪೋಲಿಸರ ತನಿಖೆಯಲ್ಲಿ ವಿದ್ಯಾ, ಢಣನಾಯಕನಪುರದ ಯೋಗೀಶ್‌ನೊಂದಿಗೆ ಅಕ್ರಮ ಸಂಬಂಧ ಹಾಗೂ ಮಾಯಸಂದ್ರದ ಗಿರೀಶ್‌ ಎಂಬುವವರೊಂದಿಗೆ ಹೆಚ್ಚು ಗೆಳೆತನವಿತ್ತು ಎಂಬ ಸಂಗತಿ ಬಯಲಾಗಿತ್ತು. ಈ ವಿಷಯದಲ್ಲಿ ಮೃತ ಮಂಜುನಾಥ ಮತ್ತು ವಿದ್ಯಾಳೊಂದಿಗೆ ಜಗಳವಾಗಿದ್ದ ಸಂಗತಿಯೂ ರಟ್ಟಾಗಿತ್ತು.

ನವೆಂಬರ್‌ 12 ರಂದು ರಾತ್ರಿ ಮಂಜುನಾಥನನ್ನು ಪತ್ನಿ ವಿದ್ಯಾ, ಪ್ರಿಯಕರ ಯೋಗೀಶ್‌ ಮತ್ತು ಗಿರೀಶ್‌ ಮೂವರೂ ಸೇರಿ ಕತ್ತು ಹಾಗೂ ಇನ್ನಿತರ ಅಂಗಾಗಗಳನ್ನು ಹಿಸುಕಿ ಕೊಲೆಗೈದಿದ್ದಾರೆ ಎಂಬ ಸಂಗತಿಯೂ ಬಯಲಾಯಿತು. ಮಂಜುನಾಥನ ಮರಣೋತ್ತರ ಪರೀಕ್ಷೆಯ ವರದಿ ಪೋಲಿಸರ ಕೈ ಸೇರುತ್ತಲೇ ತನಿಖೆ ಚುರುಕುಗೊಂಡಿತು. ಮಂಜುನಾಥನ ಸಾವಿನಲ್ಲಿ ತಾವು ಅಮಾಯಕರೆಂದು ಬಿಂಬಿಸಿಕೊಂಡಿದ್ದ ಪತ್ನಿ ವಿದ್ಯಾ, ಪ್ರಿಯಕರ ಯೋಗೀಶ್‌ ಮತ್ತು ಗಿರೀಶ್‌ ಕೊನೆಗೂ ಪೋಲಿಸರ ಬಲೆಗೆ ಬಿದ್ದರು.

ಮಂಜುನಾಥನ ಪ್ರಕರಣವನ್ನು ಬಹಳ ಚಾಣಾಕ್ಷತನದಿಂದ ಬೇಧಿ​ಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂ​ಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹೆಚ್ಚುವರಿ ಎಸ್‌.ಪಿ. ಉದೇಶ್‌, ಡಿವೈಎಸ್‌ಪಿ ಗಾನಕುಮಾರ್‌ ಮಾರ್ಗದರ್ಶನದ ಮೇರೆಗೆ ಬಹಳ ಬುದ್ಧಿವಂತಿಕೆಯಿಂದ ಪ್ರಕರಣ ಬೇಧಿ​ಸಿದ ಸಿಪಿಐ ನವೀನ್‌ ಹಾಗೂ ಪಿಎಸ್‌ಐ ಪ್ರೀತಂ ಮತ್ತು ಸಿಬ್ಬಂದಿಗೆ ಜಿಲ್ಲಾ ಪೋಲಿಸ್‌ ವರಿಷ್ಠಾಧಿ​ಕಾರಿ ವಂಸಿಕೃಷ್ಣ ಶಹಬ್ಬಾಶ್‌ ಹೇಳಿದ್ದಾರೆ.

click me!