ಅವಶ್ಯಕತೆಯೇ ಆವಿಷ್ಕಾರದ ತಾಯಿ. ಆದರೆ, ನಡೆಯುವ ಆವಿಷ್ಕಾರಗಳಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಾಧ್ಯತೆ ಕಡಿಮೆ. ಆದ ಆವಿಷ್ಕಾರಗಳೂ ಕೃಷಿಕರಿಂದಲೇ ಆಗುತ್ತಿವೆ. ಕೇವಲ ಎಸ್‌ಎಸ್‌ಎಲ್‌ಸಿ ವರೆಗೆ ಕಲಿತು ಕೃಷಿ ಕಾರ್ಯದಲ್ಲಿ ಹಿಂದಿನಿಂದಲೂ ತೊಡಗಿಕೊಂಡ ಕೃಷಿಕನೊಬ್ಬ ಯಾವುದೇ ಇಂಧನ ಬೇಡದ, ವಿದ್ಯುತ್ ಬೇಕಾಗದ, ದಿನದ 24 ಗಂಟೆಯೂ ನಿರಂತರವಾಗಿ ನೀರು ಎತ್ತುವ ಪಂಪ್ ಕಂಡುಹಿಡಿದಿದ್ದಾರೆ.
ಮಂಜುನಾಥ ಸಾಯೀಮನೆ
ಶಿರಸಿ (ಫೆ.13) : ಅವಶ್ಯಕತೆಯೇ ಆವಿಷ್ಕಾರದ ತಾಯಿ. ಆದರೆ, ನಡೆಯುವ ಆವಿಷ್ಕಾರಗಳಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಾಧ್ಯತೆ ಕಡಿಮೆ. ಆದ ಆವಿಷ್ಕಾರಗಳೂ ಕೃಷಿಕರಿಂದಲೇ ಆಗುತ್ತಿವೆ.
undefined
ಕೇವಲ ಎಸ್‌ಎಸ್‌ಎಲ್‌ಸಿ ವರೆಗೆ ಕಲಿತು ಕೃಷಿ ಕಾರ್ಯದಲ್ಲಿ ಹಿಂದಿನಿಂದಲೂ ತೊಡಗಿಕೊಂಡ ಕೃಷಿಕನೊಬ್ಬ ಯಾವುದೇ ಇಂಧನ ಬೇಡದ, ವಿದ್ಯುತ್ ಬೇಕಾಗದ, ದಿನದ 24 ಗಂಟೆಯೂ ನಿರಂತರವಾಗಿ ನೀರು ಎತ್ತುವ ಪಂಪ್ ಕಂಡುಹಿಡಿದಿದ್ದಾರೆ.
ಯುವಕನಿಂದ ಕಳೆ ತೆಗೆಯುವ ಸಾಧನ ಅಭಿವೃದ್ಧಿ; ತ್ರಿಚಕ್ರ ವಾಹನಕ್ಕೀಗ ಬಹುಬೇಡಿಕೆ
ತಾಲೂಕಿನ ಹೆಗಡೆಕಟ್ಟಾರಸ್ತೆಯ ಕುಂಟೆಮನೆಯ(Kuntemane) ಗೋವಿಂದ ಹೆಗಡೆ(Govinda hegde) ಈ ಅಪ್ರತಿಮ ಸಾಧನೆ ಮಾಡಿದ್ದಾರೆ. ಹರಿಯುವ ನೀರಿನ ಇಳಿಜಾರು ಕೇವಲ ಒಂದು ಅಡಿ ಇದ್ದರೂ ಈ ಪಂಪ್ ಅದೇ ನೀರನ್ನು 15 ಅಡಿ ಎತ್ತರಕ್ಕೆ ಪಂಪ್ ಮಾಡುತ್ತದೆ. ಎರಡು ಅ()ಡಿ ಇದ್ದರೆ 30 ಅಡಿ ಎತ್ತರಕ್ಕೆ ಪಂಪ್ ನೀರೆತ್ತುತ್ತದೆ.
ಆವಿಷ್ಕಾರ ಹೇಗೆ?
ಗ್ರಾಮೀಣ ಪ್ರದೇಶದಲ್ಲಿ ನೈಸರ್ಗಿಕವಾಗಿ ಹರಿಯುವ ನೀರಿಗೆ ಕೊರತೆ ಇರುವುದಿಲ್ಲ. ಈ ನೀರನ್ನು ಪಂಪ್ ಮಾಡಿ ಮನೆಗೆ, ಕೃಷಿ ತೋಟಗಳಿಗೆ ನಿರಂತರವಾಗಿ ಪೂರೈಸಬೇಕೆಂದರೆ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಇರುವುದಿಲ್ಲ. ಇದಕ್ಕೆ ಬದಲಿ ಉಪಾಯವೇನು ಎಂದು ಗೋವಿಂದ ಹೆಗಡೆ ಶೋಧಿಸಲು ಮುಂದಾದರು.
ಮಳೆಗಾಲದ ಅವಧಿಯಲ್ಲಿ ಅಡಕೆ ಗೊನೆಗಳಿಗೆ ಬೋರ್ಡೋ ಸಿಂಪಡಣೆಗೆ ಬಳಸುವ ಕೈ ಪಂಪ್ ಅವರ ಶೋಧಕ್ಕೆ ಮೂಲ ತಿರುಳಾಯಿತು. ಮಾನವ ಶಕ್ತಿ ಬಳಸಿ ಈ ಪಂಪ್ ಮೂಲಕ ಬೋರ್ಡೋ ದ್ರಾವಣವನ್ನು 50 ಅಡಿ ಎತ್ತರದ ಅಡಕೆ ಮರದ ತುದಿಯವರೆಗೂ ಕಳಿಸಲಾಗುತ್ತದೆ. ಅದೇ ಮಾದರಿಯಲ್ಲಿ ನೀರನ್ನು ಪಂಪ್ ಮಾಡಲು ನೀರಿನ ಹರಿಯುವ ಶಕ್ತಿಯನ್ನೇ ಬಳಸಲು ಯೋಜಿಸಿದರು.
ಭೂಮಿಯ ಗುರುತ್ವಾಕರ್ಷಣೆ ಶಕ್ತಿಯನ್ನೇ ಪಂಪಿನ ಇಂಧನವಾಗಿ ಬಳಸಲು ಯೋಜನೆ ರೂಪಿಸಿದರು. ಇದಕ್ಕೆ 300 ಮೀ. ಪಿವಿಸಿ ಪೈಪ್ ಹಾಕಿ ಮಾರ್ಗ ಸಿದ್ಧಪಡಿಸಿದರು. ಫುಟ್‌ವಾಲ್ ಮಾದರಿಯಲ್ಲಿ ಒತ್ತಡ ಸೃಷ್ಟಿಸುವ ಉಪಕರಣಗಳನ್ನು ಸಿದ್ಧಪಡಿಸಿದರು.
ಇದಕ್ಕೆ ಹಳೆಯ ಟೈರ್, ಟ್ಯೂಬ್‌ಗಳು ವೈಸರ್ ಆಗಿ ಬಳಕೆಗೆ ಬಂತು. ಇನ್ನೊಂದು ಪಿವಿಸಿ ಪೈಪ್ ಬಳಸಿ ನೀರು ವಾಪಸ್ ಬಾರದಂತೆ ಉಪಕರಣ ಸಿದ್ಧಪಡಿಸಿದರು. ಒಂದು ಬಾರಿ ಈ ಉಪಕರಣದ ಒಳಗಿರುವ ಗಾಳಿಯನ್ನು ಹೊರ ಹಾಕಿದರೆ ವಿದ್ಯುತ್, ಇಂಧನ ಬೇಡ ಪಂಪ್ ಕಾರ್ಯಾಚರಣೆಗೆ ಸಿದ್ಧ. ಸುತ್ತಮುತ್ತಲ ಹಳ್ಳಿಗರಿಗೆ, ಪರಿಚಯಸ್ಥರಿಗೆ ಇದುವರೆಗೂ 25ಕ್ಕೂ ಅಧಿಕ ಪಂಪ್‌ಗಳನ್ನು ಸಿದ್ಧಪಡಿಸಿ ನೀಡಿದ್ದಾರೆ. .2500ರಿಂದ .3 ಸಾವಿರ ಮಾತ್ರ ತಗುಲುವ ಈ ಪಂಪ್ ಕೃಷಿಕರ ಆಸಕ್ತಿ ಕೆರಳಿಸಿದ್ದು, ತಾವೂ ಮನೆಯಲ್ಲಿ ಈ ಪಂಪ್ ತಯಾರಿಸಲು ರೈತರು ಸಾಲಾಗಿ ಇವರ ಮನೆಯತ್ತ ಧಾವಿಸುತ್ತಿದ್ದಾರೆ.
ಶಿರಸಿಗೆ ಬಂತು ಮೊದಲ ಐಟಿ ಕಂಪನಿ ಆಲ್ಟ್ ಡಿಜಿಟಲ್ ಟೆಕ್ನಾಲಜಿ!...
ಮಲೆನಾಡಿನ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಖರ್ಚು ರಹಿತ ಈ ಪಂಪ್ ತಯಾರಿಸಲು ಆಸಕ್ತರು ಇದ್ದರೆ ನಾನು ಕಲಿಸಲು ಸಿದ್ಧ ಎನ್ನುತ್ತಾರೆ ಗೋವಿಂದ ಹೆಗಡೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಈ ಪಂಪ್ ಶೋಧಿಸಿದ್ದು, ಹಲವರಿಗೆ ಮಾಡಿಕೊಟ್ಟಿದ್ದೇನೆ. ಅವು ಸತತವಾಗಿ ಕಾರ್ಯ ನಿರ್ವಹಿಸುತ್ತಿವೆ. ನೀರಿನ ಹರಿವಿನ ಪ್ರಮಾಣ, ಎತ್ತರ ಜಾಸ್ತಿ ಇದ್ದರೆ ಪಿವಿಸಿ ಬದಲು ಕಬ್ಬಿಣದ ಪೈಪ್ ಬಳಸಬೇಕಾಗುತ್ತದೆ.
ಗೋವಿಂದ ಹೆಗಡೆ, ಇಂಧನ ರಹಿತ ಪಂಪ್ ಶೋಧ