ಆಸ್ಪತ್ರೆ ತ್ಯಾಜ್ಯ ಎಸೆಯಲಿಲ್ಲ, ಅದನ್ನೇ ಲಾಭ ಮಾಡ್ಕೊಂಡು ಯಶಸ್ವಿಯಾದ್ರು..!

By Kannadaprabha NewsFirst Published Feb 28, 2020, 9:41 AM IST
Highlights

ಉಡುಪಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯದಿಂದ ಆರ್ಥಿಕ ಲಾಭ ಗಳಿಸುವ ಪ್ರಯತ್ನ ಯಶಸ್ವಿಯಾಗಿದೆ. ತ್ಯಾಜ್ಯದಿಂದ ಬಂದ ಲಾಭವನ್ನು ಜಿಲ್ಲಾಸ್ಪತ್ರೆಯ ಆರೋಗ್ಯ ಸೇವೆಗೆ ಬಳಕೆ ಮಾಡಲಾಗುತ್ತಿದೆ.

ಉಡು​ಪಿ(ಫೆ.28): ದೇಶಾ​ದ್ಯಂತ ನಗರಗಳಲ್ಲಿ ತ್ಯಾಜ್ಯ ಬಹಳ ದೊಡ್ಡ ಪಿಡುಗು ಆಗಿಬಿಟ್ಟಿದೆ. ಅದನ್ನು ನಿರ್ವಹಿಸುವುದಕ್ಕೆ ಲಕ್ಷಾಂತರ ರು. ವ್ಯಯವಾಗುತ್ತಿದೆ, ಅದು ಅನುತ್ಪಾದಕ ವ್ಯಯವಾಗುತ್ತಿದೆ. ಸರ್ಕಾರಕ್ಕೆ ಆರ್ಥಿಕವಾಗಿ ನಷ್ಟಕ್ಕೂ ಕಾರಣವಾಗುತ್ತಿದೆ, ಆರೋಗ್ಯ ಕ್ಷೇತ್ರಕ್ಕೂ ಅದು ಬಹಳ ದೊಡ್ಡ ಹೊಡೆತ ನೀಡುತ್ತಿದೆ.

ಆದರೆ, ಉಡುಪಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯದಿಂದ ಆರ್ಥಿಕ ಲಾಭ ಗಳಿಸುವ ಪ್ರಯತ್ನ ಯಶಸ್ವಿಯಾಗಿದೆ. ತ್ಯಾಜ್ಯದಿಂದ ಬಂದ ಲಾಭವನ್ನು ಜಿಲ್ಲಾಸ್ಪತ್ರೆಯ ಆರೋಗ್ಯ ಸೇವೆಗೆ ಬಳಕೆ ಮಾಡಲಾಗುತ್ತಿದೆ.

ಹೇಗೆ ಲಾಭ?:

ಜಿಲ್ಲಾಸ್ಪತ್ರೆ ಆವರಣದಲ್ಲಿ ಆರಂಭವಾಗಿರುವ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ಕೇಂದ್ರವು ಆಸ್ಪತ್ರೆಯೊಳಗೆ ಮತ್ತು ಹೊರಗೆ ಸ್ವಚ್ಛತೆ ಹೆಚ್ಚಿಸುವ ಜೊತೆಗೆ, ಇಲ್ಲಿ ಸಂಗ್ರಹಗೊಂಡ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಮಾರಾಟ ಮಾಡಲಾಗುತ್ತಿದೆ. ಈ ಆದಾಯವನ್ನು ಜಿಲ್ಲಾ ಆರೋಗ್ಯ ರಕ್ಷಾ ಕವಚ ನಿಧಿಗೆ ನೀಡಿ, ಆಸ್ಪತ್ರೆಗೆ ಅಗತ್ಯವಿರುವ ಔಷಧ ಮತ್ತು ಯಂತ್ರೋಪಕರಣಗಳನ್ನು ಖರೀದಿಸಲಾಗಿದೆ.

ಬ್ಯಾಂಡೆಜ್‌, ಸಿಂರಿಜು ಇಲ್ಲ:

ಆಸ್ಪತ್ರೆಯ ತ್ಯಾಜ್ಯ ಎಂದರೆ ರೋಗಿಯ ರಕ್ತಸಿಕ್ತ ಬ್ಯಾಂಡೇಜ್, ಹತ್ತಿ, ಸಿರಿಂಜ್‌​ಗಳು ಎಂಬ ಭಾವನೆ ಸಾಮಾ​ನ್ಯ. ಆದರೆ ಈ ತ್ಯಾಜ್ಯಗಳನ್ನು ವೈದ್ಯಕೀಯ ತ್ಯಾಜ್ಯವಾಗಿ ಪ್ರತ್ಯೇಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆದನ್ನು ಬಿಟ್ಟು ಆಸ್ಪತ್ರೆಯಲ್ಲಿ ಬಳಸುವ ಸಿರೆಂಜ್‌ ಪ್ಯಾಕೆಟ್‌ ಮೇಲಿನ ಕವರ್‌ಗಳು, ಮಾತ್ರೆಗಳ ಮೇಲಿನ ಕವರ್‌, ಔಷಧದ ಪ್ಯಾಕಿಂಗ್‌ ಬಾಕ್ಸ್‌ಗಳು, ರಟ್ಟಿನ ಬಾಕ್ಸ್‌ಗಳು, ಖಾಲಿ ಗ್ಲುಕೋಸ್‌ ಬಾಟಲ್‌ಗಳು, ಆಸ್ಪತ್ರೆ ಆವರಣದಲ್ಲಿ ದೊರೆಯುವ ಖಾಲಿ ನೀರಿನ ಬಾಟಲ್‌ಗಳು ಮುಂತಾದವುಗಳನ್ನು ಪ್ರತ್ಯೇಕವಾಗಿ ಸಂಗ್ರಹಿ, ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ಆದಾಯ ಆರಂಭ:

ಪ್ರಾರಂಭದಲ್ಲಿ ಪ್ರತಿ ತಿಂಗಳು 250 ಕೆ.ಜಿ. ಯಷ್ಟುಪ್ಲಾಸ್ಟಿಕ್‌ ತ್ಯಾಜ್ಯ ಆಸ್ಪತ್ರೆಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಪ್ರಸ್ತುತ ಪ್ರತಿ ತಿಂಗಳು ಒಂದು ಟನ್‌ನಷ್ಟುತ್ಯಾಜ್ಯ ದೊರೆಯುತ್ತಿದೆ. ಇದನ್ನು ಸೂಕ್ತ ರೀತಿಯಲ್ಲಿ ವಿಂಗಡಿಸಿ ಮಾರಾಟಕ್ಕೆ ಸಿದ್ದಪಡಿಸುತ್ತಿದೆ. ಈಗಾಗಲೇ ಸುಮಾರು 5 ಟನ್‌ ನಷ್ಟುತ್ಯಾಜ್ಯ ಮಾರಾಟ ಮಾಡಿ 33,000 ರು. ಆದಾಯ ಬಂದಿದೆ. ಅದನ್ನು ಜಿಲ್ಲಾ ಆರೋಗ್ಯ ರಕ್ಷಾ ಕವಚ ನಿಧಿಗೆ ನೀಡಲಾಗಿದೆ.

ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಭಾರೀ ಮಳೆ

ಈಗ ಮತ್ತೊಮ್ಮೆ ಸುಮಾರು 7 ಟನ್‌ನಷ್ಟುತ್ಯಾಜ್ಯ ಸಂಗ್ರಹವಾಗಿದ್ದು, ಸುಮಾರು 60 ಸಾವಿರ ರು. ಆದಾಯ ನಿರೀಕ್ಷಿಸಲಾಗಿದೆ ಎನ್ನುತ್ತಾರೆ ಈ ಕೇಂದ್ರದ ಮೇಲ್ವಿಚಾರಕಿ ಜ್ಯೋತಿ, ಇವರಿಗೆ ಸಹಾಯಕರಾಗಿ ರೇವತಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗೊಬ್ಬರ ಕೂಡ ಸಾಧ್ಯ:

ಪ್ಲಾಸ್ಟಿಕ್‌ ಮಾತ್ರವಲ್ಲದೇ ಆಸ್ಪತ್ರೆ ಮುಂದಿರುವ ಪಾರ್ಕ್ನಲ್ಲಿ ಸಂಗ್ರಹವಾಗುವ ಮರಗಿಡಗಳ ಕಸವನ್ನು ಸಂಗ್ರಹಿಸಿ ಗೊಬ್ಬರ ತಯಾರಿಸುವ ಘಟಕವನ್ನು ಆರಂಭಿಸಿದ್ದು, ಇಲ್ಲಿ ತಯಾರಾದ ಗೊಬ್ಬರವನ್ನು ಪ್ರತಿ ಬುಟಿು್ಟಗೆ 20 ರು. ರಂತೆ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ತೋಟಗಾರಿಕಾ ಇಲಾಖೆ ಈ ಗೊಬ್ಬರವನ್ನು ಖರೀದಿಸಿದ್ದು, ಮತ್ತೊಮ್ಮೆ ಗೊಬ್ಬರ ತಯಾರಿಕೆ ಆರಂಭಗೊಂಡಿದೆ. ಅಲ್ಲದೆ, ಇದೇ ಗೊಬ್ಬರವನ್ನು ಬಳಸಿ ಕೇಂದ್ರದಲ್ಲಿ ಚಿಕ್ಕ ಕೈತೋಟ ಹಾಗೂ ಔಷಧಿಯ ಗಿಡಗಳನ್ನು ಬೆಳೆಸಲಾಗುತ್ತಿದೆ.

ಬಯೋಗ್ಯಾಸ್‌ ಸಾಧ್ಯ:

ಮುಂದಿನ ಹಂತದಲ್ಲಿ ಆಸ್ಪತ್ರೆಯಲ್ಲಿನ ಹಸಿ ತ್ಯಾಜ್ಯ ಎಂದರೆ ಉಳಿದ ಊಟ, ಹಣ್ಣಿನ ಸಿಪ್ಪೆಗಳು ಮುಂತಾದವುಗಳನ್ನು ವಿಲೇವಾರಿ ಮಾಡಲು ಬಯೋಗ್ಯಾಸ್‌ ಘಟಕ ಆರಂಭಗೊಳ್ಳಲಿದ್ದು ಇದರಿಂದ ಆಸ್ಪತ್ರೆಯ ಬಳಕೆಗೆ ಗ್ಯಾಸ್‌ ಹಾಗೂ ಉತ್ತಮ ಗೊಬ್ಬರ ಸಹ ದೊರೆಯಲಿದೆ.

ಮಂಗಳೂರು-ಬೆಂಗಳೂರು ರಾತ್ರಿ ರೈಲು ಬುಕ್ಕಿಂಗ್‌ ರದ್ದು

ತ್ಯಾಜ್ಯ ಎಂದರೆ ಮೂಗು ಮುಚ್ಚುವವರು ಒಮ್ಮೆ ಈ ಕೇಂದ್ರಕ್ಕೆ ಭೇಟಿ ನೀಡಬೇಕು. ತ್ಯಾಜ್ಯ ಎಂದರೆ ಕಣ್ಣ ಮುಂದೆ ಬರುವ ಕೊಳೆತ ದುರ್ವಾಸನೆ ಬೀರುವ ಕಸದ ರಾಶಿಯ ದೃಶ್ಯ ಇಲ್ಲಿಲ್ಲ. ಪಕ್ಕದಲ್ಲಿಯೇ ಸರ್ಕಾರಿ ಕಚೇರಿಗಳಿದ್ದರೂ, ಯಾರಿಗೂ ಈ ಕೇಂದ್ರದಿಂದ ತೊಂದರೆಯಾಗಿಲ್ಲ, ವಾಸ್ತವವಾಗಿ ಇಲ್ಲಿ ತ್ಯಾಜ್ಯ ವಿಂಗಡನೆ ನಡೆಯುತ್ತದೆ ಎನ್ನುವುದೇ ಹೊರ ನೋಟಕ್ಕೆ ಕಾಣುವುದೂ ಇಲ್ಲ. ಮಹಿಳೆಯರೇ ನಿರ್ವಹಿಸುತ್ತಿರುವ ಈ ಎಸ್‌ಎ​ಲ್‌​ಆ​ರ್‌ಎಂ ಘಟಕದಲ್ಲಿ ತ್ಯಾಜ್ಯವೆಂದರೆ ಕಸವಲ್ಲ ಅದು ಸಂಪನ್ಮೂಲ ಎಂಬುವುದು ಅಕ್ಷರಃ ಸಾಬೀತು ಮಾಡಿದೆ.

click me!